Devika Bhat: ದಿಢೀರ್ 'ರಾಮಾಚಾರಿ' ಧಾರಾವಾಹಿ ಬಿಟ್ಟ ರುಕ್ಕು; ಕೃಷ್ಣನ ಫ್ಯಾನ್ಸ್ ಬೇಸರ!
'ರಾಮಾಚಾರಿ' ಧಾರಾವಾಹಿಯಲ್ಲಿ ಕಥೆ ಒಳ್ಳೆ ಟರ್ನಿಂಗ್ ತೆಗೆದುಕೊಳ್ಳುತ್ತಿದೆ. ಹೀಗಾಗಿ ಕೆಲ ವರ್ಷದಿಂದಾನೂ ಧಾರಾವಾಹಿ ನೋಡುಗರು ಆ ಕಡೆ ಈ ಕಡೆ ಆಗಿಲ್ಲ. ನಾರಾಯಣ ಆಚಾರ್ಯ ಕುಟುಂಬದವರನ್ನ ಕೈ ಬಿಟ್ಟಿಲ್ಲ. ಈಗ ನಾರಾಯಣ ಆಚಾರ್ಯ ಕುಟುಂಬದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಕಿಟ್ಟಿ ಹಾಗೂ ರುಕ್ಕು ಒಂದು ಮಾಡುವುದಕ್ಕೆ ಮನೆಯವರೆಲ್ಲ ಒಂದಾಗಿದ್ದಾರೆ.
ಕೃಷ್ಣ-ರುಕ್ಕು ಮನಸ್ಸೊಳಗೆ ಪ್ರೀತಿ ಮಾಡ್ತಿದ್ದಾರೆ ಎಂದು ಗೊತ್ತಾದಾಗಲೇ ಮನೆಯವರೆಲ್ಲ ಇಬ್ಬರನ್ನು ಒಂದು ಮಾಡುವುದಕ್ಕೆ ಮುಂದಾದರೂ. ಹಾಗಂತ ಅಣ್ಣಾಜಿ ಮನೆಯಲ್ಲಿದ್ದ ರುಕ್ಕು ಅವರನ್ನು ಕರೆದುಕೊಂಡು ಬರಲು. ಆದರೂ 'ಹಬ್ಬ' ಸಿನಿಮಾ ರೇಂಜಿಗೆ ಕರೆದುಕೊಂಡು ಬಂದ್ರು. ಈಗ ರುಕ್ಕುನೇ ಸೀರಿಯಲ್ ಬಿಟ್ಟಿದ್ದಾರೆ.

ದೇವಸ್ಥಾನದಲ್ಲಿ ಮದುವೆ ತಯಾರಿ
ಮನೆ ದೇವರ ಸನ್ನಿಧಾನದಲ್ಲಿ ಕೃಷ್ಣ ಮತ್ತು ರುಕ್ಕು ಮದುವೆ ಸಿದ್ಧತೆ ನಡೆದಿತ್ತು. ಆದರೆ ಕೋದಂಡ, ಮುರಾರಿ, ರಾಮಾಚಾರಿ, ಚಾರುಗೆ ಗಾಬರಿ ಇತ್ತು. ಯಾಕಂದ್ರೆ ಅರ್ಧ ದಾರಿಯಿಂದ ಅಣ್ಣಾಜಿ ಮುರಾರಿಯನ್ನ ಫಾಲೋ ಮಾಡಿದ್ದರು. ಇದನ್ನ ಹೇಳಿದಾಗಿನಿಂದ ಮನೆಯವರೆಲ್ಲ ಗಾಬರಿಯಾದರು. ಆದರೂ ಏನಾದರೂ ಆಗಲಿ ಮೊದಲು ಮದುವೆ ಮಾಡೋಣ ಎಂದೇ ನಿರ್ಧರಿಸಿದರು.
ರುಕ್ಕು ಮದುವೆ ನಿಲ್ಲಿಸಿದ ಅಣ್ಣಾಜಿ
ರುಕ್ಕುಳನ್ನು ಪ್ಲ್ಯಾನ್ ಮಾಡಿ ಅಣ್ಣಾಜಿ ಮನೆಯಿಂದ ಕರೆದುಕೊಂಡು ಬಂದಿದ್ದಾಯ್ತು. ಈಗ ಮದುವೆ ಮಾಡುವುದಕ್ಕೆ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಮನೆ ದೇವರ ದೇವಸ್ಥಾನದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಅಲ್ಲಿಗೆ ಅಣ್ಣಾಜಿ ಬಂದೇ ಬಿಟ್ಟರು. ರುಕ್ಕು ಬೇಡಿಕೊಂಡರು ಪ್ರಯೋಜನವಾಗಲಿಲ್ಲ. ತಾಳಿ ಕಿತ್ತುಕೊಂಡು ನಿಲ್ಲಿಸಿಬಿಟ್ಟ.
