Ramachari: ಮಾನ್ಯತಾ, ವೈಶಾಖಗೆ ತನ್ನ ವರಸೆ ತೋರಿಸಲು ಶುರು ಮಾಡಿದ ಕಿಟ್ಟಿ!
ಮಾನ್ಯತಾಗೆ ತನ್ನ ಮಗಳ ಮೇಲೆ ಭಾರೀ ವ್ಯಾಮೋಹ. ಮಗಳು ಗಂಡನ ಮನೆಯಲ್ಲಿರಬಾರದು, ನನ್ನ ಮನೆಗೆ ವಾಪಾಸ್ ಬರಬೇಕೆಂಬ ಹಠ. ತಾನೂ ನೋಡಿದ ಹುಡುಗನನ್ನು ಮದುವೆಯಾಗದೆ, ತಾನೂ ಪ್ರೀತಿಸಿದ ಹುಡುಗನನ್ನು ಮದುವೆ ಆಗಿ ಬಿಟ್ಟಳು ಎಂಬ ಕೋಪ. ಚಾರು ಸಾಕಷ್ಟು ಸಲ ಹೇಳಿದ್ದಾಳೆ, ತನ್ನ ಗಂಡನನ್ನು ಬಿಟ್ಟು ಎಲ್ಲಿಯೂ ಬರುವುದಿಲ್ಲ ಎಂದು. ಆದರೂ ಮಾನ್ಯತಾ ತನ್ನ ಕೆಟ್ಟ ಬುದ್ದಿಯನ್ನು ಬಿಡುತ್ತಿಲ್ಲ.
ಈಗ ರಾಮಚಾರಿಯ ತದೃಪಿ ಕಿಟ್ಟಿ ಸಿಕ್ಕಿದ್ದಾನೆ. ಅವನನ್ನು ಬಳಸಿಕೊಂಡು ಮಾನ್ಯತಾ, ಮನೆ ಒಡೆಯುವ ಕೆಲಸ ಮಾಡುತ್ತಿದ್ದಾಳೆ. ಆದರೆ ಕಿಟ್ಟಿ ಕೂಡ ನಾರಾಯಣ ಆಚಾರ್ಯರ ಮಗನೇ ಆಗಿರುವ ಕಾರಣ, ಮಾನ್ಯತಾ ಹಾಗೂ ವೈಶಾಖ ಎದುರು ತಿರುಗಿ ಬಿದ್ದಿದ್ದಾನೆ.

ಗಂಡನಿಂದ ಮಾನ್ಯತಾಗೆ ಕ್ಲಾಸ್
ಮಾನ್ಯತಾ ಹಾಗೂ ಪೊಲೀಸ್ ಸೇರಿ ಹೇಗಾದರೂ ಮಾಡಿ ರಾಮಚಾರಿಯನ್ನು ಕೊಲ್ಲಬೇಕೆಂದು ಓಡಾಡುತ್ತಿದ್ದಾರೆ. ಆದರೆ ಚಾರು ಕಷ್ಟದಿಂದ ರಾಮಚಾರಿ ಬದುಕಿದ್ದಾನೆ. ಉಸಿರೊಂದು ಬರಬೇಕಿದೆ. ಆದರೆ ಈಗಲೂ ಮಾನ್ಯತಾ ತನ್ನ ಕಿತಾಪತಿ ಬುದ್ದಿಯನ್ನು ಬಿಟ್ಟಿಲ್ಲ. ಫೋನ್ ಮಾಡಿ ಮಾಡಿ, ರಾಮಾಚಾರಿಯನ್ನು ಹುಡುಕಿಸುವ ಪ್ರಯತ್ನ ಮಾಡುತ್ತಿದ್ದಾಳೆ. ಇದು ಮಾನ್ಯತಾ ಗಂಡನ ಕಿವಿಗೆ ಬಿದ್ದಿದೆ. ಗಂಡನಿಗೆ ಸ್ವಲ್ಪ ಹೆದರುವ ಮಾನ್ಯತಾ, ಏನೋ ಒಂದು ನೆಪ ಹೇಳಿ ತಪ್ಪಿಸಿಕೊಂಡಿದ್ದಾಳೆ. ಆದರೆ ಜೈಗೇನಾದರೂ ಮಗಳ ಜೀವನದಲ್ಲಿ ಈ ರೀತಿ ಆಟವಾಡಿದ್ದಾಳೆ ಎಂದು ಗೊತ್ತಾದರೆ ಮಾನ್ಯತಾ ಕಥೆ ಅವತ್ತೆ ಮುಗಿಯುತ್ತೆ.
ಬುದ್ದಿ ಕಲಿಸಲು ಹೊರಟ ಕಿಟ್ಟಿ
ರಾಮಾಚಾರಿ ತಪ್ಪಿಸಿಕೊಂಡಾಗಿನಿಂದಲೂ ಮೂರು ಜನಕ್ಕೆ ಸಿಕ್ಕಾಪಟ್ಟೆ ಆತಂಕ ಶುರುವಾಗಿದೆ. ರಾಮಚಾರಿಯನ್ನು ಕೊಲ್ಲುವ ಎಲ್ಲಾ ಪ್ರಯತ್ನಕ್ಕೂ ಕಿಟ್ಟಿ ಫುಲ್ ಸ್ಟಾಪ್ ಇಟ್ಟಿದ್ದಾನೆ. ರಾಮಚಾರಿಯನ್ನು ಅತ್ತಿಗೆ ಕಾಪಾಡುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಇನ್ನು ಖುಷಿಯಾಗಿದ್ದಾನೆ. ಅಣ್ಣನಿಗೆ ಈ ಥರದ ಸ್ಥಿತಿ ತಂದ ಎಲ್ಲರಿಗೂ ಒಂದು ಪಾಠ ಕಲಿಸಲೇಬೇಕೆಂದುಕೊಂಡು ಕಿಟ್ಟಿ ಪಣತೊಟ್ಟಿದ್ದಾನೆ. ಹೀಗಾಗಿಯೇ ದುಷ್ಟರಿಗೆ ನಡುಕ ಹುಟ್ಟಿಸಿದ್ದಾನೆ. ಅದರಲ್ಲೂ ಮಾನ್ಯತಾ ಕ್ಷಣ ಕ್ಷಣಕ್ಕೂ ಹೆದರಿಕೊಂಡು ಬದುಕುತ್ತಿದ್ದಾಳೆ.
ಅತ್ತೆಗೆ ಧೈರ್ಯ ತುಂಬಿದ ಚಾರು
ಇತ್ತ ಮನೆಯಲ್ಲಿ ಸತ್ಯ ಗೊತ್ತಾಗಿದೆ. ಈಗಾಗಲೇ ಕಿಟ್ಟಿಯೂ ನಾನೇ ನಿಮ್ಮ ಎರಡನೇ ಮಗ ಅಂತ ಹೇಳಿದ್ದಾನೆ. ರಾಮಚಾರಿ ಸಂಕಷ್ಟದಲ್ಲಿ ಇದ್ದಾನೆ ಎಂಬುದನ್ನು ಚಾರು ಹೇಳಿದ್ದಾಳೆ. ಆದರೆ ಆದಷ್ಟು ಬೇಗ ಹುಷಾರಾಗುತ್ತಾರೆ ಅಂತಾನೂ ಭರವಸೆ ನೀಡಿದ್ದಾಳೆ. ಅತ್ತೆಗೆ ಧೈರ್ಯದ ಮಾತುಗಳನ್ನು ಹೇಳಿದ್ದಾನೆ. ನಾರಾಯಣ ಆಚಾರ್ಯರಿಗೆ ಈಗಾಗಲೇ ಆತ ಕಿಟ್ಟಿ ಎಂಬುದು ಗೊತ್ತಾಗಿದೆ. ಎರಡನೇ ಮಗನನ್ನು ನೋಡಿದ ಖುಷಿಯಲ್ಲಿ ನಾರಾಯಣ ಆಚಾರ್ಯರಿದ್ದಾರೆ. ಈಗ ಮನೆಯವರಿಗೆಲ್ಲಾ ಗೊತ್ತಾಗಿದೆ. ಸತ್ಯ ಗೊತ್ತಾಗಿದೆ ಎಂಬ ಖುಷಿಯ ನಡುವೆ ರಾಮಾಚಾರಿಯ ಸ್ಥಿತಿ ನೋವು ಕೊಟ್ಟಿದೆ.

ವೈಶಾಖಗೆ ಶುರುವಾಗಿದೆ ನಡುಕ
ಮನೆಯಲ್ಲಿ ನೆಮ್ಮದಿಯಾಗಿ ಇರಲಾರದೇ ಒದ್ದಾಡುತ್ತಿರುವುದು ವೈಶಾಖ. ಯಾಕಂದ್ರೆ ಈಗಾಗಲೇ ಮಾವನನ್ನು ಸಾಯಿಸಲು ಹೋಗಿ ತಹಲಾಕಿಕೊಂಡಿದ್ದಾಳೆ. ಆದರೆ ಮಾವನಿಗೆ ಮಾತನಾಡಲು ಬಾರದೆ ಇರುವ ಕಾರಣಕ್ಕೆ ಬಚಾವ್ ಆಗಿದ್ದಾಳೆ. ಈಗ ರಾಮಚಾರಿಯ ಜೀವಕ್ಕೂ ಕುತ್ತು ತಂದಿದ್ದಾಳೆ. ಇದೆಲ್ಲಾ ಸತ್ಯ ಗೊತ್ತಾಗಿ ಬಿಟ್ಟರೆ ನನ್ನನ್ನು ಜೀವ ಸಹಿತ ಉಳಿಸಲ್ಲ ಎಂಬ ಆತಂಕ ಅವಳಿಗೆ ಕ್ಷಣ ಕ್ಷಣಕ್ಕೂ ಕಾಡುತ್ತಿದೆ. ಆದರೆ ಕಿಟ್ಟಿಗೆ ವೈಶಾಖ ನಡತೆ ಕುತೂಹಲಕಾರಿಯಾಗಿಯೇ ಉಳಿದಿದೆ. ಮಾನ್ಯತಾ ದ್ವೇಷಕಾರುವುದರಲ್ಲಿ ಅರ್ಥವಿದೆ. ಆದರೆ ವೈಶಾಖ ಹಿಂದಿನ ಉದ್ದೇಶ ಏನಿರಬಹುದು ಎಂದೇ ಯೋಚಿಸುತ್ತಿದ್ದಾನೆ. ಇದಕ್ಕೆ ವೈಶಾಖ ಕೂಡ ಉತ್ತರ ನೀಡಿಲ್ಲ.


Click it and Unblock the Notifications