Ramachari: ಜನರಿಗೆ ಇಷ್ಟವಾಗಿರುವ ಕೃಷ್ಣ - ಚಾರುಗೆ ಅರ್ಥ ಆಗ್ತಾನಾ?
ಮಾನ್ಯತಾಳ ಸ್ವಾರ್ಥ, ವೈಶಾಖಳ ದುರಾಸೆಯಿಂದ ರಾಮಾಚಾರಿಯ ಪ್ರಾಣ ಅಪಾಯದಲ್ಲಿದೆ. ಗಂಡನನ್ನು ಉಳಿಸಿಕೊಳ್ಳಲು ಚಾರು ಪಟ್ಟ ಪಾಡು ಅಷ್ಟಿಷ್ಟಲ್ಲ. ತನ್ನ ಗಂಡನ ಈ ಸ್ಥಿತಿಯ ಹಿಂದೆ ಅಮ್ಮನ ಕೈವಾಡ ಇದೆ ಎಂದು ಗೊತ್ತಾದರೆ ಖಂಡಿತ ಸುಮ್ಮನೆ ಬಿಡುವವಳಲ್ಲ ಚಾರು. ಆದರೆ ಇನ್ನು ಆ ಸತ್ಯ ಗೊತ್ತಾಗಿಲ್ಲ.
ರಾಮಾಚಾರಿಯ ಸುದ್ದಿಗೆ ಬಂದರೇನೆ ಸರಿಯಾಗಿ ಪಾಠ ಕಲಿಸುವ ಚಾರು, ಪ್ರಾಣ ತೆಗೆಯುವ ಹಂತಕ್ಕೆ ಹೋದರೆ ಅವರ ಪ್ರಾಣವನ್ನೇ ತೆಗೆದು ಬಿಡುತ್ತಾಳೆ. ಈಗ ಕಿಟ್ಟಿ ಬೇರೆ ಪೂರ್ತಿಯಾಗಿ ಬದಲಾಗಿದ್ದಾನೆ. ಅಪ್ಪ, ಅಮ್ಮ, ತಂಗಿ, ಅತ್ತಿಗೆ, ಅಜ್ಜಿ ಸಿಕ್ಕ ಖುಷಿಯಲ್ಲಿದ್ದಾನೆ. ಶತ್ರುಗಳಿಗೆ ಪಾಠ ಕಲಿಸುವುದಲ್ಲದೇ ಅಣ್ಣನನ್ನು ಬದುಕಿಸುತ್ತೇನೆ ಎಂಬ ಹಠ ತೊಟ್ಟಿದ್ದಾನೆ. ಈ ಮೂಲಕ ಕಿಟ್ಟಿ ನೋಡುಗರಿಗೆ ಇಷ್ಟವಾಗುತ್ತಿದ್ದಾನೆ.

ದುಷ್ಟರ ಕೈಯಿಂದ ಚಾರು ಬಚಾವ್
ರಾಮಚಾರಿಯ ಪ್ರಾಣ ಉಳಿಯಬೇಕು ಎಂದರೆ ಪ್ರಾಣ ಜ್ಯೋತಿಯನ್ನು ತರಬೇಕಿತ್ತು. ಅದಕ್ಕಾಗಿ ಕಪಾಲಿ ಬೆಟ್ಟಕ್ಕೆ ಹೋಗಬೇಕಿತ್ತು. ಕಪಾಲಿ ಬೆಟ್ಟದಲ್ಲಿ ದುಷ್ಟರೇ ಹೆಚ್ಚಾಗಿದ್ದರು. ಚಾರು ದುಷ್ಟರ ಕೈನಲ್ಲಿ ಸಿಕ್ಕಿಬಿದ್ದಿದ್ದಳು. ಅಷ್ಟರಲ್ಲಿ ದೇವರಂತೆ ಬಂದವನು ಕಿಟ್ಟಿ. ಎಲ್ಲರನ್ನು ಹೊಡೆದು ಬಡಿದು ಚಾರುಳನ್ನು ಕಾಪಾಡಿಕೊಂಡು ಬಂದ. ಆದರೆ ಇದು ಚಾರುಗೆ ಇಷ್ಟವಿರಲಿಲ್ಲ. ಯಾಕಂದ್ರೆ ಚಾರುಗೆ ತನ್ನ ಗಂಡ ಉಳಿಯುವುದು ಬೇಕಿತ್ತು. ತನ್ನ ಪ್ರಾಣ ಹೋದರು ರಾಮಚಾರಿ ಉಳಿಯುವುದು ಬೇಕಿತ್ತು.