ಧಾರಾವಾಹಿಯಿಂದ ರುಕ್ಕು ಹೊರಕ್ಕೆ
ಇತ್ತ ರುಕ್ಕು ಪಾತ್ರಧಾರಿ ದೇವಿಕಾ ಭಟ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದು, 'ರಾಮಾಚಾರಿ ಧಾರಾವಾಹಿಯ ರುಕ್ಮಿಣಿ ಪಾತ್ರಕ್ಕೆ ನಾನು ವಿದಾಯ ಹೇಳುವ ಸಮಯ ಬಂದಿದೆ.. ಈ ಪ್ರಯಾಣವು ಮಾಂತ್ರಿಕಕ್ಕಿಂತ ಕಡಿಮೆಯಿಲ್ಲ, ಮತ್ತು ನಿಮ್ಮ ಅಚಲವಾದ ಪ್ರೀತಿ ಮತ್ತು ಬೆಂಬಲದಿಂದಾಗಿ. ರುಕ್ಮಿಣಿಯನ್ನು ತೆರೆದ ಹೃದಯದಿಂದ ಅಪ್ಪಿಕೊಂಡಿದ್ದಕ್ಕಾಗಿ ಮತ್ತು ಅವಳನ್ನು ನಿಮ್ಮ ಜೀವನದ ಭಾಗವಾಗಿಸಿದ್ದಕ್ಕಾಗಿ ಧನ್ಯವಾದಗಳು. ನಾನು ಮುಂದೆ ಸಾಗುತ್ತಿರುವಾಗ, ಸುಂದರವಾದ ನೆನಪುಗಳು, ಪಾಠಗಳು ಮತ್ತು ನಿಮ್ಮ ಆಶೀರ್ವಾದ ನನ್ನೊಂದಿಗೆ ಒಯ್ಯುತ್ತೇನೆ. ಇದು ವಿದಾಯವಲ್ಲ - ಇದು ಹೊಸ ಆರಂಭದತ್ತ ಒಂದು ಹೆಜ್ಜೆ. ನಿಮ್ಮ ಪ್ರೋತ್ಸಾಹವು ನನಗೆ ಜಗತ್ತು ಎಂದರ್ಥ, ಮತ್ತು ಹೊಸ ಮತ್ತು ಉತ್ತೇಜಕ ರೀತಿಯಲ್ಲಿ ನಿಮ್ಮನ್ನು ಮನರಂಜಿಸಲು ನಾನು ಆಶಿಸುತ್ತೇನೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ರುಕ್ಕು ಪಾತ್ರಕ್ಕೆ ಫ್ಯಾನ್ಸ್ ಫಿದಾ
ಕೃಷ್ಣನ ಹಳೆಯ ಕಥೆಯಲ್ಲಿ ರುಕ್ಮಿಣಿಯ ವಿಚಾರ ಬಂದಿತ್ತು. ಅವಳ ಮದುವೆ ನಿಲ್ಲಿಸಿದ್ದ. ಕೃಷ್ಣ ಕೂಡ ಮನಸ್ಸಿನಲ್ಲಿಯೇ ಅವಳನ್ನ ಲವ್ ಮಾಡ್ತಾ ಇದ್ದ. ಇಬ್ಬರ ಜೋಡಿ ವೀಕ್ಷಕರಿಗೆ ತುಂಬಾನೇ ಇಷ್ಟವಾಗಿತ್ತು. ಆದರೆ ಈಗ ರುಕ್ಕು ಪಾತ್ರದಿಂದ ದೇವಿಕ ಹೊರಗೆ ಬಂದಿದ್ದೀನಿ ಎಂಬ ಮೆಸೇಜ್ ನೀಡಿರುವುದಕ್ಕೆ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ನಿಮ್ಮ ಹಾಗೂ ಕೃಷ್ಣನ ಜೋಡಿ ಚೆನ್ನಾಗಿತ್ತು. ನೀವ್ಯಾಕೆ ಹೊರಗೆ ಬಂದ್ರಿ ಎಂದು ಕೇಳುತ್ತಿದ್ದಾರೆ. ಇತ್ತ ದೇವಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮದುವೆಗೆ ರೆಡಿಯಾಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ದೇವಿಕಾ ರುಕ್ಕುನಿಂದ ದೂರಾಗಿದ್ದು ಮಾತ್ರ ಫ್ಯಾನ್ಸ್ ಮನಸ್ಸಿಗೆ ಬೇಸರ ಉಂಟು ಮಾಡಿದೆ.


Click it and Unblock the Notifications











