ರಾಮಾಯಣದ ಕುರುಹುಗಳನ್ನು ಹುಡುಕಿಹೊರಟ ಅದ್ಭುತ ಪಯಣದ 'ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್' ಮರು ಪ್ರಸಾರ

ಜನವರಿ 22ರ ಈ ಸೋಮವಾರ ಇತಿಹಾಸದ ಪುಟಗಳಲ್ಲಿ ಮಹತ್ವದ ದಿನವಾಗಿ ಉಳಿಯಲಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದೆ. ಹೀಗಾಗಿ ದೇಶದಲ್ಲಿ ರಾಮನದ್ದೇ ಭಜನೆ ನಡೆಯುತ್ತಿದೆ. ಎಲ್ಲಾ ನೋಡಿದರೂ ರಾಮನೇ ಕಣುತ್ತಿದ್ದು, ಟಿವಿಯಲ್ಲೂ ರಾಮಾಯಣವನ್ನು ಕಣ್ತುಂಬಿಕೊಳ್ಳಬಹುದು.

ಈಗಾಗಲೇ ಸೋನಿ ಚಾನೆಲ್‌ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 7.30ರ ವರೆಗೆ 'ಶ್ರೀಮದ್ ರಾಮಾಯಣ' ಧಾರಾವಾಹಿ ಪ್ರಸಾರವಾಗಲಿದೆ. 2024 ರ ಜನವರಿ 1 ರಿಂದ ಪ್ರಸಾರವಾಗಿರುವ ಎಲ್ಲಾ ಎಪಿಸೋಡ್‌ಗಳನ್ನು ರಾಮ ಮಂದಿರ ಉದ್ಘಾಟನೆ ದಿನದಂದು ಮತ್ತೆ ಮರು ಪ್ರಸಾರ ಮಾಡಲಿದೆ. ಇದರ ಬೆನ್ನಲ್ಲೇ, ಡಿಸ್ಕವರಿ ಚಾನೆಲ್‌ನಲ್ಲಿ 'ಲೆಜೆಂಡ್ಸ್ ಆಫ್ ದಿ ರಾಮಾಯಣ ವಿಥ್ ಅಮಿಶ್' ಎಂಬ ಡಾಕ್ಯುಮೆಂಟ್‌ ಸೀರಿಸ್‌ ಕೂಡ ಮರು ಪ್ರಸಾರವಾಗುತ್ತಿದೆ.

Ram Pran Pratishtha: Discovery Channel to air docu-series Legends of The Ramayana with Amish

ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್ ಮರು ಪ್ರಸಾರ

"ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್" ಎಂಬ ಡಾಕ್ಯುಮೆಂಟ್‌ ಸೀರಿಸ್‌ರಾಮಾಯಣ ಮಹಾಕಾವ್ಯದ ಸುತ್ತಲಿನ ಪ್ರಸಿದ್ಧ ರಹಸ್ಯಗಳನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತದೆ. ಈ ಒಂದು ಪ್ರಸಿದ್ಧ ಸೀರಿಸ್ ಅನ್ನು ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಮ್ತೆ ಡಿಸ್ಕವರಿ ಚಾನೆಲ್‌ನಲ್ಲಿ ಮರು ಪ್ರಸಾರ ಮಾಡಲಾಗುತ್ತಿದೆ.

ಡಿಸ್ಕವರಿ ಚಾನೆಲ್, ಡಿತಮಿಳ್ ಮತ್ತು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ಕವರಿ+ ಗಳಲ್ಲಿ 'ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್' ವಿಶೇಷ ಪ್ರಸಾರ ಕಾಣಲಿದ್ದು, ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧತೆ ನಡೆಸುತ್ತಿದೆ. ಪ್ರಸಿದ್ಧ ಲೇಖಕ ಅಮಿಶ್ ತ್ರಿಪಾಠಿ ಅವರು ಹೋಸ್ಟ್ ಮಾಡಿದ ಮೂರು ಭಾಗಗಳ ಡಾಕ್ಯುಮೆಂಟ್‌ ಸೀರಿಸ್‌ ಜನವರಿ 20 ರಿಂದ ಆರಂಭವಾಗಿದ್ದು, ಜನವರಿ 23 ರವರೆಗೆ ಈ ಸೀರಿಸ್ ಮರು ಪ್ರಸಾರವಾಗಲಿದೆ.

