»   » 'ಥಗ್ಸ್ ಆಫ್ ಮಾಲ್ಗುಡಿ' ತಡವಾಗಲು ನಾನೇ ಕಾರಣ ಎಂದು ಒಪ್ಪಿಕೊಂಡ ರಕ್ಷಿತ್

'ಥಗ್ಸ್ ಆಫ್ ಮಾಲ್ಗುಡಿ' ತಡವಾಗಲು ನಾನೇ ಕಾರಣ ಎಂದು ಒಪ್ಪಿಕೊಂಡ ರಕ್ಷಿತ್

Posted By:
Subscribe to Filmibeat Kannada

'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಶನ್ ನಲ್ಲಿ ಮೂಡಿ ಬರಬೇಕಿದ್ದ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆಯಷ್ಟೇ ಹರಿದಾಡಿತ್ತು.

ಬಳಿಕ, ''ರಕ್ಷಿತ್ ಶೆಟ್ಟಿ ಬಿಜಿಯಿದ್ದಾರೆ. ಇನ್ನು ಮುಂದೆ ಈ ಸಿನಿಮಾ ಮಾಡೋದು ಕಷ್ಟವಾಗಬಹುದೇನೋ'' ಅಂತ ಸುದೀಪ್ ಹೇಳಿದ್ಮೇಲೆ 'ಥಗ್ಸ್ ಆಫ್ ಮಾಲ್ಗುಡಿ' ಚಿತ್ರಕ್ಕೆ ಫುಲ್ ಸ್ಟಾಪ್ ಬಿದ್ದ ಹಾಗೆ ಅಂತ ಹಲವರು ಭಾವಿಸಿದ್ದರು.

'ಥಗ್ಸ್ ಆಫ್ ಮಾಲ್ಗುಡಿ' ಗೊಂದಲಕ್ಕೆ ಬ್ರೇಕ್ ಹಾಕಿದ ಸುದೀಪ್

ಆದ್ರೆ, ಅದೇ ವಾಸ್ತವ ಅಲ್ಲ. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಮುಂದಕ್ಕೆ ಹೋಗಿದೆ ಅಷ್ಟೆ ಹೊರತು ಸಿನಿಮಾ ನಿಂತಿಲ್ಲ. ಅದಕ್ಕೆ ಸಾಕ್ಷಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಹೇಳಿರುವ ಮಾತುಗಳು.... ಮುಂದೆ ಓದಿರಿ...

'ಥಗ್ಸ್ ಆಫ್ ಮಾಲ್ಗುಡಿ' ಬಗ್ಗೆ ರಕ್ಷಿತ್ ಮಾತು

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾದ ಬಗ್ಗೆ ಮಾತನಾಡಿದರು.

ತಡವಾಗಲು ನಾನೇ ಕಾರಣ

''ಪ್ಲಾನ್ ಪ್ರಕಾರ, ಕಳೆದ ವರ್ಷವೇ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಮಾಡಬೇಕಿತ್ತು. ಆದ್ರೆ, ನನ್ನ ಕಡೆಯಿಂದ ತುಂಬಾ ಡಿಲೇ ಆಗಿದೆ'' ಎಂದರು ನಟ ರಕ್ಷಿತ್ ಶೆಟ್ಟಿ.

ಸ್ಕ್ರಿಪ್ಟ್ ಮಾಡುತ್ತೇನೆ

''ಅವನೇ ಶ್ರೀಮನ್ನಾರಾಯಣ' ಸಿನಿಮಾ ಮುಗಿಸಿ, ಮೂರು ತಿಂಗಳು ಬ್ರೇಕ್ ತಗೊಂಡು 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಸ್ಕ್ರಿಪ್ಟ್ ಮುಗಿಸುತ್ತೇನೆ'' ಅಂತ ಹೇಳುವ ಮೂಲಕ 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ನಿಂತಿಲ್ಲ ಎಂಬುದನ್ನ ರಕ್ಷಿತ್ ಶೆಟ್ಟಿ ಸ್ಪಷ್ಟ ಪಡಿಸಿದರು.

ಪ್ರಾಜೆಕ್ಟ್ ಡ್ರಾಪ್ ಆಗಿಲ್ಲ

'ಥಗ್ಸ್ ಆಫ್ ಮಾಲ್ಗುಡಿ' ಪ್ರಾಜೆಕ್ಟ್ ಡ್ರಾಪ್ ಆಗಿಲ್ಲ. 'ಥಗ್ಸ್ ಆಫ್ ಮಾಲ್ಗುಡಿ' ಸಿನಿಮಾ ಸುದೀಪ್ ಗೆ ಬಿಟ್ಟರೆ ಬೇರೆ ಯಾರಿಗೂ ಸೂಟ್ ಆಗಲ್ಲ ಎಂದು ರಕ್ಷಿತ್ ಶೆಟ್ಟಿ ಈ ಹಿಂದೆ ಕೂಡ ಹೇಳಿದ್ದರು.

English summary
Kannada Actor Rakshit Shetty speaks about 'Thugs of Malgudi' cinema.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada