Ramachari: ಚಾರು ಪ್ರಾರ್ಥನೆ ಫಲಿಸಿತು.. ವೈಶಾಖಳಿಂದ ಸತ್ಯ ಮಿಸ್ ಆಯ್ತು!

By ಎಸ್ ಸುಮಂತ್

ಚಾರು ಅಮ್ಮ ಮಾನ್ಯತಾ ಹಾಗೂ ವೈಶಾಖಳ ಕುತಂತ್ರದಿಂದ ರಾಮಾಚಾರಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಅವನನ್ನು ಉಳಿಸಿಕೊಳ್ಳಲು ಚಾರು ಪಟ್ಟ ಪಾಡು ಅಷ್ಟಿಷ್ಟಲ್ಲ. ಕಿಟ್ಟಿ ಕೂಡ ಅಣ್ಣನ ಉಳಿವಿಗಾಗಿ ತನ್ನ ಪ್ರಾಣವನ್ನೇ ಒತ್ತೆ ಇಟ್ಟಿದ್ದ. ಚಾರು ಎಷ್ಟೇ ಆಗಲಿ ರಾಮಚಾರಿ ಹೆಂಡತಿ ಅಲ್ವೆ. ಎಲ್ಲಾ ರೀತಿ-ನೀತಿ, ಆಚಾರ - ವಿಚಾರಗಳನ್ನೆಲ್ಲಾ ಕಲಿತಿದ್ದಾಳೆ. ಅವಳ ಪ್ರಾರ್ಥನೆ ಈಗ ಫಲ ಕೊಟ್ಟಿದೆ.

ಚಾರು ತನ್ನ ಗಂಡನಿಗಾಗಿ ಕಪಾಲಿ ಬೆಟ್ಟಕ್ಕೆ ಹೋಗಿ ಸಾವಿನ ಬಾಗಿಲನ್ನೇ ತಟ್ಟಿ ಬಂದಿದ್ದಾಳೆ. ಆಚಾರ್ಯರ ಮನೆಗೆ ಸೊಸೆಯಾಗಿ ಬಂದ ಮೇಲೆ ಚಾರು ತುಂಬಾನೇ ಬದಲಾಗಿದ್ದಾಳೆ. ಮನೆಯವರ ಸುಖ, ಶಾಂತಿ, ನೆಮ್ಮದಿಗಾಗಿ ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತಾಳೆ. ಈಗ ಗಂಡನ ಬದುಕಿಗಾಗಿಯೂ ಅಷ್ಟೇ ತನ್ನ ಜೀವವನ್ನೇ ಪಣಕ್ಕೆ‌ ಇಟ್ಟಿದ್ದಾಳೆ. ವೈಶಾಖ ಆ ರೀತಿಯ ಭಾವನೆ ಇರುವವಳಲ್ಲ. ಆದರೂ ದೇವರು ಚಾರು ಪರವಾಗಿಯೇ ಇದ್ದಾನೆ.‌

Ramachari kannada serial Written Update on April 1st episode

ಸತ್ಯ ಗೊತ್ತಾಗಬೇಕಿದ್ದ ಸಮಯ

ನಾರಾಯಣ ಆಚಾರ್ಯರಿಗೆ ನಾಲ್ವರು ಮಕ್ಕಳು. ಕೃಷ್ಣ ಹಾಗೂ ರಾಮಚಾರಿ ನೋಡುವುದಕ್ಕೆ ಒಂದೇ ಥರ ಇದ್ದವರು. ಆದರೆ ಕೃಷ್ಣ ಮಗುವಿದ್ದಾಗಲೇ ಕಳೆದು ಹೋದ. ಯಾರ ಜೊತೆಗೋ ಬೆಳೆದು ರೌಡಿಯಾದ. ಆದರೆ ರಾಮಚಾರಿ ಸದ್ಗುಣ ಸಂಪತ್ತನ್ನು ತುಂಬಿಕೊಂಡು ಬೆಳೆದಿದ್ದ. ಕೃಷ್ಣ ಕಳೆದು ಹೋದ ಸುದ್ದಿಯನ್ನು ನಾರಾಯಣ ಆಚಾರ್ಯರು ಪೇಪರ್ ನಲ್ಲಿ ಸುದ್ದಿ ಹಾಕಿಸಿದ್ದರು. ಆ ಪೇಪರ್ ವೈಶಾಖಗಳ ಕೈಗೆ ಸಿಕ್ಕಿಬಿಟ್ಟಿತ್ತು.

