'ಹಿಟ್ಲರ್ ಕಲ್ಯಾಣ'ದಲ್ಲಿ ಎಜೆಯ ಹಿರಿಮಗನ ಎಂಟ್ರಿ.. ನೆಗೆಟಿವ್ ಪಾಸಿಟಿವ್ ಎರಡೂ ಶೇಡ್‌ನಲ್ಲಿ ರಾಮ್ ಪವನ್ ಶೇಟ್

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಹೊಸ ಪಾತ್ರದ ಎಂಟ್ರಿ ಆಗಿದೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಪ್ರತಿ ಸಂಚಿಕೆಯೂ ರೋಚಕ ತಿರುವುಗಳಿಂದ ಕೂಡಿದ್ದು ಕಥೆ ಹಾಗೂ ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ಧಾರಾವಾಹಿಯಲ್ಲಿ ಎಜೆ ಹಿರಿಸೊಸೆ ದುರ್ಗಾ ಆಗಿ ಅಭಿನಯಿಸುತ್ತಿದ್ದ ನಂದಿನಿಮೂರ್ತಿ ಅವರು ಗರ್ಭಿಣಿಯಾದ ಕಾರಣ ಧಾರಾವಾಹಿಯ ಕತೆಯಿಂದ ಹೊರಗಿದ್ದಾರೆ.

ಇನ್ನು ಮುಂದೆ ಧಾರಾವಾಹಿಯಲ್ಲಿ ದುರ್ಗಾ ಪಾತ್ರ ಇರಲಿದೆಯಾ? ಬೇರೊಬ್ಬ ನಟಿಯ ಆಗಮನವಾಗಲಿದೆಯಾ ಎಂದು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಹೀಗಿರುವಾಗ 'ಹಿಟ್ಲರ್ ಕಲ್ಯಾಣ'ದಲ್ಲಿ ಹೊಸ ಪಾತ್ರದ ಎಂಟ್ರಿಯಾಗಿದೆ. ಹೌದು, ಧಾರಾವಾಹಿ ಆರಂಭವಾದಾಗಿನಿಂದಲೂ ಕಾಣಿಸಿಕೊಳ್ಳದ ಎಜೆ ಹಿರಿ ಮಗನ ಆಗಮನವಾಗಿದೆ. ಹೌದು, ಎಜೆ ಅವರ ಹಿರಿ ಮಗ ಕಿಶೋರ್ ಎಂಟ್ರಿ ಇದೀಗ ಆಗಿದ್ದು ಆ ಪಾತ್ರದಲ್ಲಿ ನಟ ರಾಮ್ ಪವನ್ ಶೇಟ್ ಕಾಣಿಸಿಕೊಳ್ಳಲಿದ್ದಾರೆ.

ram-pavan-shet-in-hitler-kalyana

"ಗಿಣಿರಾಮ ಧಾರಾವಾಹಿಯ ನಂತರ ನಾನು ಮೂರು ತಿಂಗಳು ಕಿರುತೆರೆಯಿಂದ ದೂರವಿದ್ದೆ. ಇದೀಗ ಕಿಶೋರ್ ಪಾತ್ರದ ಮೂಲಕ ಮತ್ತೆ ಕಿರುಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ನನಗೆ ತುಂಬಾನೇ ಖುಷಿಯಾಗುತ್ತಿದೆ. ಅಂದ ಹಾಗೇ ನಾನು ಇಲ್ಲಿಯವರೆಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಹಿಟ್ಲರ್ ಕಲ್ಯಾಣದಲ್ಲಿ ನಾನು ನೆಗೆಟಿವ್ ಹಾಗೂ ಪಾಸಿಟಿವ್ ಎರಡು ಶೇಡ್‌ಗಳನ್ನು ಒಂದೇ ಪಾತ್ರದಲ್ಲಿ ನಿರ್ವಹಿಸಲಿದ್ದೇನೆ." ಎಂದು ಫಿಲ್ಮಿಬೀಟ್ ಜೊತೆಗೆ ಹಂಚಿಕೊಳ್ಳುತ್ತಾರೆ ನಟ ರಾಮ್ ಪವನ್ ಶೇಟ್.

"ಅಂದ ಹಾಗೇ ಮುಂದಿನ ದಿನಗಳಲ್ಲಿ ಕಿಶೋರ್ ಪಾತ್ರದಿಂದಾಗಿ ಧಾರಾವಾಹಿಗೆ ಟ್ವಿಸ್ಟ್ ಸಿಗಲಿದೆ. ರಣಧೀರ ಆಗಿ ಗುರುತಿಸಿಕೊಂಡಿದ್ದ ನಾನು ಒಂದು ವಿಭಿನ್ನ ರೀತಿಯ ಪಾತ್ರದ ಮೂಲಕ ಕಿರುತೆರೆಗೆ ಎಂಟ್ರಿ ಕೊಡಲು ಕಾಯುತ್ತಿದ್ದೆ‌. ಇದೀಗ ಒಂದು ಒಳ್ಳೆಯ ಪಾತ್ರದ ಮೂಲಕ ಕಂ ಬ್ಯಾಕ್ ಆಗುತ್ತಿರುವುದಕ್ಕೆ ಸಂತೋಷವಿದೆ" ಎಂದು ಫಿಲ್ಮಿಬೀಟ್ ನೊಂದಿಗೆ ಖುಷಿಯಿಂದ ಹೇಳಿಕೊಂಡಿದ್ದಾರೆ ರಾಮ್ ಪವನ್ ಶೇಟ್.

ram-pavan-shet-in-hitler-kalyana

'ಪ್ರೀತಿಯಿಂದ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಮ್ ಪವನ್ ಶೇಟ್ ಅವರು ನಂತರ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕನ ಚಿಕ್ಕಪ್ಪನ ಮಗ ಕಿರಣ್ ಆಗಿ ಅಭಿನಯಿಸಿದ್ದರು. ನೆಗೆಟಿವ್ ಶೇಡ್ ಇರುವ ಅರ್ಥಾತ್ ಖಳನಾಯಕನ ಪಾತ್ರ ಅದಾಗಿದ್ದು ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ 'ಜನ ಮೆಚ್ಚಿದ ಶಕುನಿ' ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದಾರೆ.

ಮುಂದೆ 'ಜೋಡಿಹಕ್ಕಿ', 'ಬ್ರಹ್ಮಗಂಟು', 'ಗಿಣಿರಾಮ' ಧಾರಾವಾಹಿಯಲ್ಲಿ ಖಳನಾಯಕನಾಗಿ ಅಬ್ಬರಿಸಿದ ರಾಮ್ ಪವನ್ ಶೇಟ್ ಅವರು 'ಕಿರಿಕ್ ಶಂಕರ್' ಸಿನಿಮಾದಲ್ಲಿ ನಾಯಕ ಲೂಸ್ ಮಾದನ ಗೆಳೆಯ ಆಗಿ ನಟಿಸುವ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ 'ಕಾಕ್ರೋಚ್' ಹಾಗೂ 'ರುದ್ರ ಗರುಡ ಪುರಾಣ' ಸಿನಿಮಾಗಳಲ್ಲಿ ಇವರು ಅಭಿನಯಿಸುತ್ತಿದ್ದು ಈ ಎರಡು ಸಿನಿಮಾಗಳಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವುದು ವಿಶೇಷ.

More from Filmibeat

English summary
Ram Pavan Shet will be playing as AJ's son in Hitler Kalyana serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X