ಕನ್ನಡದ ಈ ನಟಿಯರು ಸಂಸಾರ ನಡೆಸುವುದರಲ್ಲೂ ಬ್ಯುಸಿ.. ನಟನೆಯಲ್ಲೂ ಬ್ಯುಸಿ

By ಅನಿತಾ ಬನಾರಿ

ತಾಯಿಯಾಗಿರುವುದು ಮತ್ತು ವೃತ್ತಿಪರರಾಗಿರುವುದು ಅಂದುಕೊಂಡಷ್ಟು ಸುಲಭವಲ್ಲ. ವಿಶೇಷವಾಗಿ ಹೊಸ ತಾಯಂದಿರಿಗೆ ತಮ್ಮ ಅಂಬೆಗಾಲಿಡುವ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸ ಮಾಡಲು ಸಾಕಷ್ಟು ಕಾರ್ಯ ಕೌಶಲದ ಅಗತ್ಯವಿರುತ್ತದೆ. ಈ ವಿಚಾರದಲ್ಲಿ ಕನ್ನಡದ ನಟಿಯರೂ ಹೊರತಲ್ಲ.

ಕನ್ನಡದ ನಟಿಯರು ಸಿನಿಮಾ, ಧಾರಾವಾಹಿ ಅಂತ ಎಷ್ಟು ಬ್ಯುಸಿಯಾಗಿರುತ್ತಾರೋ ಅಷ್ಟೇ ತಮ್ಮ ಮಕ್ಕಳನ್ನು ಪ್ರೀತಿಸುತ್ತಾರೆ. ಇವರಿಗೆ ನಟನೆ ಮೇಲಿನ ಉತ್ಸಾಹ ಎಷ್ಟಿದೆಯೋ ಅಷ್ಟೇ ಮಕ್ಕಳು ಹಾಗೂ ಸಂಸಾರದ ಮೇಲೆ ಕಾಳಜಿಯೂ ಇರುತ್ತೆ. ಅತ ಅಮ್ಮಂದಿರನ್ನು ನಾವಿಂದು ನೋಡೋಣ....

Rakshita Prem, Shwetha Chengappa, Shalini, Amrutha and others balancing acting and motherhood

ರಕ್ಷಿತಾ ಪ್ರೇಮ್

ಕನ್ನಡ ಚಲನಚಿತ್ರೋದ್ಯಮದಲ್ಲಿ ನಿರ್ಮಾಪಕಿ ಮತ್ತು ಯಶಸ್ವಿ ನಟಿಯಾಗಿರುವ ರಕ್ಷಿತಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ತಮ್ಮ ಕೆಲಸದ ನಡುವೆ ಸೂಪರ್‌ಮಾಮ್ ಆಗಿ ಸಂಸಾರವನ್ನೂ ನಿಭಾಯಿಸುತ್ತಾರೆ. ಕೆಲಸದಲ್ಲಿ ಬ್ಯುಸಿಯಾಗಿದ್ದರೂ, ರಕ್ಷಿತಾ ಯಾವಾಗಲೂ ತನ್ನ ಮಗನಿಗಾಗಿ ಸಮಯ ನೀಡುತ್ತಾರೆ. ತಾಯಿ ಹಾಗೂ ಮಗ ಇಬ್ಬರೂ ಸ್ನೇಹಿತರಂತೆ ಇರೋದನ್ನು ಕಾಣಬಹುದು.

ಶಾಲಿನಿ ಸತ್ಯನಾರಾಯಣ

ಕಿರುತೆರೆಯಲ್ಲಿ ಶಾಲಿನಿ ಸತ್ಯನಾರಾಯಣ ಸಿಕ್ಕಾಪಟ್ಟೆ ಫೇಮಸ್. ನಟನೆ ಇರಲಿ, ನಿರೂಪಣೆ ಇರಲಿ ಎರಡಕ್ಕೂ ಇವರು ಸೈ. ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರೂ, ಶಾಲಿನಿ ಕುಟುಂಬಕ್ಕೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಮಗಳನ್ನು ಉತ್ತಮ ಸ್ನೇಹಿತೆಯಂತೆ ನೋಡುತ್ತಾರೆ.

ಶ್ವೇತಾ ಚಂಗಪ್ಪ

ಶ್ವೇತಾ ತನ್ನ ನಿಜ ಜೀವನದಲ್ಲೂ ಸ್ಟಾರ್ ಅಮ್ಮ. ಅವರು ಶೂಟಿಂಗ್‌ಗಾಗಿ ದೂರದಲ್ಲಿರುವಾಗ ಅವರ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಅವರ ಮೂರು ವರ್ಷದ ಮಗನನ್ನು ನೋಡಿಕೊಳ್ಳುತ್ತಾರೆ. ಹಾಗಿದ್ದರೂ, ನಟಿ ದೂರದಲ್ಲಿರುವಾಗ ವಿಡಿಯೋ ಕರೆಗಳ ಮೂಲಕ ಕುಟುಂಬದೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಮತ್ತೊಂದೆಡೆ, ಶ್ವೇತಾ ತನ್ನ ಮಗುವಿನ ಎಲ್ಲಾ ಹಂತದಲ್ಲೂ ಜೊತೆಯಾಗಿದ್ದಾರೆ. ತಾಯ್ತನದ ಆ ಮಧುರ ಕ್ಷಣಗಳನ್ನು ಅನುಭವಿಸಿದ್ದಾರೆ.

