ಮೊನ್ನೆ ತಲೆ ಬೋಳಿಸಿದ್ದಾಯ್ತು.. ಈಗ ಬುಡುಬುಡಿಕೆಯ ವೇಷವೆತ್ತಿ ಬಂದ ರಾಮಾಚಾರಿಯ ಅರಗಿಣಿ ಮೌನ ಗುಡ್ಡೆಮನೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ರಾಮಾಚಾರಿ' ಒಂದು. ವಿಭಿನ್ನ ಕಥಾಹಂದರಸ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ರಾಮಾಚಾರಿ ಧಾರಾವಾಹಿಯು ಪಾತ್ರವರ್ಗದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದೆ. 'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕಿ ಚಾರುಲತಾ ಆಲಿಯಾಸ್ ಚಾರು ಆಗಿ ಅಭಿನಯಿಸುತ್ತಿರುವ ಮೌನ ಗುಡ್ಡೆಮನೆ ಹೊಸ ಅವತಾರದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, 'ರಾಮಾಚಾರಿ' ಧಾರಾವಾಹಿಯ ಪ್ರತಿ ಸಂಚಿಕೆಯೂ ಕುತೂಹಲದಿಂದ ಕೂಡಿದ್ದು ಇದೀಗ ನಾಯಕಿ ಚಾರು ಪಾತ್ರಧಾರಿ ಬುಡುಬುಡಿಕೆ ವೇಷ ಧರಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಬುಡುಬುಡಿಕೆಯವರಂತೆ ವೇಷ ಧರಿಸಿರುವ ಮನೆಯತ್ತ ಬಂದಿರುವ ಚಾರು ಮನೆಯಲ್ಲಿ ನಡೆಯುವಂತಹ ಎಲ್ಲಾ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಇಡುವ ನಿರ್ಧಾರ ಮಾಡುತ್ತಾಳೆ.

ಇದರ ಜೊತೆಗೆ ಬುಡುಬುಡಿಕೆ ವೇಷ ಧರಿಸಿದ ಚಾರು ಕಣ್ಣು ಎದುರಿಗೆ ವೈಶಾಖಾ ಸಿಕ್ಕುತ್ತಾಳೆ. ಬುಡುಬುಡಿಕೆಯ ವೇಷ ಧರಿಸಿದವರು ಚಾರು ಎಂಬುದು ತಿಳಿಯದೇ, ಚಾರು ಬಗ್ಗೆ ಚಾಡಿ ಹೇಳಿ, ಚಾರು ಕೈಯಿಂದಲೇ ಪೆಟ್ಟು ತಿನ್ನುತ್ತಾಳೆ. ಜೊತೆಗೆ ವೈಶಾಖಾಗೆ ಬುದ್ಧಿ ಕಲಿಸುವ ಸಲುವಾಗಿ ಚಾರು ಆರು ಅಡಿ ಗುಂಡಿ ಮಾಡಿ ಅದರಲ್ಲಿ ನೀನು ನಿಲ್ಲಬೇಕು. ಕುತ್ತಿಗೆಯ ತನಕ ಮಣ್ಣು ಹಾಕಬೇಕು, ಹಾಗೇ ಮಾಡಿದರೆ ನಿನ್ನ ಪಾಪ ಪರಿಹಾರವಾಗುತ್ತದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ವೈಶಾಖಾ ಅದರಂತೆ ಮಾಡುತ್ತಾಳೆ. ಒಟ್ಟಿನಲ್ಲಿ ಕೆಟ್ಟದನ್ನು ಮಾಡುವ ವೈಶಾಖಾಳಿಗೆ ಬುದ್ಧಿ ಕಲಿಸಲು ಹಾಗೂ ಮನೆಯ ಒಳಿತನ್ನು ಕಾಪಾಡುವ ಸಲುವಾಗಿ ಬುಡಬುಡಿಕೆ ವೇಷ ಧರಿಸಿದ್ದಾಳೆ ಚಾರು.
ಇನ್ನು ಬುಡಬುಡಿಕೆ ವೇಷದಲ್ಲಿರುವ ಒಂದಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೌನ ಗುಡ್ಡೆಮನೆ ಆ ಫೋಟೋಗಳಿಗೆ ಎಲ್ಲೋ ಜೋಗಪ್ಪ ನಿನ್ನರಮನೆ ಹಾಡನ್ನು ಹಾಕಿದ್ದಾರೆ. ಇದರ ಜೊತೆಗೆ ನಾನು ಚಿಕ್ಕವಳಿದ್ದಾಗ ಇದು ನನ್ನ ಫೇವರಿಟ್ ಹಾಡು. ನಿಮ್ಮದು ಯಾವುದು? ಕಮೆಂಟ್ ಮಾಡಿ" ಎಂದು ಬರೆದುಕೊಂಡಿದ್ದಾರೆ.

