Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ದೀಪಾಗೆ ವಾರ್ನಿಂಗ್ ಕೊಟ್ಟ ರಾಮಾಚಾರಿ
ವಿಹಾನ್ ಆಧ್ಯಾ ಮತ್ತು ಶರ್ಮೀಳಾ ಭೇಟಿ ಮಾಡಲು ಬಂದಿದ್ದಾನೆ. ಪಾರ್ಕೆ ಬಂದ ವಿಹಾನ್ ಶರ್ಮಿಳಾರನ್ನು ನೋಡಿ ಮೇಡಂ ನೀವೇನು ಇಲ್ಲಿ ಎಂದು ಕೇಳಿದ್ದಾನೆ. ನಂತರ ಇದೇ ಪ್ರಶ್ನೆಯನ್ನ ಶರ್ಮಿಳಾ ವಿಹಾನ್ ಬಳಿ ಕೇಳಿದ್ದಾಳೆ. ಅದಕ್ಕೆ ವಿಹಾನ್ ನಾನು ನನ್ನ ಗರ್ಲ್ ಫ್ರೆಂಡ್ ಭೇಟಿಯಾಗಲು ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಶರ್ಮಿಳಾಗೆ ವಿಹಾನ್ ನೇರ ನುಡಿಯನ್ನ ಕಂಡು ತುಂಬಾನೇ ಆಶ್ಚರ್ಯವಾಗುತ್ತದೆ. ಅದರಲ್ಲಿ ಏನು ಮೇಡಂ ನಾನು ನನ್ನ ಹುಡುಗಿಯನ್ನು ಮದುವೆ ಮಾಡುವುದಾಗಿ ಶಪಥ ಮಾಡಿದ್ದೇನೆ ಅದು ಸಹ ಹಿರಿಯರ ಒಪ್ಪಿಗೆಯನ್ನ ಪಡೆದು ಮದುವೆಯಾಗುತ್ತೇನೆ ಎಂದು ವಿಹಾನ್ ಹೇಳುತ್ತಾನೆ.
ಇನ್ನು ಈ ಕಡೆ ಶರ್ಮಿಳ ವಿಹಾನ್ ಬಳಿ ಮಾತನಾಡುತ್ತ ನಿನ್ನಂಥ ಅಳಿಯನನ್ನ ಪಡೆಯಲು ಆ ಮನೆಯವರು ಸಹ ಪುಣ್ಯ ಮಾಡಿರುತ್ತಾರೆ. ಅದು ಅಲ್ಲದೆ ನಿನ್ನಂಥ ಹುಡುಗನನ್ನು ಪಡೆಯಲು ಆ ಹುಡುಗಿ ಸಹ ಪುಣ್ಯ ಮಾಡಿರುತ್ತಾಳೆ ಎಂದು ಹೇಳುತ್ತಾರೆ.
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ
ನಿಂಗೆ ಇರೋ ಒಳ್ಳೆ ಮನಸ್ಸಿಗೆ ನಿನ್ನನ್ನ ಯಾರು ರಿಜೆಕ್ಟ್ ಮಾಡ್ತಾರೆ ಹೇಳು ಎಂದು ಹೇಳುತ್ತಾಳೆ. ಇವರಿಬ್ಬರನ್ನು ನೋಡಿದಂತ ಆಧ್ಯಾಗೆ ಆಶ್ಚರ್ಯವಾಗುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ಆದ್ಯಾ ಅಮ್ಮ ನಿಮಗೆ ಮೊದಲಿನಿಂದಲೂ ವಿನ್ನಿ ಪರಿಚಯ ಇದ್ಯಾ ಎಂದು ಕೇಳುತ್ತಾಳೆ. ಆಗ ಶರ್ಮಿಳಾ ನಡೆದ ಘಟನೆ ಹೇಳಿ ನಂಗೆ ವಿಹಾನ್ ಇಷ್ಟಆದ ಎಂದು ಹೇಳಿದಾಗ ಆದ್ಯಾ ಅಮ್ಮನನ್ನು ತಬ್ಬಿಕೊಂಡು ಖುಷಿಪಡ್ತಾಳೆ ಇದಕ್ಕೆ ವಿಹಾನ್ ಖುಷಿಪಡುತ್ತಾನೆ.

ರಾಮಾಚಾರಿ ಮನೆಯಲ್ಲಿ ರಂಪ
ರಾಮಾಚಾರಿ ಮನೆಗೆ ಬಂದಿರುವ ದೀಪ ಮನೆಯವರ ಜೊತೆಗೆ ರಂಪಾಟ ಮಾಡುತ್ತಿದ್ದಾಳೆ. ಸ್ಥಳಕ್ಕೆ ಬಂದ ರಾಮಾಚಾರಿ ಇಷ್ಟ ಇದ್ದರೆ ಇರಬಹುದು ಕಷ್ಟ ಆದರೆ ಹೋಗಬಹುದು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ದೀಪಾಗೆ ಹಾಗೂ ಅವರ ಅಪ್ಪನಿಗೆ ಶಾಕ್ ಆಗುತ್ತದೆ. ನಿಮಗೆ ನಂಬಿಕೆ ಇಲ್ಲ ಅಂದರೆ ಮನೆಯಿಂದ ಹೊರಗೆ ಹೋಗಿ. ನಂಬಿಕೆ ಎಂಬುದು ಗಾಳಿಪಟದ ದಾರದ ರೀತಿ ಎಂದು ಹೇಳಿ ಚಾರುಲತಾಳನ್ನು ಒಳಗೆ ಕರೆದುಕೊಂಡು ಹೋಗಿದ್ದಾನೆ.ನಂತರ ರಾಮಾಚಾರಿ ಶೀತ ನಗಡಿ ಕಡಿಮೆ ಆಗಲಿ ಎಂದು ಔಷಧಿ ತಂದಿದ್ದೇನೆ ಸರಿಯಾದ ರೀತಿಯಲ್ಲಿ ತಗೆದುಕೊಳ್ಳಿ ಎಂದು ಹೇಳಿ ಊಟ ತರಲು ಬರುತ್ತಾನೆ. ಆಗ ಹಿಂದೆ ಬಂದ ಚಾರು ಬೀಳುತ್ತಾಳೆ. ತಿರುಗಿ ನೋಡಿದ ರಾಮಾಚಾರಿ ಯಾಕೆ ಮೇಡಂ ಬಿದ್ರಿ ನಾನು ಊಟ ತರುತ್ತೇನೆ ಎಂದು ಹೇಳಿದ್ದೆ ಎಂದು ಹೇಳುತ್ತಾನೆ.

