Ramachari: 'ಅಣ್ಣಯ್ಯ' ಚಿತ್ರದ ಸೂಪರ್ ಹಿಟ್ ಸಾಂಗ್ ರೀ ಕ್ರಿಯೇಟ್ ಮಾಡಿದ ರಾಮಾಚಾರಿ- ಚಾರು

By ಶೃತಿ ಹರೀಶ್ ಗೌಡ

ರಾಮಾಚಾರಿ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು ಪ್ರೇಕ್ಷಕರಿಗೆ ಮನರಂಜನೆಯನ್ನ ನೀಡುತ್ತಾ ಬಂದಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರವಿಚಂದ್ರನ್ ನಟನೆಯ 'ಅಣ್ಣಯ್ಯ' ಸಿನಿಮಾದ ಹಾಡನ್ನು ರೀಕ್ರಿಯೇಟ್ ಮಾಡಲಾಗಿದೆ. ರವಿಚಂದ್ರನ್, ಮಧೂ ಕುಣಿದಿದ್ದ ಹಾಡಿಗೆ ಚಾರಿ, ಚಾರು ಕುಣಿದು ರಂಗೇರಿಸಿದ್ದಾರೆ.

ಈ ಹಾಡನ್ನು ಮತ್ತೆ ಕಟ್ಟಿ ಕೊಡಲು ತಕ್ಕನಾದ ಸೆಟ್ ಹಾಕಲಾಗಿದೆ. ಇನ್ನು ಹಳ್ಳಿಗೆ ಹೋಗಿರುವ ರಾಮಾಚಾರಿ ಹಾಗೂ ಚಾರು ಹೊಸ ಸೆಟ್ನಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹೊಲದಲ್ಲಿ ಹಸಿರ ರಾಶಿಯ ನಡುವೆ ಸೆಟ್ ಹಾಕಿ ಹಾಡನ್ನು ಸಂಪೂರ್ಣವಾಗಿ ಸೆರೆಹಿಡಿಯಲಾಗಿದೆ. ಅಭಿಮಾನಿಗಳಳು ಚಾರು ಹಾಗೂ ಚಾರಿಯ ಹೊಸ ಅವತಾರ ಕಂಡು ವಾವ್ ಎನ್ನುತ್ತಿದ್ದಾರೆ.

Ramachari serial Fame Rithvik, Mouna recreated Annayya movie song

ಸೇಮ್ 'ಅಣ್ಣಯ್ಯ' ಸಿನಿಮಾದಲ್ಲಿ ಇರುವಂತೆ ಸಾಂಗ್ ಮೂಡಿ ಬಂದಿದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈ ಹಾಡಿನ ಮೇಕಿಂಗ್‌ ವೀಡಿಯೋ ಕೂಡ ರಿವೀಲ್ ಆಗಿ ಸದ್ದು ಮಾಡ್ತಿದೆ. ಇದಕ್ಕೆ ಕಾಮೆಂಟ್‌ಗಳ ಸುರಿಮಳೆಯನ್ನೇ ವೀಕ್ಷಕರು ಸುರಿದಿದ್ದಾರೆ. ಚಾರು ಲಂಗಾ ದಾವಣಿಯಲ್ಲಿ ಕಂಗೊಳಿಸಿದರೆ, ಚಾರಿ ಬಿಳಿ ಅಂಗಿ, ಬಿಳಿ ಪಂಚೆ ಉಟ್ಟು ಗಮನ ಸೆಳೆದಿದ್ದಾರೆ. ಈ ಜೋಡಿ ಯಾವಾಗಲೂ ಜೊತೆಯಾಗಿಯೇ ರೀಲ್ಸ್ ಮಾಡುತ್ತಾರೆ. ಈಗ ಜೊತೆಯಾಗಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

Ramachari serial Fame Rithvik, Mouna recreated Annayya movie song

ಸೂಪರ್ ಎಂದ ವೀಕ್ಷಕರು

ರಾಮಾಚಾರಿ ಹಾಗೂ ಚಾರು 'ಅಣ್ಣಯ್ಯ' ಸಾಂಗ್ ಮೇಕಿಂಗ್ ವಿಡಿಯೋ ಸಹ ರಿಲೀಸ್ ಆಗಿದೆ. ಲುಕ್ಸ್, ಇಬ್ಬರ ಹಾವಭಾವ ಎಲ್ಲವೂ ಒರಿಜಿನಲ್ ಸಾಂಗ್ ನೆನಪಿಸುವಂತಿದೆ. ವೀಕ್ಷಕರಿಂದ ಇಬ್ಬರಿಗೂ ಸಹ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇವರಿಬ್ಬರೂ ಡ್ಯಾನ್ಸ್ ಮಾಡಿರುವ ವಿಡಿಯೋಗೆ ಮಿಲಿಯನ್ಸ್‌ಗಟ್ಟಲೇ ವೀವ್ಸ್ ಬಂದಿದೆ. ನಿಮ್ಮಿಬ್ಬರ ಜೋಡಿ ತುಂಬಾನೇ ಚೆನ್ನಾಗಿ ಇದೆ ಎಂದು ಪ್ರೇಕ್ಷಕರು ರಾಮಾಚಾರಿ ಹಾಗೂ ಚಾರುಗೆ ಹೇಳಿದ್ದಾರೆ.

ನಿಜ ಜೀವನದಲ್ಲೂ ಜೊತೆಯಾಗಿ!

ರಾಮಾಚಾರಿ ಹಾಗೂ ಚಾರು ಶೂಟಿಂಗ್‌ನ ಬಿಡುವಿನ ವೇಳೆಯಲ್ಲಿ ರೀಲ್ಸ್‌ ಹಾಗೂ ಡ್ಯಾನ್ಸ್‌ನ್ನು ಮಾಡುತ್ತಾ ಇರುತ್ತಾರೆ. ಇದಕ್ಕೆ ನೆಟ್ಟಿಗರು ಈಗ ಹೇಗಿದ್ದರೂ ಜೋಡಿ ಆಗಿದ್ದೀರಾ? ನಿಜ ಜೀವನದಲ್ಲೂ ಸಹ ನೀವಿಬ್ಬರೂ ಗಂಡ ಹೆಂಡತಿಯಾದರೆ ಚೆನ್ನಾಗಿ ಇರುತ್ತದೆ ಎಂದು ಸಲಹೆ ನೀಡುತ್ತಿದ್ದಾರೆ. ರಾಮಾಚಾರಿ ಹಾಗೂ ಚಾರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಧಾರಾವಾಹಿಯಲ್ಲಿ ಇಬ್ಬರ ಮನೆಯಲ್ಲಿ ಯಾರಿಗೂ ಇಷ್ಟವಿಲ್ಲದಿದ್ದರೂ ಚಾರಿ, ಚಾರು ಮದುವೆ ಆಗಿದ್ದಾರೆ. ಆಚಾರ್ಯರಿಗೂ ಇದು ಇಷ್ಟವಿಲ್ಲ. ಆದರೆ ಏನೇನೋ ಮಾಡಿ ಇಬ್ಬರು ಮನೆ ಸೇರಿದ್ದಾರೆ. ಎಲ್ಲರನ್ನು ಒಪ್ಪಿಸುವ ಲೆಕ್ಕಚಾರದಲ್ಲಿದ್ದಾರೆ.

More from Filmibeat

English summary
Rithvik, Mouna recreated Annayya movie song. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X