Ramachari: ಆಚಾರ್ಯರ ಮನೆಗೆ ಬಂದ ಪದ್ಮನಾಭ ಕುಟುಂಬ.. ರಾಮಾಚಾರಿ ಬಾಳಲ್ಲಿ ಮತ್ತೊಂದು ಬಿರುಗಾಳಿ
'ರಾಮಾಚಾರಿ' ಬದುಕಿಗೆ ಚಾರು ಬಂದ ಮೇಲೆ ದೊಡ್ಡ ಬಿರುಗಾಳಿಯೇ ಏಳುವ ರೀತಿ ಕಾಣುತ್ತಿದೆ. ಯಾಕೆಂದರೆ, ಶ್ರುತಿಗೆ, ಚಾರು ಹಾಗೂ ರಾಮಾಚಾರಿ ಇಬ್ಬರು ಮದುವೆಯಾಗಿರುವುದು ಗೊತ್ತಾಗಿದೆ. ಹೀಗಾಗಿ, ಮನೆಗೆ ದೀಪಾ ಬಂದರೆ ಒಳ್ಳೆಯದು. ಆಕೆಯನ್ನು ಕರೆದು ಕಿವಿ ಮಾತುಗಳನ್ನು ಹೇಳಿ ಎಂಗೇಜ್ ಮಾಡಿಸಲೇಬೇಕು ಎಂಬ ಹಠ ಹಿಡಿದು ಕೂತಿದ್ದಾಳೆ ಶ್ರುತಿ.
ಈ ಕಡೆ ಮನೆಯಲ್ಲಿ ವೈಶಾಖ ಆಡಿದ ಮಾತುಗಳನ್ನು ನಾರಾಯಣ ಆಚಾರ್ಯರು ಸಹ ಕೇಳಿಸಿಕೊಂಡಿದ್ದಾರೆ. ತನ್ನ ಹೆಂಡತಿ ಅಳುತ್ತಿರುವುದಕ್ಕೆ ಏನು ಮಾತನಾಡಲಾಗದ ಪರಿಸ್ಥಿತಿಯಲ್ಲಿ ಆಚಾರ್ಯರು ಇದ್ದಾರೆ. "ತನ್ನ ಕರುಳ ಸಂಬಂಧವನ್ನೇ ನನ್ನ ಸೊಸೆ ಕತ್ತರಿಸಿ ಬಿಟ್ಟಳು" ಎಂದು ಜಾನಕಿ ಗೋಳೋ ಎಂದು ಹೇಳುತ್ತಿದ್ದಾಳೆ. ಎಲ್ಲರೂ ಸಹ ಜಾನಕಿಯನ್ನು ಸಮಾಧಾನ ಮಾಡುತ್ತಿದ್ದಾರೆ.

ಅಣ್ಣನನ್ನು ಶೃತಿ ಪ್ರಶ್ನೆ ಮಾಡುವ ಹಂತಕ್ಕೆ ಬಂದಿದ್ದಾಳೆ. ಈ ಕಡೆ ದೀಪಾ ರಂಪ-ರಾಮಾಯಣ ಮಾಡಿ "ನಾನು ಸತ್ತು ಹೋಗುತ್ತೇನೆ" ಎಂದು ಗದ್ದಲ ಎಬ್ಬಿಸಿ, ನಾರಾಯಣ ಆಚಾರ್ಯರ ಮನೆಗೆ ಪದ್ಮನಾಭ ಹಾಗೂ ತುಳಸಿ ಬರುವಂತೆ ಮಾಡಿದ್ದಾಳೆ. ಮೂವರು ಸಹ ನಾರಾಯಣ ಆಚಾರ್ಯರ ಮನೆಗೆ ಬಂದಿದ್ದಾರೆ.
ಅಣ್ಣನನ್ನೇ ಪ್ರಶ್ನೆ ಮಾಡಿದ ಶೃತಿ
ಶ್ರುತಿ ವಿಡಿಯೋ ನೋಡಿರುವ ಬಗ್ಗೆ ರಾಮಾಚಾರಿಗೆ ಇನ್ನೂ ಸಹ ಕಂಫರ್ಮ್ ಇಲ್ಲ . ಆದರೂ ಸಹ ರಾಮಾಚಾರಿ ತಂಗಿ ವಿಡಿಯೋವನ್ನು ನೋಡಿಲ್ಲ ಎಂದೇ ನಂಬಿದ್ದಾನೆ. ಶ್ರುತಿ ವಿಡಿಯೋ ನೋಡಿ ಅದನ್ನು ಹೇಗೆ ವಾಟ್ಸಪ್ ಮಾಡಿದ್ದಾಳೆ. ಪದೇ ಪದೆ ರಾಮಾಚಾರಿಯನ್ನು ಶ್ರುತಿ ಅನುಮಾನದಿಂದ ನೋಡುತ್ತಿದ್ದು, ಚಾರು ವಿಷಯದಲ್ಲಿ ಪ್ರಶ್ನೆ ಮಾಡುತ್ತಿದ್ದಾಳೆ.

