Don't Miss!
- News
ಫೆಬ್ರವರಿ 24 ರಿಂದ ಮೂರು ದಿನ ಕಲ್ಯಾಣ ಕರ್ನಾಟಕ ಉತ್ಸವ
- Finance
Matsya Sampada: ಪಿಎಂ ಮತ್ಸ್ಯ ಸಂಪದದಡಿ ಹೊಸ ಯೋಜನೆ ಜಾರಿ, ಸಂಪೂರ್ಣ ಮಾಹಿತಿ
- Sports
ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆಲುವಿನ ಸನಿಹದಲ್ಲಿ ಕರ್ನಾಟಕ: Live ಸ್ಕೋರ್
- Automobiles
'ವಂದೇ ಮೆಟ್ರೋ' ಬರುತ್ತೆ: ಪ್ರಧಾನಿ ಮೋದಿ ಸರ್ಕಾರದಿಂದ ಘೋಷಣೆ.. ಇಲ್ಲಿದೆ ವಿಶೇಷ ಮಾಹಿತಿ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ಚಾರುಲತಾಗೆ ಕಣ್ಣು ಬರುತ್ತಾ..? ರಾಮಾಚಾರಿ ಆಸೆ ಈಡೇರುತ್ತಾ?
'ರಾಮಾಚಾರಿ' ಕರೆ ಮಾಡಿ ಚಾರುಗೆ ಆದಷ್ಟು ಬೇಗ ನಿಮಗೆ ಕಣ್ಣು ಬರಲಿದೆ ಎಂದು ತಿಳಿಸುತ್ತಾನೆ. ಇದಕ್ಕೆ ಚಾರು ಎದ್ದು ಕುಣಿಯುತ್ತಾಳೆ. ರಾಮಾಚಾರಿ ನಂಗೆ ಕಣ್ಣು ಬರಲಿದೆ ಎಂದು ಸಂತಸವನ್ನ ವ್ಯಕ್ತಪಡಿಸುತ್ತಾಳೆ. ಈ ಸಂದರ್ಭದಲ್ಲಿ ಕಾಲು ಮೊರದ ಮೇಲೆ ತಾಗುತ್ತದೆ. ಇದೇ ವೇಳೆ ಕೋದಂಡ ತಂದು ಬಿಟ್ಟಿದ್ದ ಚೇಳು ಆತನ ಒಳಗೆ ಹೋಗಿ ಬೀಳುತ್ತದೆ.
ತಾನು ಮಾಡಿದ ಪಾಪವನ್ನು ತಾನೇ ಉಣ್ಣಬೇಕು ಎಂಬ ಗಾದೆಯಂತೆ ಕೋದಂಡ ತಂದುಬಿಟ್ಟ ಚೇಳು ಕೋದಂಡನಿಗೆ ಕಚ್ಚಿದೆ. ಚೇಳು ಕಚ್ಚಿದ ರಭಸಕ್ಕೆ ಕೋದಂಡ ಕಿರುಚಿಕೊಂಡು ಮನೆಯವರನ್ನೆಲ್ಲಾ ಕರೆದಿದ್ದಾನೆ. ಕೋದಂಡ ಕಿರಿಚಿಕೊಂಡಿದ್ದನ್ನು ಕೇಳಿಸಿಕೊಂಡು ಸ್ಥಳಕ್ಕೆ ಬಂದ ಜಾನಕಿ, ಅಜ್ಜಿ ಹಾಗೂ ಶ್ರುತಿ ,ಮುರಾರಿ ಕೋದಂಡನ ಶಾರ್ಟ್ ಬಿಚ್ಚಿ ಚೇಳನ್ನು ಹುಡುಕಿದ್ದಾರೆ. ನಂತರ ಕೋದಂಡನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಕಿರುತೆರೆ
ನಟಿ
ನಯನಾಗೆ
ನೆಗೆಟಿವ್
ಪಾತ್ರಗಳಲ್ಲಿ
ನಟಿಸುವುದೆಂದರೆ
ತುಂಬಾ
ಇಷ್ಟ

ಪ್ರೀತಿ ವಿಷಯ ಹೇಳಲು ವಿಹಾನ್ ಪರದಾಟ
ನನ್ನ ಅತ್ತೆ ಮಗಳು ಚಾರುಲತಾಳನ್ನು ನಾನು ಮದುವೆಯಾಗುವುದಿಲ್ಲ ಎಂದು ತನ್ನ ಪ್ರೀತಿ ವಿಷಯವನ್ನು ಮಾನ್ಯತಾಗಿ ಹೇಳಲು ವಿಹಾನ್ ಪ್ರಯತ್ನ ಮಾಡುತ್ತಿದ್ದಾನೆ. ರೆಸ್ಟೋರೆಂಟ್‌ನಲ್ಲಿ ಕೂತ ಶರ್ಮಿಳಾ ಹಾಗೂ ಆಧ್ಯಾಳನ್ನು ಭೇಟಿ ಮಾಡಿಸುವ ಮೂಲಕ ನಾನು ಇದೇ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಲು ವಿಹಾನ್ ಮಾನ್ಯತಾಳನ್ನು ರೆಸ್ಟೋರೆಂಟ್ ಕರೆದುಕೊಂಡು ಬಂದಿದ್ದಾನೆ.ವಿಹಾನ್ ಜೊತೆಗೆ ಬಂದ ಮಾನ್ಯತಾಳನ್ನು ನೋಡಿದ ಶರ್ಮೀಳಾ ಮಗಳನ್ನು ಕರೆದುಕೊಂಡು ಅಲ್ಲಿಂದ ಹೊರಟು ಹೋಗಿದ್ದಾಳೆ. ಅನಂತರ ವಿಹಾನ್‌ಗೆ ಫೋನ್ ಮಾಡಿದ ಆದ್ಯ ನಾವು ರೆಸ್ಟೋರೆಂಟ್‌ನಲ್ಲಿ ಇಲ್ಲ. ಅಮ್ಮನಿಗೆ ಅಲ್ಲಿ ಕಂಫರ್ಟಬಲ್ ಅನ್ನಿಸಲಿಲ್ಲ ಹಾಗಾಗಿ ದೇವಸ್ಥಾನಕ್ಕೆ ಬಾ ಎಂದು ಹೇಳಿದ್ದಾಳೆ. ಫೋನ್ ಕಟ್ ಮಾಡಿದ ಮೇಲೆ ಯಾಕಮ್ಮ ಎಂದು ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿಗೆ ನಿಮ್ಮ ದೊಡ್ಡಮ್ಮ ಬಂದಿದ್ದರು ಎಂದು ತಿಳಿಸಿದ್ದಾಳೆ.

ಚಾರುಲತಾಗೆ ಕಣ್ಣು ಬರುತ್ತಾ?
