ಕಿಚ್ಚನ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ತಾ ರಾಮಾಚಾರಿಗೆ..?
ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ರಾಮಾಚಾರಿ' ಧಾರಾವಾಹಿ ಕತೆಗೆ ಈಗ ಬಹಳ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ವೈಶಾಖಳ ಆಟ ಅಂತ್ಯ ಕಾಣುವ ಲಕ್ಷಣಗಳು ಕಾಣಿಸುತ್ತಿದೆ.
'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ಹಾಗೂ ನಾಯಕಿ ಇಬ್ಬರೂ ಕೂಡ ಹೊಸಬರಾಗಿದ್ದು, ಧಾರಾವಾಹಿಯನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.

ಚಾರುಲತಾ ಹಾಗೂ ರಾಮಾಚಾರಿಯ ಜೋಡಿಯನ್ನು ಇಷ್ಟಪಡುವ ವೀಕ್ಷಕರು ಈಗ ರಾಮಾಚಾರಿ ಬಗೆಗಿನ ಹೊಸ ಅಪ್ ಡೇಟ್ ಬಗ್ಗೆ ತಿಳಿಯಲೇಬೇಕು.
ನಟ ರಿತ್ವಿಕ್ ವರ್ಕೌಟ್ ಸುದ್ದಿ
ರಾಮಾಚಾರಿ ಪಾತ್ರವನ್ನು ನಿಭಾಯಿಸುತ್ತಿರುವ ನಟನ ನಿಜವಾದ ಹೆಸರು ರಿತ್ವಿಕ್ ಕೃಪಾಕರ್. ಧಾರಾವಾಹಿ ಆರಂಭವಾದಾಗಲೇ ರಿತ್ವಿಕ್ ಬಹಳ ಸುದ್ದಿಯಲ್ಲಿದ್ದರು. ಅದೂ ಕೂಡ ತಾವು ಧಾರಾವಾಹಿಗೋಸ್ಕರ ತೂಕ ಕಳೆದುಕೊಂಡ ವಿಚಾರಕ್ಕೆ. 125 ಕೆಜಿಗೂ ಅಧಿಕ ತೂಕ ಹೊಂದಿದ್ದ ನಟಿ ರಿತ್ವಿಕ್ ಅವರು, ರಾಮಾಚಾರಿ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಸಿಕ್ಕಾಗ ಅನಿವಾರ್ಯವಾಗಿ ತಮ್ಮ ತೂಕವನ್ನು ಇಳಿಸಿಕೊಳ್ಳಬೇಕಾಯ್ತು. ಇದಕ್ಕಾಗಿ ರಿತ್ವಿಕ್ ಹರಸಾಹಸ ಪಟ್ಟಿದ್ದರು. ರಿತ್ವಿಕ್ ನಿತ್ಯ ವರ್ಕೌಟ್, ಯೋಗ, ಡಯಟ್, ವಾಕಿಂಗ್, ಜಾಗಿಂಗ್ ಮಾಡಿದರು. ಧಾರಾವಾಹಿಯಲ್ಲಿ ನಟಿಸುವುದಕ್ಕೋಸ್ಕರ ರಿತ್ವಿಕ್ ಬರೋಬ್ಬರಿ ಆರು ತಿಂಗಳ ಕಾಲ ಶ್ರಮಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ನಾನ್ ವೆಜ್ ಬಿಟ್ಟಿದ್ದಲ್ಲದೇ, ಕೆಲವೇ ತಿಂಗಳಿನಲ್ಲಿ 39ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಬಳಿಕ ರಾಮಚಾರಿ ಧಾರಾವಾಹಿಯಲ್ಲಿ ಹೀರೋ ಆಗಿ ಮಿಂಚಿದರು. ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಫಿಟ್ ಆಗಿರಬೇಕೆಂದು ರಿತ್ವಿಕ್ ಇಂದಿಗೂ ವ್ಯಾಯಾಮ, ಡಯಟ್ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ಹೈಸ್ಕೂಲ್ ದಿನಗಳಿಂದಲೇ ರಂಗಭೂಮಿಯಲ್ಲಿ ಸಕ್ರಿಯ ರಿತ್ವಿಕ್. ಅವರ ಇನ್ಸ್ಟಾಗ್ರಾಂ ಇಣುಕಿದ್ರೆ ರೀಲ್ಸ್ ಮಾಡೋದು, ಆಲ್ಬಂ ಮಾಡೋದು ಇವರ ಸ್ಕಿಲ್ ಅಂತ ಗೊತ್ತಾಗುತ್ತೆ. ಕಿರುತೆರೆಯಲ್ಲಿ ಸಖತ್ ಪಾಪ್ಯುಲರ್ ಆಗಿರೋ ರಾಮಾಚಾರಿ ಧಾರಾವಾಹಿಯ ರಿತ್ವಿಕ್, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

