Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Ramachari Serial: ಹೋದ ಕಣ್ಣು ಚಾರುಲತಾಗೆ ಬಂತಾ? ಮಾನ್ಯತಾ ಕಥೆಯೇನು?
ರಾಮಾಚಾರಿ ಚಾರುಲತಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾನೆ ಈ ಕಡೆ ಚಾರು ಬಹಳ ಸಂತೋಷದಲ್ಲಿ ಇದ್ದಾಳೆ. ರಾಮಾಚಾರಿ ಜೊತೆಗಿನ ಒಡನಾಟವನ್ನು ನೆನೆಸಿಕೊಂಡು ಚಾರು ಬಹಳ ಪುಳಕಿತಳಾಗಿದ್ದಾಳೆ. ಆಸ್ಪತ್ರೆಗೆ ಹೋದ ರಾಮಾಚಾರಿ ಡಾಕ್ಟರ್ ವಿಲಿಯಂ ಅವರನ್ನು ಭೇಟಿಯಾಗಲು ಅಪಾಯಿಂಟ್ಮೆಂಟ್ ಕೇಳಿದ್ದಾನೆ. ಇದೇ ಸಂದರ್ಭದಲ್ಲಿ ಡಾಕ್ಟರ್ ಅಲ್ಲಿಗೆ ಬಂದು ಇವರೇ ವಿಲಿಯಂ ಎಂದು ಪರಿಚಯ ಮಾಡಿ ಕೊಟ್ಟಿದ್ದಾರೆ.
"ಈಗ ನೀವೊಬ್ಬರೇ ಭರವಸೆ ಡಾಕ್ಟರ್.. ದಯವಿಟ್ಟು ನೀವು ಕೊಡುವ ಇಂಜೆಕ್ಷನ್‌ನಿಂದ ಚಾರು ಮೇಡಂಗೆ ಕಣ್ಣು ಬಂದರೆ ಅಷ್ಟೇ ಸಾಕು ಎಂದು ರಾಮಾಚಾರಿ ಹೇಳಿದ್ದಾನೆ.ಇದೇ ವೇಳೆ ಚಾರುಲತಾಳನ್ನು ಮತ್ತೊಂದು ಚಕಪ್‌ಕ್ಕಾಗಿ ಆಸ್ಪತ್ರೆಯ ಬೇರೆ ರೂಮಿಗೆ ಕರೆದುಕೊಂಡು ಹೋಗಲಾಗಿದೆ. ಚಾರು ಲತಾಳ ಕಣ್ಣುಗಳ ಪರೀಕ್ಷೆಯನ್ನು ಮತ್ತೆ ಮಾಡಲಾಗಿದೆ.
ಮತ್ತೊಮ್ಮೆ
ರಿಯಾಲಿಟಿ
ಶೋವಿನಲ್ಲಿ
ಮೋಡಿ
ಮಾಡುತ್ತಿರೋ
'ಕಮಲಿ'
ನಟಿ
ಗೇಬ್ರಿಯೆಲಾ
ಸ್ಮಿತ್

ಮಗಳ ಫೋಟೊ ನೋಡಿ ಚಾರುಗೆ ಶಾಕ್
ಚಾರುಲತಾ ರಾಮಾಚಾರಿಯ ಬೈಕಿನಲ್ಲಿ ಹೋಗುವುದನ್ನು ಚಾರು ಸ್ನೇಹಿತೆ ನೋಡಿದ್ದಾಳೆ. ಇದನ್ನು ಮಾನ್ಯತಾಳಿಗೆ ಫೋನ್ ಮಾಡಿ ತಿಳಿಸಿದ್ದಾಳೆ. ಈ ವೇಳೆ ಮಾನ್ಯತಾಗೆ ನಂಬಿಕೆ ಬರಲಿಲ್ಲ. ಇದೇ ವೇಳೆ ವಾಟ್ಸಪ್ ಮುಖಾಂತರ ಮಾನ್ಯತಾ ಸ್ನೇಹಿತ ಫೋಟೋ ಕಳುಹಿಸಿದ್ದಾಳೆ. ನಿನ್ನ ಶತ್ರು ರಾಮಾಚಾರಿಯ ಜೊತೆ ನಿನ್ನ ಮಗಳು ಹೋಗುತ್ತಿದ್ದಾಳೆ ನೋಡು ಎಂದು ಹೇಳಿದ್ದಾಳೆ. ರಾಮಾಚಾರಿ ಜೊತೆಗೆ ಚಾರು ಹೋಗುವುದನ್ನು ನೋಡಿ ಮಾನ್ಯತಾಗೆ ಶಾಕ್ ಆಗಿದೆ.

ದೇವರಲ್ಲಿ ಪ್ರಾರ್ಥನೆ
ಈ ಕಡೆ ಶೈಲೂ ರೂಪದಲ್ಲಿರುವ ಚಾರುಗೆ ರಾಮಾಚಾರಿ ಆಸ್ಪತ್ರೆಯಿಂದಲೇ ಕರೆ ಮಾಡಿದ್ದಾನೆ. ಇದೇ ವೇಳೆ ಮಾತನಾಡುತ್ತಿರುವ ರಾಮಾಚಾರಿ ಚಾರುಲತಾ ಕಣ್ಣು ಬಂದರಷ್ಟೇ ಸಾಕು ಎಂದು ಶೈಲೂ ಬಳಿ ಹೇಳಿದ್ದಾನೆ. ಆಗ ಶೈಲೂ ಒಳ್ಳೆಯ ಮನಸ್ಸಿನಿಂದ ಬೇಡಿದರೆ ದೇವರು ಖಂಡಿತ ಒಳ್ಳೆಯದು ಮಾಡುತ್ತಾನೆ ಎಂದು ರಾಮಾಚಾರಿಗೆ ಧೈರ್ಯ ತುಂಬಿದ್ದಾಳೆ. ರಾಮಾಚಾರಿ ಚಾರುಲತಾಗೆ ಕಣ್ಣು ಬರಲಿ ಎಂದು ನೀವು ಪ್ರಾರ್ಥನೆ ಮಾಡಿಕೊಳ್ಳಿ ಎಂದು ಶೈಲು ಬಳಿ ಹೇಳಿ ಫೋನ್ ಕಟ್ ಮಾಡಿದ್ದಾನೆ.

ರಾಮಾಚಾರಿಗೆ ಮಾನ್ಯತಾ ಕರೆ
ಈ ಕಡೆ ರಾಮಾಚಾರಿಗೆ ಮಾನ್ಯತಾ ಕರೆ ಮಾಡಿ ಚಾರು ಎಲ್ಲಿದ್ದಾಳೆ ಇನ್ನೂ ಕೊಲ್ಕತ್ತಾದಿಂದ ಬರಲಿಲ್ಲವೇ. ನೀನು ಎಲ್ಲಿದ್ದೀಯ ಎಂದಿಲ್ಲ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ರಾಮಾಚಾರಿ, ಚಾರುಲತಾ ಮೇಡಂ ಕೊಲ್ಕತ್ತಾದಲ್ಲಿ ಇದ್ದಾರೆ ಅವರಿಗೆ ಪ್ರಮೋಷನ್ ಆಗುವ ಸಂಭವವಿದೆ ಎಂದು ಹೇಗೋ ಮ್ಯಾನೇಜ್ ಮಾಡುತ್ತಾನೆ. ಆದರೆ ರಾಮಾಚಾರಿಗೆ ಮಾನ್ಯತಾ ಮಾತನಾಡುವ ರೀತಿಯಿಂದ ಅವರಿಗೆ ಅಲ್ಪಸ್ವಲ್ಪ ವಿಷಯ ಗೊತ್ತಾಗಿದೆ ಎಂದು ಎಣಿಸಿ ಸರಿ ಮೇಡಂ ನಾನು ನಂತರ ಕರೆ ಮಾಡುವೆ ಬ್ಯುಸಿ ಇದ್ದೇನೆ ಎಂದು ಫೋನ್ ಕಟ್ ಮಾಡಿದ್ದಾನೆ.

ದೀಪಾ ಹರಕೆ
ಚಾರು ನನಗೆ ಕಣ್ಣು ಬಂದರೆ ರಾಮಾಚಾರಿಗೆ ಐ ಲವ್ ಯು ಎಂದು ಹೇಳುತ್ತೇನೆ ಎಂದು ಕೇಳಿದ ದೀಪ ಚಾರುಲತಾ ಗೆ ಕಣ್ಣು ಬಾರದಂತೆ ಹರಕೆಯನ್ನ ಹೊತ್ತುಕೊಂಡಿದ್ದಾಳೆ. ದೇವರೇ ಪರಮೆಂಟಾಗಿ ಚಾರುಲತಾ ಗೆ ಕಣ್ಣು ಬಾರದಂತೆ ಮಾಡು ಎಂದು ದೇವರ ಬಡಿ ಬೇಡಿಕೊಂಡಿದ್ದಾಳೆ.

ಚಾರುಲತಾಗೆ ಕಣ್ಣು ಬರುತ್ತಾ?
ಈ ಕಡೆ ರಾಮಾಚಾರಿಯನ್ನು ನೋಡುವ ಸಂಭ್ರಮದಲ್ಲಿ ಚಾರುಲತಾ ಇದ್ದಾಳೆ. ಡಾಕ್ಟರ್ ಚಾರುಲತಾಗೆ ಇಂಜೆಕ್ಷನ್ ಕೊಟ್ಟು ಕಣ್ಣಿಗೆ ಬ್ಯಾಂಡೇಜ್‌ನ್ನು ಸುತ್ತಿದ್ದಾರೆ. ಇದೇ ವೇಳೆ ರಾಮಾಚಾರಿ ಬಳಿ ಬಂದ ಡಾಕ್ಟರ್‌ಗಳು ರಾಮಾಚಾರಿಗೆ ಬೈಯುತ್ತಿದ್ದಾರೆ. ಆ ಹುಡುಗಿಗೆ ಶೀತ ಆಗಬಾರದು ತಲೆಯ ಮೇಲೆ ನೀರು ಬೀಳಬಾರದು ಎಂದು ಹೇಳಿದರು ಸಹ ನೀವು ಎಡವಟ್ಟು ಮಾಡಿದ್ದೀರಾ ಇದರಿಂದ ಏನಾದರೂ ತೊಂದರೆಯಾದರೆ ಏನು ಮಾಡುವುದು ಎಂದು ಕೇಳುತ್ತಿದ್ದಾರೆ.