'ರಾಮಚಾರಿ' ಚಾರು ಸಿನಿಮಾದಲ್ಲೂ ಬ್ಯುಸಿ: ಈ ನಟಿಯ ಹೊಚ್ಚ ಸಿನಿಮಾ ಯಾವುದು ಗೊತ್ತೇ?

By ಅನಿತಾ ಬನಾರಿ

'ಚಾರು' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಾಚಾರಿ' ಧಾರಾವಾಹಿಯ ಪಾತ್ರ. ನಾಯಕಿ ಚಾರು ಆಲಿಯಾಸ್ ಚಾರುಲತಾ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ನಟಿಯ ಅಸಲಿ ಹೆಸರು ಮೌನ ಗುಡ್ಡೆಮನೆ. ಮೊದಲ ಧಾರಾವಾಹಿಯಲ್ಲಿ ನಾಯಕಿ ಚಾರು ಪಾತ್ರದಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಮೌನ ಗುಡ್ಡೆಮನೆ ತನ್ನ ಸಹಜ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿ.

'ರಾಮಚಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿರುವ ಮೌನ ಗುಡ್ಡೆಮನೆ ಮಗದೊಂದು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಇಷ್ಟು ದಿನಗಳ ಕಾಲ ಕಿರುತೆರೆಯಲ್ಲಿ ನಾಯಕಿಯಾಗಿ ಮಿಂಚಿರುವ ಮೌನ ಗುಡ್ಡೆಮನೆ ಇದೀಗ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ.

Ramachari serial actress Mouna Guddemane is now busy in Kannada movies

ಯೋಗರಾಜ್ ಭಟ್ ಅವರ ಯೋಗರಾಜ್ ಸಿನಿಮಾಸ್ ನಡಿಯಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ನಾಯಕಿಯಾಗಿ ಕಮಾಲ್ ಮಾಡಲಿದ್ದಾರೆ. ಹೌದು, 'ಕುಲದಲ್ಲಿ ಕೀಳ್ಯಾವುದೋ' ಎನ್ನುವ ಸಿನಿಮಾದಲ್ಲಿ ಮೌನ ಗುಡ್ಡೆಮನೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಅವರಿಗೆ ಜೋಡಿಯಾಗಿ 'ಕಾಮಿಡಿ ಕಿಲಾಡಿ ಸೀಸನ್ 2' ವಿನ್ನರ್ ಮಡೆನೂರು ಮನು ಕಾಣಿಸಿಕೊಳ್ಳಲಿದ್ದಾರೆ.

ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ ಕೆ ಮತ್ತು ವಿದ್ಯಾ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ನಿರ್ದೇಶನವನ್ನು ಕೆ.ರಾಮ್ ನಾರಾಯಣ್ ಅವರು ಮಾಡಲಿದ್ದಾರೆ. ಈಗಾಗಲೇ ಈ ಸಿನಿಮಾದ ಫಸ್ಟ್ ಲುಕ್, ಟೀಸರ್ ಬಿಡುಗಡೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಈ ತಿಂಗಳಿನಿಂದ ಚಿತ್ರೀಕರಣ ಶುರುವಾಗಲಿದೆ.

Ramachari serial actress Mouna Guddemane is now busy in Kannada movies

ಕೊಡಗಿನ ಮೂಲದವರಾದ ಮೌನ ಗುಡ್ಡೆಮನೆ ಸದ್ಯ ನೆಲೆಸಿರುವುದು ಕರಾವಳಿಯಲ್ಲಿ. ಸಂಪ್ರದಾಯಸ್ಥ ಕುಟುಂಬದಲ್ಲಿ ಹುಟ್ಟಿ ಬೆಳೆದ ಈಕೆಗೆ ಏರ್ ಫೋರ್ಸ್‌ಗೆ ಸೇರಬೇಕು ಎಂಬ ಕನಸಿತ್ತು. ಆದರೆ ಮೌನ ಅವರ ತಂದೆಗೆ ಅದು ಮನಸ್ಸಿರಲಿಲ್ಲ. ಪಿಯುಸಿ ವಿದ್ಯಾರ್ಥಿನಿಯಾಗಿದ್ದಾಗ 'ಮಿಸ್ ತುಳುನಾಡು' ಸ್ಪರ್ಧೆಗೆ ಈಕೆ ಆಯ್ಕೆಯಾಗಿದ್ದರು.

ಮುಂದೆ ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಮೌನ ನಟನಾ ಪಯಣ ಶುರುವಾಗಿದ್ದು 'ರಾಮಾಚಾರಿ' ಧಾರಾವಾಹಿಯಿಂದ. ಮೌನ ಗುಡ್ಡೆಮನೆ ಅವರ ಅಮ್ಮನಿಗೆ ಮಗಳು ನಟನಾ ಲೋಕದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕನಸಿತ್ತು. ಯಾವಾಗಲೂ ನಟಿಯಾಗು ಎಂದು ಆಕೆ ಪ್ರೇರಪಿಸುತ್ತಿದ್ದರು. ಓದಿನ ಸಲುವಾಗಿ ಬಂದಂತಹ ಅವಕಾಶಗಳನ್ನು ದೂರ ಮಾಡಿದ ಈಕೆ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಿದರು.

ಚಾರುಲತಾ ಆಗಿ ನಟನೆಗೆ ಪಾದಾರ್ಪಣೆ ಮಾಡಿದ ಮೌನಗೆ ಆರಂಭದ ದಿನಗಳಲ್ಲಿ ತುಂಬಾನೇ ಕಷ್ಟವಾಗಿತ್ತು. ನಟನೆಯ ಕುರಿತು ಯಾವುದೇ ರೀತಿಯ ಅನುಭವ ಆಕೆಗಿರಲಿಲ್ಲ. ತಂಡದ ಎಲ್ಲಾ ಕಲಾವಿದರುಗಳು ಹೇಳಿಕೊಟ್ಟಿದ್ದನ್ನು ಕಲಿತು, ನಟಿಸುತ್ತಿರುವ ಆಕೆ ಇದೀಗ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.

More from Filmibeat

English summary
Ramachari serial actress Mouna Guddemane is now busy in Kannada movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X