ನಿರ್ದೇಶಕ 'ಸಿಂಪಲ್' ಸುನಿ ಜನಪ್ರಿಯರಾದ್ಮೇಲೆ ಬದಲಾದರಂತೆ.!

By Harshitha

'ಸಿಂಪಲ್ ಹುಡುಗ' ರಕ್ಷಿತ್ ಶೆಟ್ಟಿ ಏಕ್ದಂ ಸ್ಟಾರ್ ಪಟ್ಟಕ್ಕೆ ಏರಿದ್ದು ನಿರ್ದೇಶಕ ಸುನಿ ಆಕ್ಷನ್ ಕಟ್ ಹೇಳಿದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ ಹಿಟ್ ಆದ್ಮೇಲೆ.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ನಿರ್ದೇಶಕ ಸುನಿ, ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಶ್ವೇತಾ ಶ್ರೀವಾತ್ಸವ್ ಜನಪ್ರಿಯತೆ ಪಡೆದರು.

ಹೀಗೆ ಪಾಪ್ಯುಲಾರಿಟಿ ಪಡೆದ ಬಳಿಕ ನಿರ್ದೇಶಕ ಸುನಿ ಬದಲಾದರಂತೆ. ಹಾಗಂತ ಸ್ವತಃ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಅದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಮುಂದೆ ಓದಿರಿ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಕ್ಷಿತ್-ರಶ್ಮಿಕಾ

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಕ್ಷಿತ್-ರಶ್ಮಿಕಾ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅತಿಥಿಗಳಾಗಿ ಭಾಗವಹಿಸಿದರು.

ದಿಢೀರ್ ಬೆಂಕಿ ಸುತ್ತಿನಲ್ಲಿ....

ದಿಢೀರ್ ಬೆಂಕಿ ಸುತ್ತಿನಲ್ಲಿ....

ಕಾರ್ಯಕ್ರಮದ ದಿಢೀರ್ ಬೆಂಕಿ ಸುತ್ತಿನಲ್ಲಿ ''ನಿಮ್ಮ ಪ್ರಕಾರ ಯಾವ ಆರ್ಟಿಸ್ಟ್ ಪಾಪ್ಯುಲರ್ ಆದ್ಮೇಲೆ ಚೇಂಜ್ ಆದರು'' ಎಂದು ನಿರೂಪಕ ಅಕುಲ್ ಬಾಲಾಜಿ ಪ್ರಶ್ನೆ ಕೇಳಿದರು. ಅದಕ್ಕೆ 'ಸುನಿ' ಎಂದುಬಿಟ್ಟರು ನಟ ರಕ್ಷಿತ್ ಶೆಟ್ಟಿ.

ಬದಲಾಗಿದ್ದು ಒಳ್ಳೆಯ ಕಾರಣಕ್ಕೆ...

ಬದಲಾಗಿದ್ದು ಒಳ್ಳೆಯ ಕಾರಣಕ್ಕೆ...

ಜನಪ್ರಿಯತೆ ಪಡೆದ ಮೇಲೆ ಸುನಿ ಬದಲಾದರು ಅಂತ ರಕ್ಷಿತ್ ಶೆಟ್ಟಿ ಹೇಳಿದ್ದು ನಿಜ. ಆದ್ರೆ, ಅದು ಒಳ್ಳೆಯ ಕಾರಣಕ್ಕೆ ಅಂತ ಹೇಳಲು ರಕ್ಷಿತ್ ಶೆಟ್ಟಿ ಮರೆಯಲಿಲ್ಲ.

ರಕ್ಷಿತ್ ಶೆಟ್ಟಿ ಕೊಟ್ಟ ಕಾರಣ ಇದು

ರಕ್ಷಿತ್ ಶೆಟ್ಟಿ ಕೊಟ್ಟ ಕಾರಣ ಇದು

''ಅವಾಗೆಲ್ಲ ನಾವು ಅವರಿಗೆ (ಸುನಿ) ಏನಾದರೂ ಬಟ್ಟೆ ಹಾಕಿಕೊಳ್ಳೋಕೆ ಹೇಳಿದರೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಈಗ ತುಂಬಾ ಸ್ಟೈಲಿಶ್ ಆಗ್ಬಿಟ್ಟಿದ್ದಾರೆ'' ಎಂಬ ವಿವರಣೆ ನೀಡಿದರು ರಕ್ಷಿತ್ ಶೆಟ್ಟಿ. ಅಂದ್ರೆ, ಜನಪ್ರಿಯತೆ ಪಡೆದ ಮೇಲೆ ಸುನಿ ಸ್ವಲ್ಪ ಸ್ಟೈಲಿಶ್ ಆಗಿ ಬದಲಾದರು ಎಂಬುದು ರಕ್ಷಿತ್ ಶೆಟ್ಟಿ ಮಾತಿನ ಅರ್ಥ.

More from Filmibeat

English summary
Kannada Actor Rakshit Shetty speaks about Director Simple Suni in Colors Super Channel's popular show Super Talk Time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X