ಶೃತಿ ಕೈಗೆ ಸಿಕ್ಕಿದ ಸತ್ಯದ ಪೇಪರ್

ವೈಶಾಖಗೆ ಸ್ವಲ್ಪ ಸತ್ಯ ಗೊತ್ತಾದರೂ ಸಾಕು. ಮೊದಲೆರ ಮನೆಯಲ್ಲಿರುವುದ ರಾಮಾಚಾರಿನ ಕಿಟ್ಟಿನಾ ಎಂಬ ಅನುಮಾನ ಅವಳದ್ದು. ಆ ಪೇಪರ್ ಓದಬೇಕು ಎನ್ನುವಷ್ಟರಲ್ಲಿ ಫೋನ್ ಒಂದು ರಿಂಗ್ ಆಗಿತ್ತು. ಟೇಬಲ್ ಮೇಲೆಯೇ ಪೇಪರ್ ಇಟ್ಟು ಒಳಗೆ ಹೋದಳು ವೈಶಾಖ. ಆದರೆ ಅಲ್ಲಿಗೆ ಬಂದ ಶೃತಿ ಕಣ್ಣಿಗೆ ಆ ಪೇಪರ್ ಕಂಡಿದೆ. ಮುದ್ದು ಅಣ್ಣ ಎಂದು ಅಲ್ಲಿ ಬಿಡದೆ ಎತ್ತುಕೊಂಡು ಹೋಗಿದ್ದಾಳೆ. ಇನ್ನೇನು ವೈಶಾಖಳ ಮುಂದೆ ಅನಾವರಣವಾಗಬೇಕಿದ್ದ ಸತ್ಯ ಕಣ್ಮರೆಯಾಗಿದೆ.

Ramachari kannada serial Written Update on April 1st episode

ತಾನೂ ಸಾಯುವ ಮುಂದಾದ ಚಾರು

ರಾಮಾಚಾರಿಯನ್ನು ಬದುಕಿಸಲು ಚಾರು ಮಾಡುತ್ತಿರುವ ವ್ರತ, ಪೂಜೆ, ಪುನಸ್ಕಾರಗಳು ಒಂದೆರಡಲ್ಲ. ಆದರೂ ರಾಮಚಾರಿಯ ಆರೋಗ್ಯ ಕೊಂಚವೂ ಸುಧಾರಿಸಲಿಲ್ಲ. ಕಪಾಲಿ ಬೆಟ್ಟಕ್ಕೆ ಹೋಗಿ ಪ್ರಾಣ ಜ್ಯೋತಿಯನ್ನು ತಂದರೂ ಉಸಿರು ಬಂದಿಲ್ಲ. ಇದು ಚಾರುಗೆ ಮತ್ತಷ್ಟು ನೋವು ಕೊಟ್ಟಿತ್ತು. ತಾನೂ ಮುಂದೇನು ಮಾಡಬೇಕೆಂದು ತೋಚದಾಯಿತು. ನೀನು ಬದುಕಲಿಲ್ಲ ಅಂದರೆ ನಾನು ಸತ್ತೆ ಹೋಗ್ತೀನಿ. ಅದೊಂದೆ ನನಗೆ ದಾರಿ ಎಂದು, ರಾಮಾಚಾರಿಯ ಎದೆಯ ಮೇಲೆ ಮಲಗಿ ಕಣ್ಣೀರು ಹಾಕಿದಳು.

ಚಾರು ಕಣ್ಣೀರಿಗೆ ಬದುಕಿದ ರಾಮಾಚಾರಿ

ರಾಮಾಚಾರಿ ಕೋಮಾ ಸ್ಥಿತಿಯಲ್ಲಿದ್ದರೂ, ಚಾರು ಮಾತಿಗೆ, ಅವಳ ಭಾವನೆಗೆ ಆಗಾಗ ಸ್ಪಂದಿಸುತ್ತಿದ್ದ. ಆದರೆ ಪೂರ್ತಿಯಾಗಿ ಎಚ್ಚರವಾಗಿಲ್ಲ. ಈಗ ಚಾರು ಕಣ್ಣಿಂದ ನೀರು ಹರಿದಿದೆ. ಆ ಕಣ್ಣೀರು ರಾಮಾಚಾರಿಯ ಎದೆಯ ಮೇಲೆ ನದಿ ಹರಿದಂತೆ ಫೀಲ್ ಆಗಿದೆ. ಚಾರುಳ ಸಾತುವ ಮಾತಿನಿಂದ ರಾಮಾಚಾರಿಗೆ ನೋವಾವಿದೆ. ತಕ್ಷಣ ಎಚ್ಚರವಾವಿದ್ದು, ಚಾರು ಮೇಡಂ ಎಂದಿದ್ದಾನೆ. ಆ ಒಂದು ಮಾತಿಗೆ ಚಾರು ಅದೆಷ್ಟು ದಿನಗಳಿಂದ ಕಾಯುತ್ತಿದ್ದಳೋ. ರಾಮಾಚಾರಿ ಬೇಗ ಹುಷಾರಾಗ್ಲಿ ಅಂತಾನೆ ಇದ್ದಬದ್ದ ದೇವರಿಗೆಲ್ಲ ಹರಕೆ ಹೊತ್ತು, ಕೈ ಮುಗಿದಿದ್ದಳು. ಅದಕ್ಕೆ ಪ್ರತಿಫಲ ಸಿಕ್ಕಿದೆ.

More from Filmibeat

English summary
Ramachari kannada serial today episode. Here is the details about Ramachari came to life;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X