Ramachari: ಕೆಕೆ ಮೇಲೆ ಚಾರುಗೆ ಅನುಮಾನ; ಮಿಸೆಸ್ ರಾಮಾಚಾರಿ ಹೊಸ ಪ್ಲ್ಯಾನ್
ರಾಮಾಚಾರಿ ಧಾರಾವಾಹಿ ಈಗ ಹೊಸ ತಿರುವು ಪಡೆದುಕೊಂಡು ವೀಕ್ಷಕರಲ್ಲಿ ಕುತೂಹಲ ಉಳಿಸಿಕೊಂಡಿದೆ. ಹೀರೋ ರಾಮಾಚಾರಿ ಜೈಲು ವಾಸವನ್ನು ಅನುಭವಿಸುತ್ತಾ ಇದ್ದಾನೆ. ಈ ಕಡೆ ಚಾರುಗೆ ತನ್ನ ಗಂಡ ನನ್ನ ಮೇಲೆ ಯಾಕೆ ಹಗೆ ಸಾಧಿಸುತ್ತಾ ಇದ್ದಾನೆ ಎಂಬುದು ಮಾತ್ರ ತಿಳಿಯುತ್ತಾ ಇಲ್ಲ.
ರಾಮಾಚಾರಿ ಚಾರುಗೆ ಬೇಸರವಾಗುವಂತೆ ಎಂದಿಗೂ ಒಂದು ಮಾತು ಕೂಡ ಆಡಿರಲಿಲ್ಲ. ಪೊಲೀಸ್ ಸ್ಟೇಷನ್‌ಗೆ ಪೂಜೆಗೆ ಹೋಗಿ ಬಂದ ಮೇಲೆ ರಾಮಾಚಾರಿ ಸಂಪೂರ್ಣವಾಗಿ ಬದಲಾಗಿರುವುದು ಚಾರು ಗಮನಕ್ಕೆ ಬರುತ್ತಿದೆ. ರಾಮಾಚಾರಿ ಮಾತುಗಳಿಂದ ಬೇಸರ ಮಾಡಿಕೊಂಡಿರುವ ಚಾರು ತವರು ಮನೆಗೆ ಹೋಗಿದ್ದಾಳೆ.

ವೈಶಾಖ, ಚಾರು ಮನೆ ಬಿಟ್ಟು ಹೋಗಬೇಕು ಆ ರೀತಿ ಮಾತನಾಡು ಎಂದು ಕೆಕೆಗೆ ಹೇಳಿಕೊಟ್ಟಿದ್ದಳು. ಅದೇ ರೀತಿ ಆತ ನಡೆದುಕೊಳ್ಳುತ್ತಾ ಇದ್ದಾನೆ. ಇನ್ನು ನಾರಾಯಣ ಆಚಾರ್ಯರಿಗೆ ತುಂಬಾನೇ ಯೋಚನೆ ಕಾಡುತ್ತಿದೆ. ವೈಶಾಖ ಯಾಕೆ ಇಷ್ಟು ದ್ವೇಷ ಸಾಧಿಸುತ್ತಾ ಇದ್ದಾಳೆ? ಯಾರು ಇವಳು ಎಂದು ಯೋಚನೆ ಮಾಡುತ್ತಿದ್ದಾರೆ.
ಮನೆಗೆ ಬಂದಿರುವವನು ನನ್ನ ಮಗನಲ್ಲ, ಇಲ್ಲಿ ಸೊಸೆಯಾಗಿ ಮನೆಗೆ ಬಂದಿರುವ ವೈಶಾಖ ನನ್ನ ಮನೆಯನ್ನೇ ಹಾಳು ಮಾಡಲು ಬಂದಿದ್ದಾಳೆ. ಲಕ್ಷ್ಮೀ ನಾರಾಯಣ ಸ್ವಾಮಿಯೇ ನನ್ನ ಕಾಪಾಡಬೇಕು ಎಂದು ನಾರಾಯಣ ಆಚಾರ್ಯರು ದೇವರ ಬಳಿ ಕೇಳಿಕೊಂಡಿದ್ದಾರೆ.
