ಧಾರಾವಾಹಿಯಲ್ಲಷ್ಟೇ ಅಲ್ಲ ರಿಯಲ್ ಲೈಫ್‌ನಲ್ಲೂ ದೀನದಲಿತರ ಸಹಾಯಕ್ಕೆ ನಿಂತ ಕಿರಿತೆರೆಯ 'ರಾಮಾಚಾರಿ'
ಉಳ್ಳವರು, ಬಡವರು ಬಗ್ಗರು ಅಂತ ಸಹಾಯ ಮಾಡಿದಾಗ ಅದೆಷ್ಟೋ ಜನರ ಬಡತನ ನೀಗುತ್ತದೆ. ಅದೆಷ್ಟೋ ಹಸಿದ ಜೀವಗಳು ತಣ್ಣಗಿರುತ್ತವೆ. ಆದರೆ ಸಹಾಯ ಮಾಡುವ ಗುಣ ಬರುವುದೇ ಕೆಲವೊಂದಿಷ್ಟು ಮಂದಿಗೆ ಮಾತ್ರ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ 'ರಾಮಾಚಾರಿ'.
ಕಲರ್ಸ್ ಕನ್ನಡದಲ್ಲಿ 'ರಾಮಾಚಾರಿ' ಎಂಬ ಧಾರಾವಾಹಿ ಅದಾಗಲೇ ಹಲವು ವರ್ಷಗಳಿಂದಾನೂ ಬರುತ್ತಿದೆ. ಈ ಧಾರಾವಾಹಿ ಸಾಕಷ್ಟು ಜೀವನದ ಮೌಲ್ಯವನ್ನೇ ಸಾರುವಂತದ್ದು. ಅದಕ್ಕೆ ಉದಾಹರಣೆ ಮೊದಲಿದ್ದ ಚಾರು ಈಗ ಹೇಗಾಗಿದ್ದಾಳೆ? ಕಿಟ್ಟಿಯ ಮನಪರಿವರ್ತನೆ ಹೀಗೆ ಅನೇಕ ವಿಚಾರಗಳಿಗೆ ಧಾರಾವಾಹಿ ಮನಸ್ಸಿಗೆ ಹಿಡಿಸುತ್ತದೆ.

ರಾಮಾಚಾರಿಗೂ.. ರಿತ್ವಿಕ್‌ಗೂ ಸಾಮ್ಯತೆ
ರಾಮಾಚಾರಿ ಮನೆಯಲ್ಲಿ ಸಂಸ್ಕಾರ ಉಳ್ಳಂತವನು. ನಾರಾಯಣ ಆಚಾರ್ಯರ ಮನೆಯಲ್ಲಿ ಹುಟ್ಟಿ, ಪೂಜೆ ಪುನಸ್ಕಾರ ಅಂತ ಮಾಡುತ್ತಾ ಇರುತ್ತಾನೆ. ಯಾರಿಗೂ ಕೆಟ್ಟದ್ದನ್ನು ಬಯಸುವುದೇ ಇಲ್ಲ. ಸಾಧ್ಯ ಅದಷ್ಟು ಒಳಿತನ್ನೇ ಬಯಸುತ್ತಾನೆ. ಸಹಾಯವನ್ನು ಮಾಡುತ್ತಾನೆ. ಇದು ಕೇವಲ ಧಾರಾವಾಹಿಯ ನಿರ್ದೇಶಕರ ಸ್ಕ್ರಿಪ್ಟ್. ಆದರೆ ರಾಮಾಚಾರಿ ರಿಯಲ್ ಲೈಫ್‌ನಲ್ಲೂ ಅದೇ ಥರ ಇದ್ದಾರೆ ಎಂದರೆ ನಂಬುತ್ತೀರಾ. ಖಂಡಿತ ಹೌದು. ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್ ಅಭಿನಯಿಸಿದ್ದಾರೆ. ಇವರು ರಿಯಲ್ ಲೈಫ್ ಕಷ್ಟ ಎಂದವರಿಗೆ ಸಹಾಯ ಮಾಡುವುದರಲ್ಲಿ ಮುಂದೆ ನಿಲ್ಲುತ್ತಾರೆ. ಅವರ ಸೋಷಿಯಲ್ ಮೀಡಿಯಾ ನೋಡಿದರೇನೆ ಅವರ ಸೋಶಿಯಲ್ ಸರ್ವೀಸ್ ತಿಳಿಯುತ್ತದೆ.
