ಸಿಗಂದೂರಿನಲ್ಲಿ ಜೋಡಿಯಾಗಿ ಕಾಣಿಸಿಕೊಂಡ ಮಿಸ್ಟರ್ & ಮಿಸಸ್ ರಾಮಚಾರಿ: ಮದುವೆಯಾದ್ರಾ ಎಂದ ಫ್ಯಾನ್ಸ್!

By Poorva

ಕಿರುತೆರೆಯ ಫೇಮಸ್ ಜೋಡಿಗಳಲ್ಲಿ 'ರಾಮಾಚಾರಿ' ಜೋಡಿಯು ಒಂದಾಗಿದೆ. ಚಾರು ರಾಮಾಚಾರಿಗಾಗಿ, ರಾಮಚಾರಿ ಪ್ರೀತಿಗಾಗಿ ಬಹಳ ಕಷ್ಟ ಪಟ್ಟಿದ್ದಾರೆ. ಇದೀಗ ಅವರಿಬ್ಬರೂ ಒಂದಾಗಿ ಜೀವನ ನಡೆಸುತ್ತಾ ಇರುವುದು ಅಭಿಮಾನಿಗಳಿಗೆ ಖುಷಿ ತಂದಿದೆ. ಚಾರು ಮತ್ತು ರಾಮಾಚಾರಿ ಒಂದಾಗಿ ಬಣ್ಣದ ಲೋಕದಲ್ಲಿ ಮಾತ್ರ ಖುಷಿಯಾಗಿರದೇ, ಪ್ರಸಿದ್ದ ಸಿಗಂದೂರು ದೇವಾಲಯದಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಸಿಗಂದೂರು ಚೌಡೇಶ್ವರಿ ಅಮ್ಮನವರ ದರ್ಶನ ಪಡೆದು ನಟ ರಿತ್ವಿಕ್ ಕೃಪಾಕರ್ ಹಾಗೂ ಮೌನ ಗುಡ್ಡೇಮನೆ ಪುನೀತರಾದರು. ಇವರಿಬ್ಬರನ್ನ ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಹಾಗೆಯೇ ಇವರಿಬ್ಬರು ಮದುವೆಯಾದರೆ ಎಷ್ಟು ಚೆನ್ನಾಗಿ ಇರುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೌನ ಗುಡ್ಡೇಮನೆ ಇದೀಗ ಸಿಗಂದೂರು ಚೌಡೇಶ್ವರಿ ತಾಯಿಯ ದರ್ಶನ ಮಾಡಿರುವ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ

 Ramachari actors Rithvik Krupakar, Mouna Guddemane visits Sigandur Chowdeshwari Temple

ಈ ಫೋಟೋ ನೋಡಿದ ಅಭಿಮಾನಿಗಳು ಇದೇನಿದು ಸೀರಿಯಲ್‌ನಲ್ಲಿ ಒಟ್ಟಿಗೆ ಕಾಣಿಸುತ್ತಿದ್ದ ಇವರಿಬ್ಬರು ಇದೀಗ ಒಂದಾಗಿ ಸಿಗಂದೂರಿನಲ್ಲಿ ಕಾಣಿಸಿಕೊಂಡಿದ್ದಾರೆ ಏನಾದರೂ ಸೀಕ್ರೆಟ್ ಇದಿಯಾ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ರಿಯಲ್ ಆಗಿ ಮದುವೆಯಾಗಲು ಹೋಗಿದ್ರಾ? ಓಕೆ ಆಲ್ ದಿ ಬೆಸ್ಟ್ ಎಂದು ಹೇಳಿದ್ದಾರೆ. ಇನ್ನು ಕೆಲವರು ಬಹಳ ಕ್ಯೂಟ್ ಆಗಿ ಕಾಣಿಸುತ್ತಿದ್ದೀರ ಎಂದು ಹೊಗಳುತ್ತಿದ್ದಾರೆ.