ವೈಶಾಖ, ಚಾರು ಅಮ್ಮ ಮಾನ್ಯತಾಗೆ ಪೋನ್ ಮಾಡಿ ನಿಮ್ಮ ಮಗಳನ್ನು ಮನೆಗೆ ಕಳುಹಿಸಿದ್ದೇನೆ, ಇನ್ನು ಅವಳನ್ನು ಇಲ್ಲಿಗೆ ಬರದಂತೆ ನೋಡಿಕೊಳ್ಳುವುದು ನಿಮಗೆ ಬಿಟ್ಟಿದ್ದು ಎಂದು ಹೇಳಿದ್ದಾಳೆ. ವೈಶಾಖ ಮಾತು ಕೇಳಿದ ಮಾನ್ಯತಾಗೆ ಖುಷಿಯಾಗಿದೆ. ನಾನು ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿದೆ ನನ್ನ ಮಗಳು ನನ್ನ ಮನೆಗೆ ಬರುತ್ತಿದ್ದಾಳೆ ಎಂದು ಅಂದುಕೊಂಡಿದ್ದಾಳೆ.
ಇತ್ತ ಜಯ್‌ಗೆ ಒಂದು ರೀತಿಯಲ್ಲಿ ಅನುಮಾನ ಬಂದಿದೆ. ಅದೇ ಸಮಯಕ್ಕೆ ಮಗಳು ಮನೆಗೆ ಬಂದಿದ್ದು, ಅಪ್ಪನ ಜೊತೆಗೆ ತನ್ನ ಮನದ ಮಾತನ್ನು ಹೇಳಿಕೊಂಡಿದ್ದಾಳೆ. ಅಪ್ಪನ ಜೊತೆಗೆ ಮಾತನಾಡಿದ ಮೇಲೆ ಚಾರು ಮುಳ್ಳನ್ನು ಮುಳ್ಳಿದಲೇ ತೆಗೆಯಬೇಕು ಎಂದು ನಿರ್ಧಾರ ಮಾಡಿದ್ದಾಳೆ.

ವೈಶಾಖಗೆ ಶಾಕ್ ಕೊಟ್ಟ ಚಾರು
ಹೇಗಿದ್ದರೂ ಚಾರು ಮನೆ ಬಿಟ್ಟು ಹೋಗಿದ್ದಾಳೆ, ಅವಳು ಮತ್ತೆ ಮನೆಗೆ ಬರುವುದಿಲ್ಲ ನನ್ನೆಲ್ಲಾ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿಕೊಳ್ಳಬಹುದು ಎಂದು ವೈಶಾಖ ಅಂದುಕೊಂಡಿದ್ದಳು. ನನ್ನ ದ್ವೇಷವನ್ನೆಲ್ಲ ತೀರಿಸಿಕೊಂಡು ಈ ಮನೆಯವರನ್ನೆಲ್ಲಾ ಕೊಂದು ನೆಮ್ಮದಿಯಾಗಿ ಇರೋಣ ಎಂದು ನಿರ್ಧಾರ ಮಾಡಿದ್ದಳು. ಆದರೆ ವೈಶಾಖ ಹಾಗೆ ಅಂದುಕೊಳ್ಳುವಷ್ಟರಲ್ಲಿ ಚಾರು ತವರು ಮನೆಯಿಂದ ವಾಪಸ್ ಮನೆಗೆ ಬಂದಿದ್ದಾಳೆ. ಚಾರು ಮನೆಗೆ ಬರೋದಿಲ್ಲ ಎಂದು ಕೆಕೆ ಬಳಿ ವೈಶಾಖ ಹೇಳುತ್ತಿದ್ದಾಗಲೇ ಆಕೆ ಆಟೋ ಇಳಿದು ಮನೆಗೆ ಬಂದಿದ್ದು ವೈಶಾಖಗೆ ಶಾಕ್ ತಂದಿದೆ.
