DKD: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಬಗ್ಗೆ ರಕ್ಷಿತಾ ಪ್ರೇಮ್ ಭಾವನಾತ್ಮಕ ಪೋಸ್ಟ್.. ಅದರಲ್ಲೇನಿದೆ?

By ಅನಿತಾ ಬನಾರಿ

ನಟಿ ರಕ್ಷಿತಾ ಪ್ರೇಮ್ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರಾಂಡ್ ಫಿನಾಲೆ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೌದು, ನಟಿ ರಕ್ಷಿತಾ ಪ್ರೇಮ್ ಅವರು ಇತ್ತೀಚಿಗೆ ಬಹಳಷ್ಟು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಶಕದ ಹಿಂದೆ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ ರಕ್ಷಿತಾ ಅವರು ನಂತರ ಡೈರೆಕ್ಟರ್ ಪ್ರೇಮ್ ಅವರನ್ನು ವಿವಾಹವಾದರು. ಅದಾದ ಮೇಲೆ ಸಿನಿಮಾದಿಂದ ದೊಡ್ಡ ಬ್ರೇಕ್ ತೆಗೆದುಕೊಂಡ ರಕ್ಷಿತಾ ತಮ್ಮ ವೈಯಕ್ತಿಕ ಜೀವನದ ಕಡೆಗೆ ಹೆಚ್ಚು ಗಮನ ಹರಿಸಿದರು.

ಇತ್ತೀಚೆಗೆ ಹಲವಾರು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಿರುತೆರೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರುವ ಇವರು ತುಂಬಾ ಸೋಶಿಯಲ್ ಮೀಡಿಯಾದಲ್ಲೂ ಕೂಡಾ ಸಕತ್ ಆ್ಯಕ್ಟೀವ್ ಆಗಿ ಇದ್ದಾರೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ರಿಯಾಲಿಟಿ ಶೋ ಬಗ್ಗೆ ಇದೀಗ ಭಾವನಾತ್ಮಕ ಪೋಸ್ಟ್ ಒಂದನ್ನು ಶೇರ್ ಮಾಡಿದ್ದು ರಿಯಾಲಿಟಿ ಶೋ ನ ಎಲ್ಲಾ ಕಂಟೆಸ್ಟೆಂಟ್‌ಗಳಿಗೆ ಶುಭ ಹಾರೈಸಿದ್ದಾರೆ.

rakshita-prem-dance-karnataka-dance

ಅಂದ್ಹಾಗೆ, ನಟಿ ರಕ್ಷಿತಾ ಪ್ರೇಮ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟೀವ್ ಆಗಿದ್ದು ತಮ್ಮ ಫ್ಯಾನ್ಸ್ ಗಳೊಂದಿಗೆ ಸದಾ ಕನೆಕ್ಟ್ ಆಗಿ ಇರಲು ಬಯಸುವವರು. ಆಗಾಗ ಪೋಸ್ಟ್‌ಗಳನ್ನು ಹಾಕುತ್ತಾ, ಫ್ಯಾನ್‌ಗಳೊಂದಿಗೆ ಮಾತನಾಡುತ್ತಾ ಒಳ್ಳೆಯ ಸಂಬಂಧವನ್ನು ಏರ್ಪಡಿಸಿಕೊಂಡಿದ್ದಾರೆ.

ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೆಮಿ ಫಿನಾಲೆ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದು, "ಇನ್ನೇನು ಸೆಮಿ ಫಿನಾಲೆ ಶೂಟಿಂಗ್ ನಡೆಯುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳಿವೆ .ಎಲ್ಲಾ ಕಂಟೆಸ್ಟೆಂಟ್‌ಗಳು ಅವರ ಬೆಸ್ಟ್ ಅನ್ನು ನೀಡಲು ಶ್ರಮಿಸುತ್ತಿದ್ದಾರೆ. ಎಲ್ಲರಿಗೂ ಶುಭವಾಗಲಿ. ಖಂಡಿತ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯಕ್ತಿಕ ಟ್ಯಾಲೆಂಟ್ ಇದೆ. ಅವರ ಪರಿಶ್ರಮ ಹಾಗೂ ಡೆಡಿಕೇಶನ್ ಅವರ ಪರ್ಫಾರ್ಮೆನ್ಸ್ ನಲ್ಲಿ ಕಾಣಲಿದೆ" ಎಂದು ರಕ್ಷಿತಾ ಪ್ರೇಮ್ ಬರೆದುಕೊಂಡಿದ್ದಾರೆ.

rakshita-prem-dance-karnataka-dance

ಅಂದ ಹಾಗೆ ನಟಿ ರಕ್ಷಿತಾ ಪ್ರೇಮ್ ಅವರು 'ಅಪ್ಪು', 'ಇಡಿಯಟ್', 'ಕಲಾಸಿಪಾಳ್ಯ', 'ಅಯ್ಯಾ', 'ಸುಂಟರಗಾಳಿ', 'ತನನಂ ತನನಂ', 'ಡೆಡ್ಲಿ ಸೋಮ', 'ನೀನೆಲ್ಲೋ ನಾನಲ್ಲೆ', 'ಲವ್' ಮುಂತಾದ ಹಲವಾರು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

More from Filmibeat

English summary
Rakshita Prem talks about emotional journey of Dance Karnataka Dance Reality Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X