200ಕ್ಕೂ ಹೆಚ್ಚು ಶೋಗಳಲ್ಲಿ ಅಭಿನಯ
ನಟನೆಯಲ್ಲಿ ಆಸಕ್ತಿ ಹೊಂದಿದ್ದ ರಿತ್ವಿಕ್, ಮಂಡ್ಯ ರಮೇಶ್ ಅವರ ರಂಗ ಶಾಲೆಯಲ್ಲಿ ನಟನೆ ಕಲಿಯಲು ಪ್ರಾರಂಭಿಸಿದರು. ನಟನಾ ರಂಗಶಾಲೆಯಲ್ಲಿ ಒಂದು ವರ್ಷ ಕಲಿತು, 200ಕ್ಕೂ ಹೆಚ್ಚು ಥಿಯೇಟರ್ ಶೋಗಳನ್ನು ನೀಡಿದ್ದಾರೆ. ನಾಟಕಗಳು ಸೇರಿದಂತೆ ಕೆಲ ಆಲ್ಬಂಗಳಲ್ಲೂ ನಟಿಸಿದ್ದಾರೆ. ಹೀಗೆ ಚಿಕ್ಕ ಪಾತ್ರ ಒಂದಕ್ಕೆ ಆಡಿಷನ್ ನಡೆಯುತ್ತಿತ್ತು. ಅಲ್ಲಿಗೆ ರಿತ್ವಿಕ್ ಕೂಡ ಹೋಗಿದ್ದರು. ರಿತ್ವಿಕ್ನಟನೆಯನ್ನು ನೋಡಿದ ನಿರ್ದೇಶಕ ರಾಮ್ ಜಿ 'ರಾಮಾಚಾರಿ' ಧಾರಾವಾಹಿಯಲ್ಲಿ ನಟಿಸಲು ಆಫರ್ ಕೊಟ್ಟಿದ್ದರು.
ಸಿನಿಮಾದಲ್ಲಿ ನಟಿಸುತ್ತಾರಾ ರಿತ್ವಿಕ್..?
ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡ ರಿತ್ವಿಕ್ 'ರಾಮಾಚಾರಿ' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿ ಎರಡು ವರ್ಷಗಳಾಗುತ್ತಾ ಬಂದಿದೆ. ಅಷ್ಟರಲ್ಲಾಗಲೇ ರಿತ್ವಿಕ್‌ಗೆ ದೊಡ್ಡ ಪ್ರಾಜೆಕ್ಟ್ ಒಂದು ಲಭಿಸಿದೆ ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ. ಇತ್ತೀಚೆಗಷ್ಟೇ ರಿತ್ವಿಕ್ ಕೃಪಾಕರ್ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಇವರ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷ ಆಯಿತು ಸರ್ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ರಿತ್ವಿಕ್‌ಗೆ ಕಿಚ್ಚಮ ಜೊತೆಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿರಬೇಕು ಎಂದು ಗೆಸ್ ಮಾಡುತ್ತಿದ್ದಾರೆ. ಹಾಗೇನಾದರೂ ಆಗಿದ್ದರೆ, ನಮ್ಮ ಕಡೆಯಿಂದಲೂ ರಿತ್ವಿಕ್‌ಗೆ ಆಲ್ ದಿ ಬೆಸ್ಟ್.


Click it and Unblock the Notifications