Ram Pran Pratishtha: Discovery Channel to air docu-series Legends of The Ramayana with Amish

ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್

'ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್' ಸೀರಿಸ್ 5000 ಕಿಲೋಮೀಟರ್‌ಗಳನ್ನು ಸುತ್ತಿ, ರಾಮಾಯಣದ ಸುತ್ತಲಿನ ಪ್ರಾಚೀನ ಕಥೆಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಅಮಿಶ್ ತ್ರಿಪಾಠಿ ಅವರು ರಾಮಾಯಣದ ಸುತ್ತ ಸಹಸ್ರಾರು ವರ್ಷಗಳಿಂದ ಉಳಿದುಕೊಂಡಿರುವ ಜಿಜ್ಞಾಸೆ ಮಾಹಿತಿಯನ್ನು ಡಿಕೋಡ್ ಮಾಡುತ್ತಾರೆ. ಇದು ಭಾರತ ಮತ್ತು ಅದರಾಚೆಗಿನ ನಂಬಿಕೆ, ತತ್ವಗಳು ಮತ್ತು ಜೀವನಶೈಲಿಯನ್ನು ನಮ್ಮ ಮುಂದಿಡುತ್ತದೆ. ಆಶ್ಚರ್ಯಕ್ಕೆ ನೂಕುವ ದೃಶ್ಯಗಳಿರುವ ಈ ಸೀರಿಸ್ ಭಗವಾನ್ ರಾಮನ ರೋಮಾಂಚಕ ಪ್ರಯಾಣದ ಅನುಭವವನ್ನು ವೀಕ್ಷಕರಿಗೆ ಒದಗಿಸಲಿದೆ.

ಭೂವಿಜ್ಞಾನ, ಪದ್ಧತಿಗಳು ಮತ್ತು ನಂಬಿಕೆಗಳ ಜೊತೆಗೆ ಪುರಾಣ ಗ್ರಂಥವನ್ನು ಮ್ಯಾಪಿಂಗ್ ಮಾಡುವ ಲೇಖಕ ಅಮಿಶ್ ತ್ರಿಪಾಠಿ ಶ್ರೀಲಂಕಾ, ಅಯೋಧ್ಯೆ, ನಾಸಿಕ್ ಮತ್ತು ಹಂಪಿಯಂತಹ ಪ್ರಮುಖ ಸ್ಥಳಗಳಿಗೆ ಪ್ರಯಾಣ ನಡೆಸಿದ್ದಾರೆ. ಇತಿಹಾಸಕ್ಕೆ ಜೀವ ತುಂಬಲು ಮತ್ತು ಪ್ರತಿಯೊಂದು ಪ್ರದೇಶಗಳಲ್ಲಿನ ಶ್ರೀಮಂತ ಸಂಸ್ಕೃತಿಗಳು, ಸಾಮಾಜಿಕ ವೈವಿಧ್ಯತೆಗಳು ಮತ್ತು ಭೂದೃಶ್ಯಗಳನ್ನು ಅಚ್ಚುಕಟ್ಟಾಗಿ ಜನರೆದುರು ತೆರದಿಟ್ಟಿದ್ದಾರೆ.

'ಲೆಜೆಂಡ್ಸ್ ಆಫ್ ದಿ ರಾಮಾಯಣ ವಿತ್ ಅಮಿಶ್' ಡಿಸ್ಕವರಿ ಚಾನೆಲ್‌ನಲ್ಲಿ ಜನವರಿ 20 ರಿಂದ 22 ರವರೆಗೆ ಸಂಜೆ 7 ಗಂಟೆಗೆ ಮತ್ತು ಜನವರಿ 23 ರಂದು ಸಂಜೆ 4 ಗಂಟೆಗೆ ಸರಣಿ ಪ್ರಸಾರವಾಗಲಿದೆ. ಡಿತಮಿಳ್‌ ಚಾನೆಲ್‌ನಲ್ಲಿ ಜನವರಿ 22 ಮತ್ತು 24 ರಂದು ಸಂಜೆ 7 ಗಂಟೆಗೆ ಮತ್ತು ಜನವರಿ 23 ರಂದು ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ. 2022 ರ ಅಕ್ಟೋಬರ್‌ನಲ್ಲಿ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಿದ್ದ ಇದು, ಅದಕ್ಕೂ ಮೊದಲು ಏಪ್ರಿಲ್ 2022 ರಂದು ಡಿಸ್ಕವರಿ+ ನಲ್ಲಿ ಪ್ರಥಮ ಪ್ರದರ್ಶನವಾಗಿತ್ತು.

More from Filmibeat

English summary
Discovery Channel to air docu-series 'Legends of The Ramayana with Amish'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X