Mouna Guddemane:'ರಾಮಾಚಾರಿ' ಬಿಟ್ಟು ಫ್ಯಾಮಿಲಿ ಜೊತೆ ಕೊಡಗು ಸುತ್ತಿ ಬಂದ ಚಾರು
'ರಾಮಾಚಾರಿ' ಅದ್ಭುತವಾಗಿ ಮೂಡಿ ಬರುತ್ತಿರುವ ಧಾರಾವಾಹಿಗಳಲ್ಲಿ ಒಂದು. ಕಲರ್ಸ್ ಕನ್ನಡದಲ್ಲಿ ಪ್ರತಿನಿತ್ಯ ಪ್ರಸಾರ ಆಗುತ್ತಿರುವ ಈ ಧಾರಾವಾಹಿಗೆ ವೀಕ್ಷಕರ ಸಂಖ್ಯೆನೂ ದೊಡ್ಡದಿದೆ. ಇತ್ತೀಚೆಗಿನ ದಿನಗಳಲ್ಲಿ ಕಿಟ್ಟಿಯನ್ನು ಕಳೆದುಕೊಂಡ 'ರಾಮಾಚಾರಿ' ಕಂಗಾಲಾಗಿ ಹೋಗಿದ್ದಾನೆ. ಅದೆಷ್ಟೋ ಸಮಯದ ಬಳಿಕ ತಮ್ಮ ಸಿಕ್ಕಿದ್ದ. ಆದರೆ, ಆತನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇನಲ್ಲ ಎನ್ನುವ ಬೇಸರದಲ್ಲಿ ರಾಮಾಚಾರಿ ಇದ್ದಾನೆ. ಅದೇ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಮಿಂಚುತ್ತಿರುವ ಮೌನ ಗುಡ್ಡೆಮನೆ ರಾಮಾಚಾರಿಯ ಧರ್ಮಪತ್ನಿ ಚಾರು ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೈಶಾಖ ಮುಖವಾಡ ಕಳಚಲು ಚಾರು ಅದ್ಭುತವಾದ ಪ್ಲಾನ್ ಮಾಡಿಕೊಂಡಿದ್ದಾಳೆ. ಆದರೆ ವೈಶಾಖಗೆ ಇದೆಲ್ಲ ಗಮನಕ್ಕೆ ಬರುತ್ತಿಲ್ಲ. ಇನ್ನೂ ಮೌನ ಗುಡ್ಡೆಮನೆ ಧಾರಾವಾಹಿಯಲ್ಲಿ ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನ ಗೆಲ್ಲುತ್ತಿರುವುದಂತು ಸತ್ಯ. ಇತ್ತ ಧಾರಾವಾಹಿಯಲ್ಲಿ ಪ್ಲಾನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ. ಅತ್ತ 'ರಾಮಚಾರಿ'ಗೆ ಬ್ರೇಕ್ ಕೊಟ್ಟು ಕೊಡಗು ಕಡೆ ಪ್ರವಾಸ ಮಾಡಿ ಬಂದಿದ್ದಾರೆ.

ಮಳೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೀಗಾಗಿ ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ ಪ್ರಕೃತಿಯ ರಮಣೀಯ ದೃಶ್ಯವನ್ನು ಸವೆದಿದ್ದಾರೆ. ಆ ರಮಣೀಯ ದೃಶ್ಯವನ್ನು ವೀಕ್ಷಣೆ ಮಾಡಲು ರಾಮಾಚಾರಿಯ ಬೆಡಗಿ ಚಾರುಲತಾ ಇದೀಗ ಕೊಡಗು ಕಡೆಗೆ ಹೋಗಿ ಬಂದಿದ್ದಾರೆ. ಅಲ್ಲಿನ ಪ್ರಕೃತಿಯ ಸುಂದರವಾದ ನೋಟ ಫೋಟೊ ಹಾಗೂ ದೃಶ್ಯವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
'ರಾಮಾಚಾರಿ' ನಟಿ ಮಸ್ತ್ ಎಂಜಾಯ್
ನಟಿ ಮೌನ ಗುಡ್ಡೆಮನೆ, ತಲಕಾವೇರಿಯ ತೀರ್ಥೋದ್ಭವದ ಸ್ಥಳ, ಮಲ್ಲಲ್ಲಿ ಫಾಲ್ಸ್, ಮೂಖನ ಮನೆ ಅಬ್ಬಿ ಫಾಲ್ಸ್, ಮುಗಿಲ ಮಂಜು ಕಡೆಯಲ್ಲಿ ವಿಸಿಟ್ ಹಾಕಿ ಬಂದಿದ್ದಾರೆ. ಅಲ್ಲಿನ ಸುಂದರವಾದ ಪರಿಸರದಲ್ಲಿರುವ ಫೋಟೋ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಿಸರ್ಗದ ಮಡಿಲಿನಲ್ಲಿ ಮಳೆಯಲ್ಲಿ ನೆನೆದುಕೊಂಡು ಪ್ರಕೃತಿಯ ರಮಣೀಯ ದೃಶ್ಯವನ್ನು ವೀಕ್ಷಣೆ ಮಾಡಿ ಪ್ರಕೃತಿಯ ವೈಭವೋಪೇತ ದೃಶ್ಯಗಳಿಗೆ ಮನಸೋತಿದ್ದಾರೆ. ಈ ಫೋಟೋ ಹಾಗೂ ವಿಡಿಯೋವನ್ನು ನಟಿ ಮೌನ ಗುಡ್ಡೆಮನೆ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಅವರ ಫ್ಯಾನ್ಸ್ ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ನಟನೆಗೆ ಪ್ರಾಶಸ್ತ್ಯ ನೀಡಿದ ನಟಿ
ರಾಮಾಚಾರಿ ನಟಿ ಮೌನ ಗುಡ್ಡೇ ಮನೆ ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿದ್ದಾರೆ. ರಾಮಾಚಾರಿ ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಮೌನ ಗುಡ್ಡೆಮನೆ ಮೂಲತಃ ಮಂಗಳೂರಿನವರು. 17ನೇ ವಯಸ್ಸಿಗೆ ಮಾಡೆಲಿಂಗ್ ಪ್ರಪಂಚಕ್ಕೆ ಕಾಲಿಟ್ಟ ಈ ನಟಿ ಧಾರಾವಾಹಿಗಳಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಬಳಿಕ 2020ರಲ್ಲಿ ನಡೆದ 'ಮಿಸ್ ಟೀನ್ ತುಳುನಾಡು' ಸ್ಪರ್ಧೆಯಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಮೌನ ಗುಡ್ಡೆಮನೆಗೆ ನಟನೆ ಅಂದರೆ ಬುಲು ಇಷ್ಟ. ಈ ಕಾರಣಕ್ಕೆ ಮಾಡಲಿಂಗ್‌ನಿಂದ ಕಿರುತೆರೆ ಕಡೆ ಮುಖ ಮಾಡಿದ್ದು, ಇಲ್ಲಿ ಸಕ್ಸಸ್ ಕಂಡಿದ್ದಾರೆ.


Click it and Unblock the Notifications