ಕಳೆದುಕೊಂಡಿರುವ ಕಣ್ಣು ಇನ್ನು ಕೆಲವೇ ದಿನಗಳಲ್ಲಿ ಬರುತ್ತದೆ ಎಂದು ಚಾರು ತುಂಬಾ ಖುಷಿಯಲ್ಲಿ ಇದ್ದಾಳೆ. ರಾಮಾಚಾರಿ ಸಹ ಚಾರುಲತಾ ಬಳಿ ಹೋಗಿ ಮೇಡಂ ನಿಮಗೆ ಇನ್ನು ಸ್ವಲ್ಪ ದಿನಗಳಲ್ಲೇ ಕಣ್ಣು ಬರಲಿದೆ. ನನಗೆ ಖುಷಿಯಾಗುತ್ತಿದೆ ಎಂದು ಹೇಳುತ್ತಾನೆ. ರಾಮಾಚಾರಿ ನನಗೆ ಕಣ್ಣು ಬಂದರೆ ನಿನಗೆ ಅಷ್ಟೊಂದು ಖುಷಿಯೇ ಎಂದು ಚಾರು ಕೇಳಿದ್ದಾಳೆ. ಮೇಡಂ ನಾನು ನಾಳೆಗೋಸ್ಕರ ಇಷ್ಟು ಕಾಯುತ್ತಿದ್ದೇನೆ ಗೊತ್ತಾ. ಡಾಕ್ಟರ್ ವಿಲಿಯಂ ಬಂದು ನಿಮ್ಮ ಕಣ್ಣಿಗೆ ಸ್ಪೆಷಲ್ ಇಂಜೆಕ್ಷನ್ ಕೊಟ್ಟು ನಿಮಗೆ ದೃಷ್ಟಿ ಮರಳಿ ಬರಬೇಕು ಎಂದು ರಾಮಾಚಾರಿ ಹೇಳುತ್ತಾನೆ. ಆಗ ಚಾರು ನನಗೆ ಕಣ್ಣು ಬಂದ ತಕ್ಷಣ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಸಾರಿ ಕೇಳಬೇಕು ರಾಮಾಚಾರಿ ಎಂದು ಹೇಳುತ್ತಾಳೆ.

ಚಾರು ಚಿಕಿತ್ಸೆಗೆ ಅಡ್ಡಿ
ಚಾರುಗೆ ಕಣ್ಣಿನ ತಪಾಸಣೆ ಮಾಡಿ ಇಂಜೆಕ್ಷನ್ ಕೊಡಲು ಶೀತ ಆಗಬಾರದು ಎಂದು ಡಾಕ್ಟರ್ ಹೇಳಿರುತ್ತಾರೆ. ಇತ್ತ ಚಾರು ಜೊತೆ ಮಾತನಾಡುತ್ತಿದ್ದ ರಾಮಾಚಾರಿಗೆ ಚಾರು ಶೀತ ಆಗಿದ್ದನ್ನು ಕಂಡು ಶಾಕ್ ಆಗುತ್ತೆ. ಚಾರು ಯಾಕೋ ಗಂಟಲು ಕೆರೆತ ಶುರುವಾಗಿದೆ, ಶೀತ ಆಯಿತು ಎಂದು ಕಾಣಿಸುತ್ತದೆ ಎಂದು ರಾಮಾಚಾರಿ ಬಳಿ ಹೇಳುತ್ತಾಳೆ. ಚಾರುಗೆ ಬಿಸಿ ಹಬೆಯ ಶಾಖವನ್ನು ತೆಗೆದುಕೊಳ್ಳಲು ಹೇಳಿ ಎಲ್ಲ ವ್ಯವಸ್ಥೆಯನ್ನು ರಾಮಾಚಾರಿ ಮಾಡುತ್ತಾನೆ.

ರಾಮಚಾರಿ ಮನೆಯಲ್ಲಿ ಮಾವನ ಮಗಳು
ಪದ್ಮನಾಭ ಹಾಗೂ ದೀಪಾ ರಾಮಾಚಾರಿ ಮನೆಗೆ ಬಂದಿದ್ದಾರೆ. ಸಂಕ್ರಾಂತಿ ಆಚರಣೆ ಮಾಡಲು ಬಂದಾಗ ಚಾರು ದೀಪನ ಕಣ್ಣಿಗೆ ಬೀಳುತ್ತಾಳೆ. ರಾಮಾಚಾರಿ ರೂಮ್‌ನಿಂದ ಬಂದ ದೀಪಾ ಮೋಸ ಮಾಡಿಬಿಟ್ರು ಎಂದು ಕೂಗಿಕೊಂಡು ಬರ್ತಾಳೆ. ಇವರು ಕೊಟ್ಟ ಮಾತಿಗೆ ಮೋಸ ಮಾಡಿದರು ಎಂದು ಹೇಳಿ ಜಗಳ ಮಾಡುತ್ತಾಳೆ.