ಅಂದ ಹಾಗೇ ಮೌನ ಗುಡ್ಡೆಮನೆ ಪಾತ್ರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ಈ ಹಿಂದೆ ಆಕೆ ತಮ್ಮ ಪಾತ್ರಕ್ಕಾಗಿ ಕೂದಲನ್ನು ಕಟ್ ಮಾಡಿಕೊಂಡಿದ್ದರು. ಮಾತ್ರವಲ್ಲದೇ ತೆರೆ ಮೇಲೆ ತಲೆ ಬೋಳಿಸಿಕೊಂಡು ಈಕೆ ಸುದ್ದಿಯಲ್ಲಿದ್ದರು. ಅಂದರೆ ಬಾಲ್ಡ್ ವೇಷ ಹಾಕಿದ್ದರು ಅಷ್ಟೇ. ಅಸಲಿಗೆ ತಲೆಬೋಳಿಸಬೇಕು ಎಂಬ ವಿಚಾರ ಬಂದಾಗ ಹಿಂದೆ ಮುಂದೆ ನೋಡದೇ ಓಕೆ ಎಂದಿದ್ದರಂತೆ ಮೌನ ಗುಡ್ಡೆಮನೆ. ಆದರೆ ಅವರು ಸಿನಿಮಾದಲ್ಲಿಯೂ ನಟಿಸುವ ಕಾರಣ ತಲೆ ಬೋಳು ಕಾಣುವಂತೆ ಮೇಕಪ್ ಮಾಡಲಾಯಿತಂತೆ.
ಇನ್ನು ತಲೆ ಬೋಳಿಸಿಕೊಂಡು ದಿಟ್ಟ ಹೆಣ್ಣುಮಗಳಾಗಿ ಮೌನ ಗುಡ್ಡೆಮನೆ ತೆರೆಯ ಮೇಲೆಯೇನೋ ಮಿಂಚಿದರು. ಆದರೆ ಅದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮೇಕಪ್‌ಗೆ ಮೂರು ಗಂಟೆ ಬೇಕಿತ್ತು. ಎಲ್ಲರಿಗಿಂತ ಮೊದಲು ಮೌನ ಶೂಟಿಂಗ್ ಜಾಗಕ್ಕೆ ಹೋಗುತ್ತಿದ್ದರು. ಕೆಮಿಕಲ್ ಹಾಕಿ, ಗಮ್ ಹಚ್ಚಿ, ವಿಗ್ ತೊಡಿಸಿ ಸೆಟ್ ಮಾಡುವಾಗ ಮೂರುಗಂಟೆ ಬೇಕಾಗುತ್ತಿತ್ತು. ಮೂರುಗಂಟೆಗಳ ಕಾಲ ಕಷ್ಟಪಟ್ಟು ಮಾಡಿದ ಮೇಕಪ್‌ಗೆ ಮೂರರಿಂದ ನಾಲ್ಕು ಗಂಟೆಗಳಷ್ಟೇ ವಾಯಿದೆ. ಹೊತ್ತಾಗುತ್ತಿದ್ದಂತೆ ಕಷ್ಟವಾಗುತ್ತಿತ್ತು. ಒಟ್ಟಿನಲ್ಲಿ ತುಂಬಾ ನಾಜೂಕಾಗಿ ಇದನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದರು ಮೌನ ಗುಡ್ಡಮನೆ.
ಚಾಲೆಂಜಿಂಗ್ ಆದಂತಹ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಕಮಾಲ್ ಮಾಡುತ್ತಿರುವ ಮೌನ ಗುಡ್ಡೆಮನೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಾಕೆ. ಅಷ್ಟೇ ಅಲ್ಲದೇ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಮೌನ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬೆಡಗಿ ಹೌದು.
'ರಾಮಾಚಾರಿ' ಧಾರಾವಾಹಿಯ ಚಾರು ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟ ಮೌನ ಗುಡ್ಡಮನೆ ಇದೀಗ 'ಕುಲದಲ್ಲಿ ಕೀಳ್ಯಾವುದೋ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಆ ಮೂಲಕ ಮಗಳು ನಟಿಯಾಗಬೇಕು ಎಂಬ ಅಮ್ಮನ ಕನಸನ್ನು ನನಸು ಮಾಡಿದ್ದಾರೆ ಮೌನ ಗುಡ್ಡೆಮನೆ.


Click it and Unblock the Notifications











