ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.!

By Harshitha

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನ ಸಾಧಕರ ಸೀಟ್ ಮೇಲೆ ಕೂರಿಸಿ, ಅವರ ಮುಂದೆಯೇ ಅವರ ಹೆಜ್ಜೆಗುರುತುಗಳನ್ನು ಅನಾವರಣ ಮಾಡುವ ವಿಶಿಷ್ಟ ಶೋ 'ವೀಕೆಂಡ್ ವಿತ್ ರಮೇಶ್'

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಅಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯಲ್ಲಿ ಈಗಾಗಲೇ ಕನ್ನಡ ಚಿತ್ರರಂಗದಿಂದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನವರಸ ನಾಯಕ ಜಗ್ಗೇಶ್, ಪ್ರಕಾಶ್ ರೈ, ಅರ್ಜುನ್ ಜನ್ಯ, ವಿ.ಹರಿಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು. ಈಗ ಅದೇ ಲಿಸ್ಟ್ ಗೆ ಚಿತ್ರರಂಗದ 'ಯುವ ಸಾಧಕರು' ಸೇರಿಕೊಳ್ಳಲಿದ್ದಾರೆ. ಮುಂದೆ ಓದಿ....

ಈ 'ವೀಕೆಂಡ್'ನಲ್ಲಿ 'ಸಿಂಪಲ್ ಸ್ಟಾರ್'

ಈ 'ವೀಕೆಂಡ್'ನಲ್ಲಿ 'ಸಿಂಪಲ್ ಸ್ಟಾರ್'

ಈ 'ವೀಕೆಂಡ್'ನಲ್ಲಿ ಸಾಧಕರ ಸೀಟ್ ಮೇಲೆ ಕೂರುವವರು 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ. ಇದೇ ಶನಿವಾರ ರಾತ್ರಿ 9 ಗಂಟೆಗೆ ರಕ್ಷಿತ್ ಶೆಟ್ಟಿ ಭಾಗವಹಿಸಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಅಗಲಿದೆ. [ಸಾಧಕರ ಸೀಟ್ ಮೇಲೆ ಕುಳಿತ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ.!]

'ಕಿರಿಕ್' ತಂಡ

'ಕಿರಿಕ್' ತಂಡ

ರಕ್ಷಿತ್ ಶೆಟ್ಟಿ ರವರ ಜೀವನ ಚರಿತ್ರೆ ಅನಾವರಣ ಆಗಲಿರುವ ಈ ಸಂಚಿಕೆಯಲ್ಲಿ 'ಕಿರಿಕ್ ಪಾರ್ಟಿ' ಚಿತ್ರತಂಡದಿಂದ ರಿಶಬ್ ಶೆಟ್ಟಿ, ಸಂಯುಕ್ತ ಹೆಗಡೆ, ಅಜನೀಶ್ ಲೋಕನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ಭಾನುವಾರ 'ಪ್ರಿಯಾಮಣಿ' ಸ್ಪೆಷಲ್

ಭಾನುವಾರ 'ಪ್ರಿಯಾಮಣಿ' ಸ್ಪೆಷಲ್

ಇನ್ನೂ ಭಾನುವಾರ ರಾತ್ರಿ 9 ಗಂಟೆಗೆ ಸಾಧಕರ ಸೀಟ್ ಮೇಲೆ ಕೂರುವವರು ಬೆಂಗಳೂರಿನ ಬೆಡಗಿ ಪ್ರಿಯಾಮಣಿ. ['ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟಲ್ಲಿ ಪಂಚಭಾಷಾ ತಾರೆ]

ಪ್ರಿಯಾಮಣಿ ಲೈಫ್ ಸ್ಟೋರಿ

ಪ್ರಿಯಾಮಣಿ ಲೈಫ್ ಸ್ಟೋರಿ

ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಪ್ರಿಯಾಮಣಿ.... ಬಣ್ಣದ ಬದುಕಿಗೆ ಕಾಲಿಟ್ಟು ರಾಷ್ಟ್ರ ಪ್ರಶಸ್ತಿ ಪಡೆದ ಸಾಧನೆಯ ಕಥೆ ಈ ವಾರಾಂತ್ಯದಲ್ಲಿ ತೆರೆದುಕೊಳ್ಳಲಿದೆ.

More from Filmibeat

English summary
Kannada Actor Rakshit Shetty and Actress Priyamani has taken part in Zee Kannada Channel's popular show Weekend with Ramesh-3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X