ರಕ್ಷಕ್ ಹೆಸರನ್ನೇ ಬದಲಿಸಿದ ರಮೋಲಾ, ಮುಜುಗರಕ್ಕೀಡಾದ ಮರಿ ಬುಲೆಟ್..!

ತಮ್ಮ ಮಾತು.. ಹಾವ..ಭಾವಗಳಿಂದ ಸದಾ ಚರ್ಚೆಗೀಡಾದವರು ರಕ್ಷಕ್ ಬುಲೆಟ್. ಹೆಚ್ಚೇನಿಲ್ಲ ಇನ್ನೊಂದ್ ಹತ್ತು‌ ಮಾಸ್ ಡೈಲಾಗ್ ಬಿಟ್ರೆ ಕರ್ನಾಟಕನೇ ನಂದು ಅಂತೇಳಿ, 'ಬಿಗ್ ಬಾಸ್'' ಹತ್ತನೇ ಮನೆಯಲ್ಲಿ ಒಂದು ಹತ್ತು ಇಪ್ಪತ್ತು ದಿನ ಇದ್ದು ಬಂದ ರಕ್ಷಕ್ ಸದ್ಯಕ್ಕೆ ಭಾರೀ ಮುಜುಗರಕ್ಕೊಳಗಾಗಿದ್ದಾರೆ.

ಹೌದು, ಅಸಲಿಗೆ ರಕ್ಷಕ್ ಸದ್ಯ ಭರ್ಜರಿ ಬ್ಯಾಚುಲರ್ಸ್ 2ನಲ್ಲಿ ಭಾಗಿಯಾಗಿದ್ದಾರೆ. ನಮಗೂ ಒಂದ್ ಕನ್ಯೆ ಇದ್ರೇ ಹೇಳಿ ಎಂದು ತಮ್ಮ ಅವತಾರವನ್ನೆಲ್ಲ ಬದಲಿಸಿಕೊಂಡು ರೆಡಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಇವರ ಜೊತೆ ಡ್ರೋನ್ ಪ್ರತಾಪ್, ಗಗನ, ಪವಿ ಪೂವಪ್ಪ ಸೇರಿ ಅನೇಕರು ಇದ್ದಾರೆ. ಕನ್ನಡತಿ, ಸೀತಾರಾಮ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ರಮೋಲಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ರಕ್ಷಕ್ ಬುಲೆಟ್‌ಗೆ ಜೋಡಿಯಾಗಿದ್ದಾರೆ. ಆದರೆ ರಕ್ಷಕ್ ಹೆಸರು ಗೊತ್ತಿದ್ದಾ, ಅವರನ್ನು ನೋಡಿದ ಖುಷಿಯಲ್ಲಿಯಾ ಅಥವಾ ಮರೆತಾ ಗೊತ್ತಿಲ್ಲ, ಭರ್ಜರಿ ಬ್ಯಾಚುಲರ್ಸ್ ಅಂಗಳದಲ್ಲಿ ರಮೋಲಾ ಪೇಚಿಗೆ ಸಿಲುಕಿದ್ದಾರೆ. ರಕ್ಷಕ್ ಅವರನ್ನು ಮುಜುಗರಕ್ಕೀಡು ಮಾಡಿದ್ದಾರೆ.

Rakshak Bullet s Embarrassing Moment on Zee Kannada s Bharjari Bachelors 2 Watch Here

ಹೌದು, ಎರಡನೇ ವಾರಕ್ಕೆ ಕಾಲಿಟ್ಟ ಭರ್ಜರಿ ಬ್ಯಾಚುಲರ್ಸ್‌ನಲ್ಲಿಗ ಟಾಸ್ಕ್ ಶುರುವಾಗಿದೆ. ಇದಕ್ಕೆ ಎಂದೇ ಸ್ಫರ್ಧಿಗಳ ಲುಕ್ ಬದಲಾಯಿಸಲಾಗಿದೆ. ಗ್ರೂಮಿಂಗ್ ಸೆಷನ್‌ಗೆ ಕಳುಹಿಸಲಾಗಿದೆ. ಅದಕ್ಕೂ ಮುನ್ನ ಯಾರು ಯಾರು ಯಾರಿಗೆ ಜೋಡಿ ಎನ್ನುವ ಕುತೂಹಲಕ್ಕೆ ತೆರೆ ಎಳೆಯಲಾಗಿದೆ. ಇದೇ ಸಮಯದಲ್ಲಿ ತಮ್ಮ ಪಾರ್ಟನರ್ ಬಗ್ಗೆ ಮಾತನಾಡಲು ಮುಂದಾದ ರಮೋಲಾ, ರಕ್ಷಕ್ ಎನ್ನುವ ಬದಲು ರಕ್ಷಿತ್ ಎಂದು ಕರೆದಿದ್ದಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್‌ನ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಟ್ರೋಲಿಗರ ಪಾಲಿಗೆ ಆಹಾರ ಕೂಡವಾಗುತ್ತಿದೆ.

ಇನ್ನು ಇದೇ ಪ್ರೋಮೋದಲ್ಲಿ ರಕ್ಷಕ್ ಬುಲೆಟ್‌ಗೆ ಬುಲೆಟ್ ತರ ಇದ್ದೋರು ಈಗ ಬಟರ್ ಫ್ಲೈ ಆಗಿಬಿಟ್ಟಿದ್ದಿರಲ್ಲ ಎಂದು ನಿರೂಪಕ ನಿರಂಜನ್, ಪ್ರಶ್ನೆ ಕೇಳುತ್ತಾರೆ. ಇದಕ್ಕೆ ರಕ್ಷಕ್ ಹುಡುಗಿ ಇಲ್ಲಾ ಅಂದರೆ ಲೈಫ್ ಜೀರೋ ಎಂದು ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಕ್ರೇಜಿಸ್ಟಾರ್ ರವಿಚಂದ್ರನ್, ರಚಿತಾ ರಾಮ್ ಅವರನ್ನು ಇಂಪ್ರೆಸ್ ಕೂಡ ಮಾಡಿದ್ದಾರೆ ರಕ್ಷಕ್ ಬುಲೆಟ್.

ಇನ್ನುಳಿದಂತೆ ರಕ್ಷಕ್ ಬುಲೆಟ್‌ ಅವರನ್ನು ಹೊರತು ಪಡಿಸಿದರೆ, ಗಿಲ್ಲಿ ನಟ, ಡ್ರೋನ್ ಪ್ರತಾಪ್, ಹುಲಿ ಕಾರ್ತಿಕ್, ಪ್ರವೀಣ್ ಜೈನ್, ಭುವನೇಶ್, ಸುನಿಲ್, ದರ್ಶನ್ ನಾರಾಯಣ್, ಪ್ರೇಮ್ ತಾಪ, ಸೂರ್ಯ, ಉಲ್ಲಾಸ್, ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಇದ್ದಾರೆ. ಇವರ ಜೊತೆ ರಮೋಲಾ, ಸುಕೃತಾ ನಾಗ್, ಗಗನ, ವಿಜಯಲಕ್ಷ್ಮಿ, ಪವಿ ಪೂವಪ್ಪ, ಅಮೃತಾ ನಾಯಕ್, ಧನ್ಯಶ್ರೀ, ಅನನ್ಯಾ ಅಮರ್ ಈ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದಾರೆ.

ಇನ್ನು ಜೀ ಕನ್ನಡದಲ್ಲಿ ಕಳೆದ ಕೆಲವು ವರ್ಷಗಳಿಂದ ರಿಯಾಲಿಟಿ ಶೋಗಳು, ಗೇಮ್‌ ಶೋಗಳಿಂದ ವೀಕ್ಷಕರ ಮನಗೆಲ್ಲುತ್ತಿದೆ. ಡ್ರಾಮಾ ಜೂನಿಯರ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಜೋಡಿ ನಂಬರ್ 1 ಮತ್ತು ಸೂಪರ್ ಕ್ವೀನ್ ನಂತಹ ಸೂಪರ್‌ ಹಿಟ್ ಶೋಗಳನ್ನು ನೀಡಿದೆ.'ಭರ್ಜರಿ ಬ್ಯಾಚುಲರ್ಸ್' ಆ ಪೈಕಿ ಒಂದು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X