ಕಿಟ್ಟಿಯನ್ನು ಬೈದ ಚಾರು
ಕಿಟ್ಟಿ ಬೆಟ್ಟದಿಂದ ಅತ್ತಿಗೆಯನ್ನು ರಕ್ಷಿಸಿ ಕರೆದುಕೊಂಡು ಬಂದು, ಅಣ್ಣನ ಬಳಿ ಮಾತನಾಡುವುದಕ್ಕೆ ಶುರು ಮಾಡಿದ್ದ. ದೇವರಲ್ಲಿ ಬೇಡಿಕೊಳ್ಳುತ್ತಿದ್ದ. ಅಮ್ಮನಿಗೆ ಮಾತು ಕೊಟ್ಟಿದ್ದಿನಿ. ಬೇಗ ಹುಷಾರಾಗು ಅಣ್ಣ ಅಂತ ಹೇಳುವಾಗಲೇ, ಚಾರು ಅಲ್ಲಿಗೆ ಬಂದರು. ಕಿಟ್ಟಿಯನ್ನು ಬೈದಿದ್ದಾಳೆ. ಇಷ್ಟೆಲ್ಲಾ ಮಾಡಿದ್ದೇ ಸರಿ ಇಲ್ಲ. ಈಗ ಬೇರೆ ಇಲ್ಲಿಗೆ ಬಂದುಇದ್ದು ಯಾಕೆ. ನೀನು ಸುಮ್ಮನೆ ಇದ್ದಿದ್ದರೆ ನನ್ನ ಗಂಡನ ಪ್ರಾಣ ಉಳಿಸುತ್ತಾ ಇದ್ದೆ ಎಂದಿದ್ದಾಳೆ. ಆದತೆ ಕಿಟ್ಟಿ ಕ್ಷಮೆಯನ್ನು ಕೇಳಿದ್ದಾನೆ. ಮನೆಗೆ ಬಂದ ಮೇಲೆ ಅಪ್ಪ ಅಮ್ಮ ಅಂತ ಗೊತ್ತಾಯ್ತು. ಕ್ಷಮಿಸಿ ಎಂದರು, ಕ್ಷಮಿಸುತ್ತಿಲ್ಲ.
ಪ್ರಾಣ ಜ್ಯೋತಿ ತಂದ ಕಿಟ್ಟಿ
ಕಿಟ್ಟಿಯನ್ನು ಮನಬಂದಂತೆ ಬೈಯ್ಯುತ್ತಿರುವಾಗಲೇ ಗುರೂಜಿಗಳು ಬಂದರು. ಆತನನ್ನು ಬೈಯ್ಯಬೇಡ ಅಮ್ಮ. ಆತ ಬರೀ ನಿನ್ನನ್ನು ಮಾತ್ರ ಅಲ್ಲ, ಪ್ರಾಣ ಜ್ಯೋತಿಯನ್ನು ತಂದಿದ್ದಾರೆ ಎಂದು ಹೇಳಿದ್ದಾರೆ. ಆಗ ಚಾರುಗೆ ಕೊಂಚ ಸಮಾಧಾನವಾಗಿದೆ. ಅಣ್ಣನನ್ನು ಉಳಿಸುವುದಕ್ಕೆ ತಮ್ಮ ಇಷ್ಟೆಲ್ಲ ರಿಸ್ಕ್ ತೆಗೆದುಕೊಂಡಿದ್ದು ಕೇಳಿ ಸಮಾಧಾನಗೊಂಡಿದ್ದಾಳೆ. ಆದರೆ ಈ ಸಮಯಕ್ಕೆ ರಾಮಾಚಾರಿ ಹುಷಾರಾಗಿ ಬಿಟ್ಟರೆ ಸಾಕಾಗಿದೆ.

ಕಿಟ್ಟಿಯನ್ನು ಇಷ್ಟಪಟ್ಟ ಪ್ರೇಕ್ಷಕರು
ಕಿಟ್ಟಿಗೆ ತನ್ನ ಅಪ್ಪ-ಅಮ್ಮ ಸಿಕ್ಕಿರುವುದು ಖುಷಿಯಾಗಿದೆ. ಯಾಕಂದ್ರೆ ಕಿಟ್ಟಿ ಇಷ್ಟು ದಿನ ಅಪ್ಪ ಅಮ್ಮ ಕೆಟ್ಟವರು ಎಂದೇ ಭಾವಿಸಿದ್ದ. ಆದರೆ ಮನೆಗೆ ಬಂದ ಮೇಲೆಯೇ ಗೊತ್ತಾಗಿದ್ದು ಇನ್ನು ಹುಡುಕಾಟ ನಡೆಸುತ್ತಿದ್ದಾರೆ ಅಂತ. ಬಳಿಕ ಅಪ್ಪ, ಅಮ್ಮನ ಬಳಿ ಕ್ಷಮೆ ಕೇಳಿ, ಈಗ ಒಳ್ಳೆಯ ಮಗನಾಗಿದ್ದಾನೆ. ಇದನ್ನು ಗಮನಿಸಿದ ಪ್ರೇಕ್ಷಕರು ನಮಗೆ ಕಿಟ್ಟಿ ಎಂದರೆ ಇಷ್ಟ ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಕಿಟ್ಟಿಯನ್ನು ಚಾರು ಈಗಲಾದರೂ ಅರ್ಥ ಮಾಡಿಕೊಳ್ಳಬೇಕು ಅಷ್ಟೇ. ಅಲ್ಲಮ್ಮ ಚಾರು, ಕೃಷ್ಟ ಬರದೆ ಇದ್ದಿದ್ದರೆ ನೀನು ಸತ್ತೋಗ್ತಾ ಇದ್ದೆ ಅಂತೆಲ್ಲ ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