ಚಾರು ತಲೆಯಲ್ಲಿ ಒಂದೇ ಒಂದು ಪ್ರಶ್ನೆ ಓಡುತ್ತಿದೆ. ರಾಮಾಚಾರಿ ಪೊಲೀಸ್ ಠಾಣೆಗೆ ಪೂಜೆಗೆ ಎಂದು ಹೋಗಿ ಬಂದ ಮೇಲೆ ಯಾಕಿಷ್ಟು ಬದಲಾಗಿ ಹೋದ ಎಂಬ ಪ್ರಶ್ನೆ ಅವಳನ್ನು ಕಾಡುತ್ತಿದೆ. ಅದೇ ರೀತಿ ಯೋಚನೆ ಮಾಡಿಕೊಂಡು ಬಂದಿರುವ ಚಾರು ಮನೆಯಲ್ಲಿ ರಾಮಾಚಾರಿಯ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. ಮದುವೆಯ ಮುಂಚೆ ರಾಮಾಚಾರಿ ನನಗೆ ಏನೇ ಆದರೂ ಚೆನ್ನಾಗಿ ಇರೋಣ ಎಂದು ಮಾತನ್ನ ಕೊಟ್ಟಿದ್ದನು. ಆದರೆ ಏಕಾಏಕಿ ಯಾಕೆ ಹೀಗಾದ? ಈತ ನಿಜವಾಗಿಯೂ ನನ್ನ ಗಂಡನಾ ಅಥವಾ ಬೇರೆ ಯಾರೋ ಮನೆಗೆ ಬಂದಿದ್ದಾರಾ? ಎಂಬ ಅನುಮಾನ ಈಗ ಚಾರು ತಲೆಗೆ ಹೊಕ್ಕಿದೆ.
ಚಾರುಗೆ ಬಂತು ಅನುಮಾನ
ಕೆಕೆ ಮೇಲೆ ಚಾರುಗೆ ಅನುಮಾನ ಬಂದಿದೆ. ದೇವಸ್ಥಾನದಲ್ಲಿ ಕೆಕೆ ನಡೆದುಕೊಂಡ ರೀತಿ ಹಾಗೂ ಮನೆಗೆ ಬಂದ ಮೇಲೆ ನಿನ್ನಿಂದ ನನಗೆ ನೆಮ್ಮದಿ ಇಲ್ಲ. ನಿನ್ನನ್ನು ಯಾಕಾದರೂ ಮದುವೆಯಾದೆನೋ ನೀನು ನಿಮ್ಮ ಅಪ್ಪನ ಮನೆಗೆ ಹೋಗು ಎಂಬ ಮಾತನ್ನು ನೆನಪಿಸಿಕೊಂಡು ಚಾರು ಪದೇ ಪದೇ ಇದು ರಾಮಾಚಾರಿ ಅಲ್ಲ ಎಂಬುದನ್ನು ಅನುಮಾನ ಪಟ್ಟಿದ್ದಾಳೆ. ನಂತರ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂದು ಯೋಚನೆ ಮಾಡಿದ್ದು ಹೇಗೆ ಬಾಸ್ ನೀವು ಆ ಮನೆಗೆ ಹೋದಮೇಲೆ ನಮ್ಮನ್ನೆಲ್ಲ ಮರೆತುಬಿಟ್ರಿ ಎಂದು ಕೆಕೆಯ ಸಹಚರ ಹೇಳಿದ ಮಾತನ್ನೇ ಫೋನಿನಲ್ಲಿ ಮಾತನಾಡುವ ರೀತಿ ಹೇಳಿದ್ದಾಳೆ.
ಕೆಕೆ ಎಂದು ಕರೆದ ಮಿಸ್ಸೆಸ್ ರಾಮಾಚಾರಿ
ಚಾರು ಮಾತಿಗೆ ಕೆಕೆ ವಾಪಸ್ ತಿರುಗಿ ನೋಡಿದ್ದಾನೆ. ಕೆಕೆಯ ಪ್ರತಿಯೊಂದು ಚಲನ ವಲನ ಕೂಡ ಈಗ ಚಾರು ಗಮನಿಸುತ್ತಾ ಇದ್ದು, ರಾಮಾಚಾರಿಯನ್ನು ಜೈಲಿನಿಂದ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗುತ್ತಾಳಾ? ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.


Click it and Unblock the Notifications