ಆರ್ ಕೆ ಫೌಂಡೇಶನ್ ಸ್ಥಾಪನೆ
ರತ್ವಿಕ್ ತಮ್ಮದೇ ಆದ ಪ್ರೊಡಕ್ಷನ್ ಹೊಂದಿದ್ದಾರೆ. ಜೊತೆಗೆ ಆರ್ ಕೆ ಫೌಂಡೇಷನ್ ಅನ್ನು ಕೂಡ ಹುಟ್ಟು ಹಾಕಿದ್ದಾರೆ. ಈ ಆರ್ ಕೆ ಫೌಂಡೇಶನ್‌ನಲ್ಲಿ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಇದ್ದಾರೆ. ಅದರಲ್ಲಿ 'RK ಫೌಂಡೇಶನ್ ಸಾಮಾಜಿಕ ಉದ್ದೇಶಕ್ಕಾಗಿ ರಿತ್ವಿಕ್ ಕೃಪಾಕರ್ ಸ್ಥಾಪನೆ ಮಾಡಿದ್ದಾರೆ. ಇದು ಮಕ್ಕಳ ಸೇವೆಗಾಗಿ, ದೀನ ದಲಿತರು, ಹಿಂದುಳಿದವರು ಮತ್ತು ಪ್ರಾಣಿಗಳು ರಕ್ಷಣೆ, ಮಕ್ಕಳು, ಹಿರಿಯ ನಾಗರಿಕರು, ವಿಕಲಚೇತನರು, ಹಿಂದುಳಿದವರು ಮುಂತಾದ ನಿರ್ದಿಷ್ಟ ಕೆಲಸಗಳು ನಡೆಯುತ್ತವೆ. ಮಕ್ಕಳ ಆಸೆಗಳನ್ನು ನನಸಾಗಿಸುವುದು ನಮ್ಮ ಗುರಿ' ಎಂದು ಹಾಕಿಕೊಂಡಿದ್ದಾರೆ.
ಡ್ಯಾನ್ಸ್ ಕಿಂಗ್ ರಿತ್ವಿಕ್
ರಾಮಾಚಾರಿ ಧಾರಾವಾಹಿಯಲ್ಲಿ ಅದಾಗಲೇ ರಾಮಾಚಾರಿ ಪಾತ್ರದ ಮೂಲಕ ಮಹಿಳೆಯರ ಮನಸ್ಸನ್ನು ಗೆದ್ದು ಆಗಿದೆ. ಈಗ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ರಾಮಾಚಾರಿ ಎಂದರೆ ಬರೀ ಪೂಜೆ ಪುರಸ್ಕಾರ, ಸಮಾಜ ಸೇವೆ ಎಂದುಕೊಂಡಿದ್ದವರಿಗೆ ತಾನೆಷ್ಟು ಕ್ರೇಜಿ ಎಂಬುದನ್ನು ತೋರಿಸಿದ್ದಾರೆ. ಅವರ ಡ್ಯಾನ್ಸ್ ನೋಡಿ ಫ್ಯಾನ್ಸ್ ಬಹುಪರಾಕ್ ಹಾಕುತ್ತಿದ್ದಾರೆ. ಇಮೋಜಿಗಳ ಮೂಲಕ ತಮ್ಮ ಆಸೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಮಾಚಾರಿಯ ಪಿಟ್ನೆಸ್ ನೋಡಿ
ರಾಮಾಚಾರಿಯನ್ನು ನೋಡಿದರೇನೆ ಗೊತ್ತಾಗುತ್ತದೆ. ಅವರೆಷ್ಟು ಫಿಟ್ ಅಂಡ್ ಫೈನ್ ಅನ್ನೋದು. ಅದಕ್ಕೆಲ್ಲಾ ಸಾಕಷ್ಟು ಕಸರತ್ತನ್ನೇ ನಡೆಸುತ್ತಾರೆ. ಪ್ರತಿದಿನ ಕೂಡ ವರ್ಕೌಟ್ ಮಾಡುತ್ತಾರೆ. ಅದು ಸಾಕಷ್ಟು ದೇಹ ದಂಡನೆ ಮಾಡುತ್ತಾರೆ. ಬರೀ ಮಂತ್ರ ಹೇಳುವುದಲ್ಲ ಫಿಟ್ನೆಸ್ ಫ್ರೀಕ್ ಅನ್ನೋದನ್ನು ತೋರಿಸಿದ್ದಾರೆ. ಅವರ ಸೋಶಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 136 ಸಾವಿರ ಜನ ಫಾಲೋವರ್ಸ್ ಹೊಂದಿರುವ ರಾಮಾಚಾರಿ ಫಿಟ್ನೆಸ್ ವಿಡಿಯೋಗಳನ್ನೇ ಹೆಚ್ಚು ಹಂಚಿಕೊಂಡಿದ್ದಾರೆ. ಅವರ ಒಂದೊಂದು ವಿಡಿಯೋಗೂ ಫ್ಯಾನ್ಸ್ ನಾ ಮುಂದು ತಾ ಮುಂದು ಎಂಬಂತೆ ಕಮೆಂಟ್‌ಗಳನ್ನು ಹಾಕುತ್ತಿರುತ್ತಾರೆ.


Click it and Unblock the Notifications











