Rakksh Ram: ಸಿನಿಮಾಗಾಗಿ ಎರಡನೇ ಬಾರಿಗೆ ಹೆಸರು ಬದಲಾಯಿಸಿದ್ರಾ ರಕ್ಷ್? ಈಗಿರುವ ಹೆಸರೇನು?

By ಅನಿತಾ ಬನಾರಿ

'ಪುಟ್ಟ ಗೌರಿ ಮದುವೆ'ಧಾರಾವಾಹಿಯ ಮಹೇಶ್ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟು ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿರುವ ರಕ್ಷ್ ಇದೀಗ ವೇದಾಂತ್ ವಸಿಷ್ಠ ಆಗಿ ಚಿರಪರಿಚಿತ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ವೇದಾಂತ್ ವಸಿಷ್ಠ ಆಗಿ ನಟಿಸುತ್ತಿರುವ ರಕ್ಷ್ ಅವರು ಇದೀಗ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದು ಎರಡನೇ ಬಾರಿ ತಮ್ಮ ಹೆಸರು ಬದಲಾಯಿಸಿದ್ದಾರೆ.

ಚೇತನ್ ಕುಮಾರ್ ಅಭಿನಯದ 'ಬರ್ಮ' ಸಿನಿಮಾದಲ್ಲಿ ನಾಯಕರಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ರಕ್ಷ್ ಅವರು ಇದೀಗ ತಮ್ಮ ಹೆಸರನ್ನು 'ರಕ್ಷ್ ರಾಮ್' ಎಂದು ಬದಲಿಸಿದ್ದಾರೆ. ಅಂದ ಹಾಗೇ ರಕ್ಷ್ ಅವರು ತಮ್ಮ ಹೆಸರು ಬದಲಿಸುತ್ತಿರುವುದು ಇದೇ ಮೊದಲಲ್ಲ.

rakksh-changed-his-name-rakksh-ram

ರಕ್ಷಿತ್ ಗೌಡ ಆಗಿದ್ದರು ರಕ್ಷ್ ಗೌಡ

ರಕ್ಷ್ ಅವರ ನಿಜವಾದ ಹೆಸರು ರಕ್ಷಿತ್ ಗೌಡ. 'ಗಟ್ಟಿಮೇಳ' ಧಾರಾವಾಹಿಯ ನಂತರ ಅವರು ರಕ್ಷ್ (Raksh) ಎಂದು ಬದಲಾಯಿಸಿದ್ದರು. ಅಷ್ಟೇ ಅಲ್ಲದೇ ನ್ಯೂಮರಾಲಜಿ ಪ್ರಕಾರ ತಮ್ಮ ಹೆಸರಿಗೆ ಮಗದೊಂದು K (Rakksh) ಎಂದು ಸೇರಿಸಿದ್ದರು. ಇದೀಗ ಅವರು ಮತ್ತೆ 'ರಕ್ಷ್ ರಾಮ್' ಆಗಿ ಬದಲಾಗಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲಿರೋ ರಕ್ಷ್

ಚೇತನ್ ಕುಮಾರ್ ನಿರ್ದೇಶನದಡಿಯಲ್ಲಿ ಮೂಡಿಬರಲಿರುವ 'ಬರ್ಮ' ಸಿನಿಮಾ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿಯೂ ತೆರೆಯ ಮೇಲೆ ಬರಲಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದೆ. ಅಂದ ಹಾಗೇ ರಕ್ಷ್ ರಾಮ್ ಅವರಿಗೆ ಇದು ಎರಡನೇ ಸಿನಿಮಾ. ಅವರು ಈ ಮೊದಲು ನಾಗೇಂದ್ರ ಮಾಗಡಿ ಅವರ 'ನರಗುಂದ ಬಂಡಾಯ' ಸಿನಿಮಾದಲ್ಲಿ ನಟಿಸಿದ್ದರು.

rakksh-changed-his-name-rakksh-ram

ನಟ ಮಾತ್ರವಲ್ಲ ನಿರ್ಮಾಪಕರು ಹೌದು

'ಗಟ್ಟಿಮೇಳ' ಧಾರಾವಾಹಿಯಲ್ಲಿ ನಾಯಕ ಆಗಿ ನಟಿಸುತ್ತಿರುಗ ರಕ್ಷ್ ರಾಮ್ ಅವರು ನಿರ್ಮಾಪಕರಾಗಿಯೂ ಭಡ್ತಿ ಪಡೆದಿದ್ದಾರೆ. ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿರುವ ರಕ್ಷ್ ರಾಮ್ ಗಟ್ಟಿಮೇಳ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ರಂಗಭೂಮಿ ಕಲಾವಿದರೂ ಹೌದು

ಎಳವೆಯಿಂದಲೂ ನಟನೆಯತ್ತ ವಿಶೇಷ ಒಲವು ಹೊಂದಿದ್ದ ರಕ್ಷ್ ಅವರು ಕಿರುತೆರೆಗೆ ಬರುವ ಮೊದಲು ರಂಗಭೂಮಿಯಲ್ಲಿ ಗುರುತಿಸಿಕೊಂಡ ಪ್ರತಿಭೆ. ತೆನಾಲಿರಾಮ, ಅಕ್ಬರ್ ಬೀರಬಲ್ ಸೇರಿದಂತೆ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ರಕ್ಷ್ ಅವರಿಗೆ ಕಿರುತೆರೆಯಿಂದಲೂ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಮಹಾದಾಸೆ ಇತ್ತು.

ಹಿರಿತೆರೆಯಲ್ಲಿ ನಟಿಸುವ ಕನಸಿತ್ತು

'ಪುಟ್ಟ ಗೌರಿ ಮದುವೆ' ಧಾರಾವಾಹಿಯ ಮೊದಲು ರಕ್ಷ್ ಅವರಿಗೆ ಧಾರಾವಾಹಿಯಲ್ಲಿಯೂ ನಟಿಸುವ ಅವಕಾಶಗಳು ಬಂದಿದ್ದರೂ ಸಿನಿಮಾದತ್ತ ಅವರ ಚಿತ್ತವಿದ್ದ ಕಾರಣ ಅದರ ಬಗ್ಗೆ ಯೋಚಿಸಿರಲಿಲ್ಲ. ಇದರ ಜೊತೆಗೆ ಮಹೇಶ ಪಾತ್ರದಲ್ಲಿ ನಟಿಸುವ ಅವಕಾಶ ಬಂದಾಗ ಸಂತಸವಾಗಿದ್ದಕ್ಕಿಂತಲೂ ಬೇಸರವಾಗಿದ್ದೇ ಹೆಚ್ಚು. ಆದರೆ ಮಹೇಶ ಆಗಿ ಬದಲಾದ ರಕ್ಷ್ ಅದೇ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

More from Filmibeat

English summary
Rakksh changed his name for the second time as Rakksh Ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X