ಜೋಡಿ ನೋಡಿ ಅಭಿಮಾನಿಗಳ ಮನದಲ್ಲಿ ಹಲವು ಪ್ರಶ್ನೆ

ಮೌನ ಆಕಾಶ ನೀಲಿ ಬಣ್ಣದ ಸಾರಿಯುಟ್ಟು ಅದಕ್ಕೆ ಹಳದಿ ಬಣ್ಣದ ಬ್ಲೌಸ್ ತೊಟ್ಟು ಬಹಳ ಅದ್ಭುತವಾಗಿ ಕಾಣಿಸುತ್ತ ಇದ್ದಾರೆ. ಇನ್ನು ರಿತ್ವಿಕ್ ಕೃಪಾಕರ್ ಹಾಗೂ ಮೌನ ರಾಮಾಚಾರಿ ಧಾರಾವಾಹಿಯಲ್ಲಿ ಬಹಳ ಅದ್ಭುತವಾಗಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇವರ ನಟನೆ ಕಂಡು ಅನೇಕ ಜನ ನಿಜ ಜೀವನದಲ್ಲಿ ಚಾರು ಹಾಗೂ ಚಾರಿ ಒಂದಾಗಿ ಕಾಣಿಸಿಕೊಳ್ಳಬೇಕು ಎಂದು ಅನೇಕ ಜನ ಮನದಲ್ಲಿ ಅಂದುಕೊಂಡಿದ್ದರು. ಅದರಂತೆ ಇಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ ಮೂಡುತ್ತಿದೆ.

 Ramachari actors Rithvik Krupakar, Mouna Guddemane visits Sigandur Chowdeshwari Temple

ಪ್ರಕೃತಿಯ ರಮಣೀಯ ದೃಶ್ಯ ಎಂಜಾಯ್ ಮಾಡಿದ ಮೌನ- ರಿತ್ವಿಕ್

ಇನ್ನು ಸಿಗಂದೂರಿಗೆ ತೆರಳಿರುವ ಮೌನ ಮತ್ತು ರಿತ್ವಿಕ್ ಕೃಪಾಕರ್ ಸಿಗಂದೂರಿನ ಪ್ರಕೃತಿಯ ಸೊಬಗಿಗೆ ಮನ ಸೋತಿದ್ದಾರೆ ಎಂದರೆ ತಪ್ಪಾಗದು. ಮಿಸ್ಟರ್ & ಮಿಸಸ್ ರಾಮಚಾರಿ ಸಿಗಂದೂರು ಜರ್ನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಹಾಗೆಯೇ ಸುಂದರವಾದ ನದಿಯ ಮಧ್ಯೆ ಇರುವ ವೇಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಮಗುವಾದ ಇಬ್ಬರು ಖುಷಿಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಇವರನ್ನು ಒಟ್ಟಿಗೆ ನೋಡಿ ಮದುವೆ ಯಾವಾಗ ಎನ್ನುವ ಪ್ರಶ್ನೆ ಫ್ಯಾನ್ಸ್ ಕೇಳುತ್ತಿದ್ದಾರೆ.

ರಾಮಾಚಾರಿ ಧಾರಾವಾಹಿ ಏರು ಇಳಿತವನ್ನು ಕಾಣುತ್ತಿದ್ದು ಜನರು ಮಾತ್ರ ಯಾವಾಗ ಮುಗಿಸುತ್ತಾರೆ ಈ ಧಾರಾವಾಹಿಯನ್ನು ಎಂದು ಕಾಯುತ್ತಿದ್ದಾರೆ. ಧಾರಾವಾಹಿಯನ್ನು ಇತ್ತೀಚೆಗೆ ಸುಮ್ಮನೆ ಎಳೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದು ಧಾರಾವಾಹಿ ಪ್ರೇಮಿಗಳಿಗೆ ಇಷ್ಟವಾಗುತ್ತಿಲ್ಲ.

More from Filmibeat

English summary
Rithvik Krupakar, Mouna Guddemane visits Sigandur Chowdeshwari temple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X