ಮದುವೆ ಮುಂಚೆ ಪಕ್ಕಾ ಪ್ಲೇಬಾಯ್ ಆಗಿದ್ದೆ, ಲೆಕ್ಕವಿಲ್ಲದಷ್ಟು ಸಂಬಂಧಗಳಿದ್ದವು ; ಶಾಕಿಂಗ್ ಸೀಕ್ರೆಟ್ ಹೇಳಿದ ರಾಮ್ ಕಪೂರ್
ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಇಷ್ಟೇ ಅಲ್ಲ ಕ್ಯಾಮರಾ ಮುಂದೆ ಸದಾ ಹಸ್ಮನುಖಿಯಾಗಿ ಕಾಣಿಸುವ ಸ್ಟಾರ್ ಗಳ ವೈಯಕ್ತಿಕ ಬದುಕಿನ ರಹಸ್ಯಗಳನ್ನು ತಿಳಿದುಕೊಳ್ಳಬೇಕೆಂಬ ಕುತೂಹಲಗಳು ಕೂಡ ಗರಿಗೆದರುತ್ತವೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ತಾರೆಯರು ಶುರು ಮಾಡುವುದೇ ತಡ, ಹಾಕಿಕೊಳ್ಳುವ ಬಟ್ಟೆಯ ಬ್ರಾಂಡ್‌ಗಳಿಂದ ಹಿಡಿದು ಇನ್ನರ್ ವೇರ್ ವರೆಗೆ ಎಲ್ಲವನ್ನೂ ಕೇಳಿ ಬಿಡುತ್ತಾರೆ.
ಇನ್ನು ಬೆಳ್ಳಿತೆರೆ ಇರಲಿ, ಕಿರುತೆರೆ ಇರಲಿ, ಹಲವರು ಮೇಲ್ನೋಟಕ್ಕೆ ಸಂಸ್ಕಾರವಂತರು, ಸಭ್ಯಸ್ಥರಂತೆ ಕಾಣುತ್ತಾರೆ. ಆದರೆ ವಾಸ್ತವದಲ್ಲಿ ಇವರ ಬದುಕಿನಲ್ಲಿ ಹಲವಾರು ರಹಸ್ಯಗಳು ಅಡಗಿರುತ್ತವೆ. ಈ ರಹಸ್ಯಗಳು ಹೊರ ಬಂದಾಗ ಅಭಿಮಾನಿಗಳೇ ದಂಗಾಗಿ ಹೋಗುತ್ತಾರೆ. ರಾಮ್ ಕಪೂರ್ ವಿಚಾರದಲ್ಲಿ ಕೂಡ ಇದೇ ಆಗಿದೆ.

ಹೌದು.. ರಾಮ್ ಕಪೂರ್.. ಹಿಂದಿ ಕಿರುತೆರೆಯ ಖ್ಯಾತ ಹೆಸರು. ಕಳೆದ ಎರಡೂವರೆ ದಶಕಗಳಿಂದ ಹಿಂದಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ, ಸಮಯ-ಸಂದರ್ಭ ಒದಗಿ ಬಂದಾಗ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡ ರಾಮ್ ಕಪೂರ್ ಅವರನ್ನು ಇವತ್ತು ಅನೇಕ ಜನ ಗುರುತಿಸುವುದು ''ಬಡೇ ಅಚ್ಛೇ ಲಗ್ತೇ ಹೈ'' ಧಾರಾವಾಹಿಯ ಮೂಲಕವೇ.
ಇಂಥಾ ರಾಮ್ ಕಪೂರ್ ಸದ್ಯ ''ಲಾಕಪ್'' ಎಂಬ ರಿಯಾಲಿಟಿ ಶೋನ 2ನೇ ಸೀಸನ್‌ನಲ್ಲಿ ಭಾಗವಹಿಸಿದ್ದಾರೆ. ಮಾತನಾಡುತ್ತಾ ಮಾತನಾಡುತ್ತಾ ತಮಗಿದ್ದ ಪ್ರೇಮ ಸಂಬಂಧಗಳ ವಿಚಾರವನ್ನು ಕೂಡ ಹೊರ ಹಾಕಿದ್ದಾರೆ. ಮದುವೆ ಮುನ್ನ ನಾನು ಪಕ್ಕಾ ''ಪ್ಲೇಬಾಯ್'' ಆಗಿದ್ದೆ ಎಂದಿದ್ದಾರೆ.
ಪ್ರೇಮ ಸಂಬಂಧದ ಬಗ್ಗೆ ರಾಮ್ ಕಪೂರ್ ಮಾತು
ಕಾರ್ಯಕ್ರಮದಲ್ಲಿ ಮತ್ತೊಬ್ಬ ಸ್ಫರ್ಧಿ ಶ್ರೇಯಾ ಕರ್ಲಾ, ನಿಮಗೆ ಎಷ್ಟು ಅಫೇರ್ ಗಳಿದ್ದವು ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ರಾಮ್ ಕಪೂರ್ ತಮ್ಮ ಮದುವೆಯ ಜೀವನದ ಕುರಿತು ಮಾತನಾಡಿದ್ದಾರೆ. ಮದುವೆಯ ಆದ ಮೇಲೆ ಒಂದೂ ಅಫೇರ್ ಇಲ್ಲ ಎಂದಿದ್ದಾರೆ.
ಆಗ ಶ್ರೇಯಾ ಕರ್ಲಾ ಮದುವೆಯ ಮುನ್ನ ಸಂಬಂಧಗಳ ಕಥೆ ಕೇಳಿದಾಗ, ತುಸು ಹೆಚ್ಚೇ ಪ್ರಾಮಾಣಿಕವಾಗಿ ಉತ್ತರಿಸಿರುವ ರಾಮ್ ಕಪೂರ್, ಮದುವೆ ಮುಂಚೆನಾ..? ಅಯ್ಯೋ ನಾನು ಆಗ ಪಕ್ಕಾ ಪ್ಲೇ ಬಾಯ್ ಆಗಿದ್ದೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶ್ರೇಯಾ ಅಂಕಿ-ಸಂಖ್ಯೆಯ ಸಮೇತ ವಿವರಣೆ ಕೇಳಿದಾಗ ಎಷ್ಟು ಸಂಬಂಧಗಳು ಇದ್ದವು ಎನ್ನುವುದನ್ನು ಎಣಿಸಲು ಕೂಡ ಸಾಧ್ಯ ಇಲ್ಲ ಎಂದಿದ್ದಾರೆ.