ಮಾನ್ಯತಾ ಕೋಪ
ಚಾರು ನಿಜವಾಗಿಯೂ ಕೊಲ್ಕತ್ತಾಗೆ ಹೋಗಿದ್ದಾಳಾ ಎಂದು ಮಾನ್ಯತಾ ಬಗ್ಗೆ ಕೇಳಿದ್ದಾನೆ. ಆಗ ಮಾನ್ಯತಾ ಕೋಪದಿಂದ ಹೋಗಿದ್ದಾಳೆ ಎಂದು ಹೇಳಿದ್ದಾಳೆ. ಅದಕ್ಕೆ ಜಯಶಂಕರ್ ನನ್ನ ಫ್ರೆಂಡ್ ಒಬ್ಬರು ಚಾರು ಮಳೆಯಲ್ಲಿ ನೆನೆದುಕೊಂಡು ಹೋಗ್ತಾ ಇದ್ದಳು ಎಂದು ಹೇಳಿದರು ಎಂದು ಹೇಳುತ್ತಾನೆ. ಅದಕ್ಕೆ ಮಾನ್ಯತಾ ಕೋಪ ಮಾಡಿಕೊಳ್ತಾಳೆ.

ಚಾರುಗೆ ಜ್ವರ.. ರಾಮಾಚಾರಿಗೆ ಸಂಕಷ್ಟ
ಚಾರುಗೆ ಶೀತ ಆಗಿರುವ ಹಿನ್ನೆಲೆಯಲ್ಲಿ ರಾಮಾಚಾರಿಗೆ ಒದ್ದಾಟ ಶುರುವಾಗಿದೆ ಟ್ರೀಟ್ಮೆಂಟ್‌ಗೆ ಕಷ್ಟವಾಗಬಹುದು ಎಂಬ ಚಿಂತೆ ಕಾಡುತ್ತಿದೆ. ಈ ಕಡೆ ದೀಪ ಮನೆಯಲ್ಲಿ ಬೇರೆಯದ್ದೇ ಪ್ಲಾನ್ ಮಾಡುತ್ತಿದ್ದಾಳೆ. ಚಾರುಲತಾಳನ್ನು ಮನೆಯಿಂದ ಹೇಗೆ ಓಡಿಸಬೇಕು ಎಂದು ಚಿಂತೆ ಮಾಡಿದ್ದಾಳೆ. ಆದರೆ ರಾಮಾಚಾರಿ ಚಾರುಲತಾಳನ್ನು ಬಹಳ ಸಂಯಮದಿಂದ ನೋಡಿಕೊಂಡು ನನ್ನದೇ ತಪ್ಪು ಎಂದು ಬೇಜಾರ್ ಮಾಡಿಕೊಂಡಿದ್ದಾನೆ. ಇನ್ಮುಂದೆ ಚಾರುಲತಾಗೆ ಕಣ್ಣು ಬಾರದೆ ಇದ್ದರೆ ನಾನು ಜೀವನಪೂರ್ತಿ ನನ್ನನ್ನೇ ಕ್ಷಮಿಸಿಕೊಳ್ಳೋದಿಲ್ಲ ಎಂದು ರಾಮಾಚಾರಿ ಮನಸ್ಸಿನಲ್ಲಿ ಅಂದುಕೊಂಡಿದ್ದಾನೆ. ಚಾರುಲತಾ ಮಾತ್ರ ರಾಮಾಚಾರಿ ಸೇವೆ ಮಾಡುತ್ತಿರುವುದರಿಂದ ಬಹಳ ಖುಷಿಯಲ್ಲಿ ಇದ್ದಾಳೆ. ಮುಂದೆ ಕಣ್ಣು ಬಂದರೆ ಮೊದಲು ಕ್ಷಮೆ ಕೇಳಬೇಕು ಎಂದು ಮನಸಿನಲ್ಲಿಚಾರು ಅಂದುಕೊಂಡಿದ್ದರೆ. ದೀಪಾ ಮಾವನ ಜೊತೆಗೆ ಚಾರು ಇರೋದ್ದಕ್ಕೆ ಹೊಟ್ಟೆ ಉರಿ ಪಟ್ಟುಕೊಂಡು ಕಿತಾಪತಿ ನಡೆಸುತ್ತಿದ್ದಾಳೆ.