Rakshita Prem, Shwetha Chengappa, Shalini, Amrutha and others balancing acting and motherhood

ಅಮೃತಾ ರಾಮಮೂರ್ತಿ

ಅಮೃತಾ ತಮ್ಮ ಮುದ್ದು ಮಗಳು ಧೃತಿಯ ಲಾಲನೆ ಪಾಲನೆಗಾಗಿ ನಟನಾ ವೃತ್ತಿಜೀವನದಿಂದ ವಿರಾಮ ತೆಗೆದುಕೊಂಡಿದ್ದರು. ಕೊಂಚ ವಿರಾಮದ ನಂತರ ಇದೀಗ 'ಕೆಂಡಸಂಪಿಗೆ' ಧಾರಾವಾಹಿಯೊಂದಿಗೆ ಮತ್ತೆ ನಟನೆಗೆ ಮರಳಿದ್ದಾರೆ. ವಿಲನ್ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಬ್ಯಾಕ್-ಟು-ಬ್ಯಾಕ್ ಶೂಟಿಂಗ್ ಮತ್ತು ಇತರ ಕೆಲಸದ ಬದ್ಧತೆಗಳೊಂದಿಗೆ, ತನ್ನ ಅಂಬೆಗಾಲಿಡುವ ಹೆಣ್ಣು ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ನಯನಾ ಕೆಎಂ

ನಟಿ, ವಾಣಿಜ್ಯೊದ್ಯಮಿ ಮತ್ತು ಬ್ಲಾಗರ್ ಆಗಿರುವ ನಯನಾ ಅಮ್ಮನಾಗಿಯೂ ಯಶಸ್ವಿಯಾಗಿದ್ದಾರೆ. ನಯನಾ ತಮ್ಮ ಮಗ ಪ್ರಯಾನ್‌ನನ್ನು ಸಂಭಾಳಿಸುವುದರ ಜೊತೆಗೆ ವೃತ್ತಿ ಬದುಕಿನೆಡೆಗೂ ಗಮನ ಹರಿಸಿದ್ದರು. ಮಗುವಿನ ಆರೈಕೆಯಲ್ಲಿ ಯಾವುದೇ ಎಡವಟ್ಟಾಗಬಾರದು ಎಂಬ ಕಾರಣಕ್ಕೆ ಮಗು ಪ್ರಯಾನ್‌ಗಾಗಿಯೇ ವಿಶೇಷ ವೇಳಾಪಟ್ಟಿಯನ್ನೂ ಸಿದ್ಧಪಡಿಸಿಕೊಂಡಿದ್ದಾರೆ.

ವಾಣಿಶ್ರೀ

ವಾಣಿಶ್ರೀ ತನ್ನ ರೀಲ್ ಜೀವನದಲ್ಲಿ ಹೆಚ್ಚಾಗಿ ತಾಯಿಯ ಪಾತ್ರವನ್ನು ಮಾಡುವಂತೆ, ನಿಜ ಜೀವನದಲ್ಲಿಯೂ ತಾಯಿಯಾಗಿ ತನ್ನ ಮಗಳೊಂದಿಗೆ ಸಮಯ ಕಳೆಯುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಮಸ್ ಆಗಿರುವ ಈ ನಟಿ 'ಕುಶಿ'ಯ ತಾಯಿ. ವಾಣಿಶ್ರೀ ತಮ್ಮ ಮಗಳನ್ನು ಏಕಾಂಗಿಯಾಗಿ ಬೆಳೆಸಿದ್ದಾರೆ. ಇಂದು, ಕುಶಿ ತನ್ನದೇ ಆದ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯನ್ನು ಬೆಳೆಸುವುದರೊಂದಿಗೆ ತನ್ನ ತಾಯಿ ಹೆಮ್ಮೆಪಡುವಂತೆ ಮಾಡಿದ್ದಾರೆ.

ರೂಪಾ ಪ್ರಭಾಕರ್

ರೂಪಾ ತನ್ನ ಸ್ವಂತ ಚಿತ್ರೀಕರಣದ ಸಮಯವನ್ನು ಮಾತ್ರವಲ್ಲದೇ ತನ್ನ ಮಗನ ಚಿತ್ರೀಕರಣದ ಸಮಯವನ್ನು ಸಹ ನಿರ್ವಹಿಸಬೇಕಾಗುತ್ತದೆ. ಆಲಾಪ್ ಅವರ ಚಿತ್ರೀಕರಣಕ್ಕೆ ರೂಪಾ ಅವರು ಜೊತೆಗಿರುವ ಸಂದರ್ಭಗಳೂ ಇವೆ.

ಯಮುನಾ ಶ್ರೀನಿಧಿ

ಯಮುನಾ ಬಹುತೇಕ ಧಾರಾವಾಹಿಗಳಲ್ಲಿ ಜವಾಬ್ದಾರಿಯುತ ತಾಯಿಯ ಪಾತ್ರವನ್ನು ನಿಭಾಯಿಸುತ್ತಾರೆ. ಅಲ್ಲದೆ ನಿಜ ಜೀವನದಲ್ಲೂ ಎರಡು ಮಕ್ಕಳ ಹೆಮ್ಮೆಯ ತಾಯಿಯಾಗಿದ್ದಾರೆ. ಮತ್ತು ತನ್ನ ಮಕ್ಕಳಿಗಾಗಿ ಎಂದಿಗೂ ಸಿಗುವುದರಲ್ಲಿ ವಿಫಲರಾಗಲಿಲ್ಲ. ಅದು ಶಿಕ್ಷಣ ಅಥವಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಾಗಿರಲಿ, ನಟಿ ತನ್ನ ಮಕ್ಕಳನ್ನು ಅವರ ಉತ್ಸಾಹವನ್ನು ಎಂದಿಗೂ ಪ್ರೋತ್ಸಾಹಿಸುತ್ತಾರೆ.

More from Filmibeat

English summary
Rakshita Prem, Shwetha Chengappa, Shalini, Amrutha and others balancing acting and motherhood, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X