ಹಿರಿತೆರೆಯಲ್ಲಿ 'ಲವರ್ ಬಾಯ್' ಆಗಿ ಕಾಣಿಸಿಕೊಂಡ ಕಿರುತೆರೆಯ 'ವಿಲನ್'

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಉತ್ತರ ಸೊಗಡಿನ ಭಾಷೆಯ 'ಗಿಣಿರಾಮ' ಧಾರಾವಾಹಿಯಲ್ಲಿ ಖಳನಾಯಕ ರಣಧೀರನಾಗಿ ಅಬ್ಬರಿಸುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಾಮ್ ಪವನ್ ಶೇಟ್. ಆಯಿ ಸಾಹೇಬನ ಮಗ ರಣಧೀರನ ಪಾತ್ರಕ್ಕೆ ಜೀವ ತುಂಬುತ್ತಿರುವ ರಾಮ್ ಪವನ್ ಶೇಟ್ ಅವರು ವಿಲನ್ ಪಾತ್ರದ ಮೂಲಕವೇ ಸಣ್ಣ ಪರದೆಯ ಹೊಸ ಹವಾ ಸೃಷ್ಟಿ ಮಾಡಿದ್ದಾರೆ.

ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೀತಿಯಿಂದ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ರಾಮ್ ಪವನ್ ಶೇಟ್ ನಂತರ ಬದಲಾಗಿದ್ದು ಖಳನಾಯಕನಾಗಿ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ಖಳನಾಯಕಿ ಕಿರಣ್ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ರಾಮ್ ಪವನ್ ಶೇಟ್ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ ಎನ್ನಬಹುದು.

Ram Pavan shett Small Screen Villain who appeared on the big screen as Lover Boy

ಖಳನಾಯಕನಾಗಿಯೇ ಫೇಮಸ್ಸು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೋಡಿಹಕ್ಕಿ' ಧಾರಾವಾಹಿಯಲ್ಲಿ ನಾಯಕ ಪೈಲ್ವಾನ್ ರಾಮನ ಅಣ್ಣ ತಂಗಿ ಒಂದಷ್ಟು ಸಂಚಿಕೆಗಳಲ್ಲಿ ಕಾಣಿಸಿಕೊಂಡಿದ್ದರು ರಾಮ್ ಪವನ್ ಶೇಟ್‌. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಧೀರಜ್ ಪಾತ್ರಕ್ಕೆ ಜೀವ ತುಂಬಿದ್ದು ಅಲ್ಲಿಯೂ ಖಳನಾಯಕನಾಗಿ ಮಿಂಚಿದ್ದು ವಿಶೇಷ.

ಕಿರುತೆರೆಯಲ್ಲಿ ಗುರುತಿಸಿಕೊಳ್ಳಲು ರಣಧೀರ ಪಾತ್ರ ಕಾರಣ

ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿಯಲ್ಲಿ ರಣಧೀರನಾಗಿ ಅಭಿನಯಿಸುತ್ತಿರುವ ರಾಮ್ ಪವನ್ ಶೇಟ್ "ನನ್ನ ಕಿರುತೆರೆ ಜರ್ನಿಯಲ್ಲಿ ರಣಧೀರನ ಪಾತ್ರ ತುಂಬಾ ಸ್ಪೆಷಲ್. ರಣಧೀರ ಪಾತ್ರದ ಹೆಸರು ಕೇಳಿದಾಗಲೇ ಒಂದು ರೀತಿಯ ಗತ್ತು ಬರುತ್ತದೆ. ಧೈರ್ಯವಂತ ಹುಡುಗನ ಪಾತ್ರವಾಗಿರುವ ಅದರಲ್ಲಿ ನಟನೆಗೂ ಅವಕಾಶ ಜಾಸ್ತಿ. ಇಲ್ಲಿಯ ತನಕ ನಾನು ಮೂರು ಧಾರಾವಾಹಿಗಳಲ್ಲಿ ಖಳನಾಯಕನಾಗಿ ನಟಿಸಿದ್ದರೂ ಈ ಪಾತ್ರ ಅವೆಲ್ಲಕ್ಕಿಂತಲೂ ಭಿನ್ನ. ಕಡಿಮೆ ಅವಧಿಯಲ್ಲಿ ಈ ಪಾತ್ರ ನನಗೆ ಜನಪ್ರಿಯತೆ ನೀಡಿದೆ. ತುಂಬಾ ಖುಷಿಯಾಗುತ್ತಿದೆ" ಎಂದು ಸಂತಸ ಹಂಚಿಕೊಳ್ಳುತ್ತಾರೆ ರಾಮ್ ಪವನ್ ಶೇಟ್.

Ram Pavan shett Small Screen Villain who appeared on the big screen as Lover Boy

ಲವರ್ ಬಾಯ್ ಆಗಿ ಹಿರಿತೆರೆಯಲ್ಲಿ ಮೋಡಿ

ಕಿರುತೆರೆಯಲ್ಲಿ 'ಖಳನಾಯಕ' ಆಗಿ ಗುರುತಿಸಿಕೊಂಡಿರುವ ರಾಮ್ ಪವನ್ ಶೇಟ್ ಮನೆದೇವ್ರು ಧಾರಾವಾಹಿಯ ಕಿರಣ್ ಪಾತ್ರಕ್ಕೆ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ ನಲ್ಲಿ 'ಮನೆ ಮೆಚ್ಚಿದ ಶಕುನಿ' ಪ್ರಶಸ್ತಿ ಪಡೆದಿದ್ದಾರೆ. ಖಳನಾಯಕನಾಗಿ ಕಿರುತೆರೆ ಜಗತ್ತಿನಲ್ಲಿ ಮಿಂಚಿದ ರಾಮ್ ಪವನ್ ಶೇಟ್ ಲವರ್ ಬಾಯ್ ಆಗಿ ಮೋಡಿ ಮಾಡಿದ್ದಾರೆ. ಅದು ಹಿರಿತೆರೆಯಲ್ಲಿ!

ಲೂಸ್ ಮಾದ ನಟನೆಯ 'ಕಿರಿಕ್ ಶಂಕರ್' ಸಿನಿಮಾದಲ್ಲಿ ಲವರ್ ಬಾಯ್ ಅವತಾರದಲ್ಲಿ ಅಭಿನಯಿಸಿರುವ ರಾಮ್ ಪವನ್ ಶೇಟ್ ಲೂಸ್ ಮಾದ ಅವರ ಸ್ನೇಹಿತರಾಗಿ ನಟಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ರಾಮ್ ಪವನ್ ಶೇಟ್ "ಲೂಸ್ ಮಾದ ಅವರೊಂದಿಗೆ ತೆರೆ ಹಂಚಿಕೊಂಡಿರುವುದು ಖುಷಿ ತಂದಿದೆ. ನಾನು ಈ ಸಿನಿಮಾದಲ್ಲಿ ಶಶಿ ಎನ್ನುವ ಪಾತ್ರಕ್ಕೆ ಜೀವ ತುಂಬಿದ್ದೇನೆ‌. ಕಾಮಿಡಿಯ ಜೊತೆ ಜೊತೆಗೆ ಲವರ್ ಬಾಯ್ ಆಗಿ ನಾನು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ" ಎಂದು ಈ ಹಿಂದೆ ಹೇಳಿಕೊಂಡಿದ್ದರು.

English summary
Ram Pavan shet , who is known as a villain on the small screen, has entered the big screen as a Lover Boy, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X