ಗಣೇಶ್, ಯಶ್ ನಂತರ 'ಕೋಟ್ಯಧಿಪತಿ'ಗೆ ಬಂದ ಮತ್ತೊಬ್ಬ ಸ್ಟಾರ್
Recommended Video

Kannadada Kotyadipathi season 3 :ಹಾಟ್ ಸೀಟ್ ಮೇಲೆ ಮತ್ತೊಬ್ಬ ಸ್ಟಾರ್ ನಟ..! | Oneindia Kannada
'ಕನ್ನಡದ ಕೋಟ್ಯಧಿಪತಿ' ಮೂರನೇ ಆವೃತ್ತಿಯಲ್ಲಿ ಸೆಲೆಬ್ರಿಟಿಗಳಿಗಿಂತ ಜನಸಾಮಾನ್ಯರಿಗೆ ಹೆಚ್ಚು ಮಣೆ ಹಾಕಲಾಗಿದೆ. ಇಲ್ಲಿಯವರೆಗೂ ಈ ಶೋನಲ್ಲಿ ಭಾಗವಹಿಸಿದ್ದು ಕೇವಲ ಇಬ್ಬರೇ ಸ್ಟಾರ್ ನಟರು.
ಸದ್ಯ, ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿ 50ನೇ ಸಂಚಿಕೆಯ ಸನಿಹದಲ್ಲಿದೆ. ಈ ವಿಶೇಷ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರನ್ನ ವಿಶೇಷ ಸ್ಪರ್ಧಿಯಾಗಿಸುತ್ತಿದೆ.
ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಾಕಿಂಗ್ ಸ್ಟಾರ್ ಯಶ್ ನಂತರ ಈಗ ಮೂರನೇ ಸೆಲೆಬ್ರಿಟಿ ಸ್ಪರ್ಧಿಯಾಗಿ ರಕ್ಷಿತ್ ಶೆಟ್ಟಿ ಆಗಮಿಸಿದ್ದಾರೆ.

ರಕ್ಷಿತ್ ಶೆಟ್ಟಿ ಕನ್ನಡದ ಕೋಟ್ಯಧಿಪತಿಗೆ ಸ್ಪರ್ಧಿಯಾಗಿ ಬಂದಿರುವ, ಪ್ರೋಮೋ ಪ್ರಸಾರವಾಗುತ್ತಿದೆ. ಬಹುಶಃ ಈ ವಾರದ ಕೊನೆಯಲ್ಲಿ ರಕ್ಷಿತ್ ಶೆಟ್ಟಿಯ ಸಂಚಿಕೆ ಪ್ರಸಾರವಾಗಬಹುದು.
ರಾಕಿಂಗ್ ಸ್ಟಾರ್ ಯಶ್ 25 ಲಕ್ಷ ಗೆದ್ದಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ 12.5 ಲಕ್ಷ ಗೆದ್ದಿದ್ದರು. ಇದೀಗ, ರಕ್ಷಿತ್ ಶೆಟ್ಟಿ ಎಷ್ಟು ಗೆಲ್ತಾರೆ ಎಂಬುದು ಕುತೂಹಲ ಮೂಡಿಸಿದೆ.
More from Filmibeat
English summary
kannada actor Rakshith Shetty is 3rd celebrity contestant in 'Kannadada Kotyadhipathi season 3'.
rakshith shetty ramesh aravind kannadada kotyadhipathi season 3 suvarna channel tv ರಕ್ಷಿತ್ ಶೆಟ್ಟಿ ರಮೇಶ್ ಅರವಿಂದ್ ಕನ್ನಡದ ಕೋಟ್ಯಾಧಿಪತಿ 3 ಸುವರ್ಣ ವಾಹಿನಿ ಟಿವಿ


Click it and Unblock the Notifications