ರಾಮ್ ಕಪೂರ್ ಪತ್ನಿಗೆ ಏಕ್ತಾ ಕಪೂರ್ ಎಚ್ಚರಿಕೆ
ಇನ್ನು ಇದೇ ಸಮಯದಲ್ಲಿ ತಮ್ಮ ಮದುವೆಯ ಇಂಟ್ರೆಸ್ಟಿಂಗ್ ವಿಚಾರವನ್ನು ಕೂಡ ಹಂಚಿಕೊಂಡಿದ್ದಾರೆ. ಗೌತಮಿ ಜೊತೆ ಮದುವೆಯಾಗಲು ಮುಂದಾದಾಗ ತಮ್ಮ ಆಪ್ತ ಸ್ನೇಹಿತೆ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್, ಗೌತಮಿ ಕಪೂರ್ ಅವರಿಗೆ ಕರೆ ಮಾಡಿ ಎಚ್ಚರಿಕೆ ನೀಡಿದ್ದರು ಎಂಬ ಸಂಗತಿಯನ್ನೂ ರಾಮ್ ಕಪೂರ್ ಬಹಿರಂಗಪಡಿಸಿದ್ಧಾರೆ.
ನಾನು ಮತ್ತು ಗೌತಮಿ ಮದುವೆಯಾಗುತ್ತಿದ್ದೇವೆ ಎಂಬ ವಿಷಯ ಎಲ್ಲರಿಗೂ ಗೊತ್ತಾದ ನಂತರ, ಏಕ್ತಾ ಕಪೂರ್ ತುಂಬಾ ಟೆನ್ಶನ್ ಮಾಡ್ಕೊಂಡಿದ್ದರು ಎಂದು ಹೇಳಿರುವ ರಾಮ್ ಕಪೂರ್, ಆಗ ಗೌತಮಿಗೆ ಕರೆ ಮಾಡಿ, ನೀನೇನು ಮಾಡ್ತಿದ್ದೀಯಾ? ಅವನಿಗೆ ಈಗಾಗಲೇ ತುಂಬಾ ಜನರ ಜೊತೆ ಅಫೇರ್ ಗಳಿವೆ ಎಂದು ಕೇಳಿದ್ದರು ಎಂದಿದ್ದಾರೆ. ನಿಜಾ ಹೇಳಬೇಕು ಅಂದರೆ ನಾನು ಆಗ ಹಾಗೇ ಇದ್ದೆ, ಏಕ್ತಾ ಮಾಡಿದ್ದರಲ್ಲಿ ಯಾವ ತಪ್ಪಿಲ್ಲ ಎಂದಿದ್ದಾರೆ.
ರಾಮ್ ಕಪೂರ್ ಮತ್ತು ಗೌತಮಿ ಲವ್ ಸ್ಟೋರಿ
ರಾಮ್ ಕಪೂರ್ ಮತ್ತು ಗೌತಮಿ ಮೊದಲು ಭೇಟಿಯಾಗಿದ್ದು 2000ನೇ ಇಸವಿಯಲ್ಲಿ. ಆ ಕಾಲದಲ್ಲಿ ಪ್ರಖ್ಯಾತವಾಗಿದ್ದ ''ಘರ್ ಏಕ್ ಮಂದಿರ್'' ಧಾರಾವಾಹಿಯಲ್ಲಿ ಇವರು ಇಬ್ಬರು ಅಭಿನಯಿಸುತ್ತಿದ್ದರು. ಆ ಸಮಯದಲ್ಲಿ ಶುರುವಾದ ಪ್ರೀತಿ ಆ ನಂತರ ಮದುವೆಯವರೆಗೆ ಕರೆತಂದಿತು. ಕೊನೆಗೆ ಫೆಬ್ರವರಿ 14, 2003 ರ ಪ್ರೇಮಿಗಳ ದಿನದಂದೇ ಇಬ್ಬರು ಮದುವೆಯ ಬಂಧನಕ್ಕೊಳಗಾದರು. ಇವರಿಬ್ಬರ ದಾಂಪತ್ಯಕ್ಕೀಗ 23 ವರ್ಷ. ಇವರ ಪ್ರೇಮದ ಸಂಕೇತವಾಗಿ ಇವರಿಗೆ ಇಬ್ಬರು ಎದೆಯೆತ್ತರಕ್ಕೆ ಬೆಳೆದ ಮಕ್ಕಳಿದ್ದಾರೆ.


Click it and Unblock the Notifications