Raksha: ಐಎಎಸ್ ಅಧಿಕಾರಿಯಾಗುವ ಕನಸು ಹೊತ್ತ ಈಕೆಯೀಗ ಕನ್ನಡ, ತೆಲುಗಿನ ಬ್ಯುಸಿ ನಟಿಯರಲ್ಲಿ ಒಬ್ಬರು!

By ಅನಿತಾ ಬನಾರಿ

ಚಿಕ್ಕಂದಿನಿಂದಲೂ ನಟನಾ ಕ್ಷೇತ್ರದಲ್ಲಿ ಏನಾದರೂ ಮಹಾನ್ ಸಾಧನೆಗಳನ್ನು ಮಾಡಬೇಕೆಂದು ಕನಸು ಹೊತ್ತು ಅದೆಷ್ಟೋ ಶ್ರಮವಹಿಸಿ ಕೊನೆಗೂ ನಟನೆಯನ್ನೇ ತಮ್ಮ ವೃತ್ತಿ ಪ್ರವೃತ್ತಿಯಾಗಿಸಿಕೊಂಡಿರುವ ಸಾವಿರ ನಟರು ಇಂದು ನಮ್ಮೊಂದಿಗಿದ್ದಾರೆ. ಅಂತೆಯೇ ಏನು ಆಸೆ-ಕನಸು-ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಬಯಸದೇ ಬಂದ ಭಾಗ್ಯವನ್ನು ಸದುಪಯೋಗಿಸಿ ಈಗ ನಟನೆಯಲ್ಲಿ ಬ್ಯುಸಿಯಾಗಿರುವ ಇನ್ನೂ ನೂರಾರು ನಟ ನಟಿಯರೂ ಇದ್ದಾರೆ. ಅಂಥವರಲ್ಲಿ ಒಬ್ಬರು ನಟಿ ರಕ್ಷಾ.

ಹೌದು 'ರಾಧಾ ರಮಣ' ಧಾರಾವಾಹಿ ಮೂಲಕ ತಮ್ಮ ನಟನ ಜರ್ನಿಯನ್ನು ಆರಂಭಿಸಿದ ಈ ನಟಿ ರಕ್ಷಾ ಅವರು ಮುಂದೆ 'ಪುಟ್ಮಲ್ಲಿ' ಎಂಬ ಕನ್ನಡ ಧಾರಾವಾಹಿಯಲ್ಲಿ ನಾಯಕಿ ಆಗಿಯೂ ಕಾಣಿಸಿಕೊಂಡ ಬೆಡಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರ ಮಾಡುವ ಮೂಲಕ ತಮ್ಮ ಮುದ್ದುಮುಖ ಹಾಗೂ ಮುಗ್ಧ ನಟನೆಯಿಂದ ಕಿರುತೆರೆ ಪ್ರಿಯರ ಮನೆಗೆದ್ದರು.

Raksha dreamed of becoming an IAS officer is know busy actresses in Kannada and Telugu

ಐಎಎಸ್ ಅಧಿಕಾರಿಯಾಗುವ ಆಸೆಯಿತ್ತು

'ರಾಧಾ ರಮಣ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕಿ ಪುಟ್ಮಲ್ಲಿ ಆಗಿ ನಟಿಸುವ ಮೂಲಕ ಪೋಷಕ ಪಾತ್ರದಿಂದ ನಟಿಯಾಗಿ ಈಕೆ ಭಡ್ತಿ ಪಡೆದರು.

ಅಸಲಿಗೆ ರಕ್ಷಾ ಅವರಿಗೆ ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಾಗಬೇಕೆಂಬ ಮಹಾದಾಸೆ ಇತ್ತಂತೆ. ಆದರೆ ಬಯಸದೇ ಬಂದ ಈ ಆ್ಯಕ್ಟಿಂಗ್ ಕೆರಿಯರನ್ನು ಸಂತೋಷದಿಂದ ಸ್ವೀಕರಿಸಿ ಉತ್ತಮ ಅಭಿನಯದ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ರಕ್ಷಾ ಇದೀಗ ಕನ್ನಡ ಮ ಆದರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿ.

ತೆಲುಗಿನಲ್ಲೂ ಮೋಡಿ

ಆಡಿಶನ್‌ಗಳಲ್ಲಿ ಪಾಸ್ ಆದ ರಕ್ಷಾ ಮುಂದೆ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡುತ್ತ ಕಿರುತೆರೆ ಅಂಗಳದಲ್ಲಿ ಸೈ ಎನಿಸಿಕೊಂಡ ಬೆಡಗಿ. 'ಪುಟ್ಮಲ್ಲಿ' ಧಾರಾವಾಹಿಯ ನಂತರ ತೆಲುಗು ಅಂಗಳಕ್ಕೆ ಕಾಲಿಟ್ಟ ಈಕೆ 'ಕೃಷ್ಣವೇಣಿ' ಎಂಬ ಧಾರಾವಾಹಿಯಲ್ಲಿ ನಾಯಕಿ ಮಿಂಚಿದರು. ತದ ನಂತರ ತೆಲುಗಿನ 'ಗುಪ್ಪಡೆಂಥ ಮನಸು' ಎಂಬ ಧಾರಾವಾಹಿಯಲ್ಲಿ ನಾಯಕಿ ವಸುಂಧರ ಆಗಿ ನಟಿಸುತ್ತಿರುವ ಈಕೆ ಮನೋಜ್ಞ ನಟನೆಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನ ಸೆಳೆದು ಬಿಟ್ಟಿದ್ದಾರೆ.

Raksha dreamed of becoming an IAS officer is know busy actresses in Kannada and Telugu

ತೆಲುಗಿನ 'ಗುಪ್ಪೆದಂಥ ಮನಸು' ಧಾರಾವಾಹಿ ಕನ್ನಡ ಭಾಷೆಗೆ ರಿಮೇಕ್ ಆಗಿದ್ದು ಅದರ ಮೂಲಕ ಕನ್ನಡ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸುತ್ತಿದ್ದಾರೆ ರಕ್ಷಾ. ಹೌದು, 'ಗುಪ್ಪೆದಂಥ ಮನಸು' ಧಾರಾವಾಹಿ 'ಹೊಂಗನಸು' ಹೆಸರಿನಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಆ ಮೂಲಕ ಕನ್ನಡ ವೀಕ್ಷಕರನ್ನು ರಂಜಿಸುತ್ತಿದ್ದಾರೆ ರಕ್ಷಾ.

ಇಷ್ಟೇ ಅಲ್ಲದೆ ಬೆಳ್ಳಿತೆರೆಗೂ ಕಾಲಿಟ್ಟ ಈ ನಟಿ 'ಫೋಟೋಗ್ರಾಫರ್ ಪಾಂಡು ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅಶ್ವಿನಿ ಪಲ್ಲಕ್ಕಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಕ್ಷಾ ಅವರು ಕನ್ನಡದಲ್ಲಿ ಒಳ್ಳೊಳ್ಳೆಉ ಪಾತ್ರಗಳು ಬಂದರೆ ಖಂಡಿತವಾಗಿಯೂ ಸಿನಿಮಾದಲ್ಲಿ ಅಭಿನಯಿಸುತ್ತೇನೆ ಎಂದು ಸಂತೋಷದಿಂದ ತಮ್ಮ ಮನದಾಸೆಯನ್ನು ವ್ಯಕ್ತಪಡಿಸುತ್ತಾರೆ.

More from Filmibeat

English summary
Besides Kannada, Raksha, who is busy in foreign television, had a dream of becoming an IAS officer, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X