Mouna Guddemane: 'ರಾಮಾಚಾರಿ' ಪತ್ನಿಯ 'ಬ್ರಹ್ಮಚಾರಿಣಿ 'ನೋಟಕ್ಕೆ ಫಿದಾ ಆದ ಫ್ಯಾನ್ಸ್!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಮಾಚಾರಿ ಧಾರಾವಾಹಿ ಜನ ಮೆಚ್ಚಿದ ಧಾರವಾಹಿ ಎಂದು ಹೇಳಿದರೆ ತಪ್ಪಾಗದು. ಧಾರಾವಾಹಿಯ ಪ್ರಮುಖ ಪಾತ್ರಧಾರಿಯಾದ ಚಾರು ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ರೂಪದಲ್ಲಿ ಕಾಣಿಸಿಕೊಂಡ ಈಕೆಯ ಫೋಟೋ ನೋಡಿದ ಜನರಿಗೆ ಸಾಕ್ಷಾತ್ ದೇವರನ್ನೇ ನೋಡಿದ ಹಾಗಾಗಿದೆ.
ಬ್ರಹ್ಮಚಾರಿಣಿ ದೇವಿಯಂತೆ ಕಾಣಿಸಿಕೊಂಡಿರುವ ಫೋಟೋಗಳಲ್ಲಿ ಚಾರು ಖ್ಯಾತಿ ಮೌನ ಗುಡ್ಡೆಮನೆ ಬಹಳ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಮೌನ ಗುಡ್ಡೆಮನೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರ ಅಭಿಮಾನಿಗಳು ಆಕೆಯನ್ನು ನೋಡಿ ಬಹಳ ಖುಷಿಪಟ್ಟಿದ್ದಾರೆ.

ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯ ರೂಪ ಧರಿಸಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಇದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ನೀಡಿದೆ. ಹಾಗೆಯೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳಿಗೆ ಸಾಕಷ್ಟು ಲೈಕ್ಸ್, ಕಾಮೆಂಟ್ ಬರುತ್ತಿವೆ.
ಬ್ರಹ್ಮಚಾರಿಣಿಯಾದ ರಾಮಾಚಾರಿಯ ಚಾರು!
ಬ್ರಹ್ಮಚಾರಿಣಿಯಂತೆ ಬಿಳಿ ಬಣ್ಣದ ಸೀರೆಯುಟ್ಟು, ಕೆಂಪು ರವಿಕೆ, ಕಾಸಗಲದ ಕೆಂಪು ಬೊಟ್ಟು ತೊಟ್ಟು ದೇವಿಯೇ ಅವತರಿಸಿ ಬಂದಂತೆ ಮೌನ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸೀರೆಗೆ ಮ್ಯಾಚ್ ಆಗುವಂತೆ ಕೆಂಪು ಬೊಟ್ಟು, ಕೆಂಪು ಲಿಪ್ ಸ್ಟಿಕ್, ಕೆಂಪು ಗಾಜಿನ ಬಳೆಗಳು, ಕೈಯಲ್ಲಿ ದೊಡ್ಡದಾದ ಉಂಗುರ, ಕಿವಿಯಲ್ಲಿ ಮುತ್ತಿನ ಜುಮುಕಿ, ಮೂಗಲ್ಲಿ ಮುತ್ತಿನ ಮೂಗುತಿ ಹಾಕಿ ಸಾಕ್ಷಾತ್ ಬ್ರಹ್ಮಚಾರಿಣಿ ದೇವಿ ಧರೆಗೆ ಇಳಿದು ಬಂದ ಹಾಗೆ ಕಾಣಿಸುತ್ತಾ ಇದ್ದಾರೆ.

ದೇವಿಯ ರೂಪದಲ್ಲಿ ಕಾಣಿಸಿಕೊಂಡ ನಟಿ
ಇನ್ನೂ ನಟಿ ಮೌನಾ ಗುಡ್ಡೆಮನೆ ದೇವಿಯ ರೂಪದಲ್ಲಿ ಎರಡು ವಿಡಿಯೋ ಮತ್ತು ಫೋಟೋಗಳನ್ನು ಸಹ ಶೇರ್ ಮಾಡಿದ್ದಾರೆ. ಹಾಗೆಯೇ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು ನೋಡುಗರಿಗೆ ಮತ್ತಷ್ಟು ಖುಷಿ ನೀಡುತ್ತಿದೆ. ಪ್ರಶಾಂತ್ ಮೇಕ್ ಓವರ್ ಲುಕ್ ನಲ್ಲಿ, ಅರುಣ್ ಕುಮಾರ್ ಪೋಟ್ರೇಟ್ ಫೋಟೋಗ್ರಾಫಿಯಲ್ಲಿ ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.
ಇನ್ನೂ ರಾಮಾಚಾರಿಯ ಹೆಂಡತಿ ಚಾರು ಗೆಟಪ್ ನೋಡಿದ ಅಭಿಮಾನಿಗಳು ಈಕೆ ಭೂಲೋಕದ ಅಪ್ಸರೆ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ನೋಡೋಕೆ ಮುದ್ದು ಮುದ್ದಾಗಿ ಇದ್ದು ರಾಮಾಚಾರಿಯ ಮುದ್ದಿನ ಹೆಂಡತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ..


Click it and Unblock the Notifications











