ಟಿವಿಯಲ್ಲಿ ಬರ್ತಿದೆ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ'
ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ರಿಲೀಸ್ ಆಗಿ ಇನ್ನು ಒಂದು ತಿಂಗಳಾಗಿಲ್ಲ, ಆಗಲೆ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಹೌದು, ಈಗಾಗಲೆ 'ಅವನೇ ಶ್ರೀಮನ್ನಾರಾಯಣ' ಪ್ರಸಾರವಾಗುವ ಬಗ್ಗೆ ಟಿವಿಯಲ್ಲಿ ಪ್ರೋಮೋ ಪ್ರಸಾರ ಮಾಡಲಾಗುತ್ತಿದೆ.
Recommended Video
ಸ್ಟಾರ್ ಸುವರ್ಣ ಚಿತ್ರದ ಟಿವಿ ರೈಟ್ಸ್ ಪಡೆದಿದ್ದು ಈಗಾಗಲೆ ಸ್ಟಾರ್ ಸುವರ್ಣದಲ್ಲಿ ಪ್ರೋಮೋ ಪ್ರಸಾರ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಸಿನಿಮಾ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ. ಅವನೇ ಶ್ರೀಮನ್ನಾರಾಯಣ ಕಳೆದ ವರ್ಷ ಡಿಸೆಂಬರ್ 27ಕ್ಕೆ ಕನ್ನಡದಲ್ಲಿ ರಿಲೀಸ್ ಆಗಿದೆ. ನಂತರ ಶ್ರೀಮನ್ನಾಯಾರಣ ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ರಿಲೀಸ್ ಆಗಿದೆ.
'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಅವಧಿ ಜಾಸ್ತಿ ಇದೆ, ಬೋರ್ ಆಗುತ್ತೆ ಎನ್ನುವ ಮಾತುಗಳ ನಡುವೆಯು ಸೂಪರ್ ಆಗಿದೆ. ಸಿನಿಮಾ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗಿಲ್ಲ, ಆಗಲೆ ಟಿವಿಯಲ್ಲಿ ಶೀಘ್ರದಲ್ಲಿ ಎನ್ನುವ ಪ್ರೋಮೋ ಹಾಕುತ್ತಿರುವುದು ಅಚ್ಚರಿ ಮೂಡಿಸಿದೆ.

ಅನೇಕ ಪ್ರೇಕ್ಷಕರು ಇಷ್ಟು ಬೇಗ ಟಿವಿಯಲ್ಲಿ ಪ್ರಸಾರ ಮಾಡಬೇಡಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇನ್ನು 25 ದಿನ ಆಗಿಲ್ಲ, ಆಗಲೆ ಟಿವಿಯಲ್ಲಿ ಬರ್ತಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅವನೇ ಶ್ರೀಮನ್ನಾರಾಯಣ ಸಚಿನ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ.

ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮತ್ತು ಕುತೂಹಲಗಳೊಂದಿದೆ ಬಂದ ಅವನೇ ಶ್ರೀಮನ್ನಾರಾಯಣನನ್ನು ಈಗ ಮನೆಯಲ್ಲಿಯೆ ಕುಳಿತು ನೋಡಬಹುದು. ಆದರೆ ಯಾವಾಗ, ಎಷ್ಟೊತ್ತಿಗೆ ಎನ್ನುವ ವಿಚಾರ ಬಹಿರಂಗವಾಗಿಲ್ಲ.


Click it and Unblock the Notifications