ಇದಕ್ಕೆ ರಾಮಾಚಾರಿ ನೀನ್ಯಾಕೆ ದೀಪ ವಿಷಯವನ್ನು ತೆಗೆದಾಗೆಲ್ಲ ಚಾರು ವಿಷಯವನ್ನು ಹೇಳುತ್ತಿದ್ದೀಯಾ ಎಂದು ತಂಗಿಯನ್ನು ಕೇಳಿದ್ದಾನೆ. ಇದಕ್ಕೆ ಶ್ರುತಿ "ಹೇಗಿದ್ದರೂ ಇಬ್ಬರು ಒಂದೇ ಆಫೀಶ್‌ನಲ್ಲಿ ಕೆಲಸ ಮಾಡುವವರು ಏನಾಗಿದೆಯೋ ಏನೋ ಯಾರಿಗೆ ಗೊತ್ತು. ನೀನು ಅವಳಿಗೆ ಕಣ್ಣು ಹೋದಾಗ ಮನೆಗೆ ಕರೆದುಕೊಂಡು ಬಂದು ಗಂಡನಿಗಿಂತ ಅತಿ ಹೆಚ್ಚು ಸೇವೆಯನ್ನು ಮಾಡಿದ್ದೀಯಾ. ಧಾತ್ರಿ ವನಕ್ಕೂ ಕರೆದುಕೊಂಡು ಹೋಗಿ ಕಣ್ಣು ಬರುವಂತೆ ಮಾಡಿದ್ದೀಯಾ" ಎಂದು ಅಣ್ಣನಿಗೆ ಶ್ರುತಿ ಹೇಳಿದ್ದಾಳೆ.
ವೈಶಾಖ ಜೊತೆ ಜಗಳಕ್ಕೆ ನಿಂತ ತುಳಸಿ
ನಾರಾಯಣ ಆಚಾರ್ಯರ ಮನೆಗೆ ಪದ್ಮನಾಭ ತುಳಸಿ ಹಾಗೂ ದೀಪಾ ಮೂವರು ಸಹ ಬಂದಿದ್ದಾರೆ. ಡೋರ್ ಬೆಲ್ ಮಾಡಿದ ವೈಶಾಖ ಬಂದು ಬಾಗಿಲು ತೆಗೆದು ಯಾರು ಎಂದು ಪ್ರಶ್ನೆ ಮಾಡಿದ್ದಾಳೆ. "ಮನೆ ಮಗಳನ್ನು ಯಾರು ಎಂದು ಕೇಳುತ್ತಿದ್ದೀಯಲ್ಲ. ನೀನು ಯಾರು?" ಎಂದು ಇಬ್ಬರೂ ಸಹ ಜಗಳಕ್ಕೆ ನಿಂತಿದ್ದಾರೆ. ಇಬ್ಬರ ಜಗಳವನ್ನು ನೋಡುತ್ತಿದ್ದ ನಾರಾಯಣ ಆಚಾರ್ಯರು ಮಧ್ಯ ಪ್ರವೇಶಿಸಿ ಇಬ್ಬರ ಬಾಯನ್ನು ಮುಚ್ಚಿಸಿದ್ದಾರೆ.
ಕುಳಿತುಕೊಂಡು ಮಾತನಾಡುವ ಜಾಗದಲ್ಲಿ ಒಬ್ಬರಿಗೊಬ್ಬರು ಪರಸ್ಪರ ನಿಂದನೆ ಮಾಡಿಕೊಂಡು ಈ ರೀತಿ ಕಚ್ಚಾಡುತ್ತಿರುವುದು ಶೋಭೆ ತರುವುದಿಲ್ಲ. ನಾನು ಈ ರೀತಿಯಾಗಲು ಬಿಡುವುದಿಲ್ಲ ಎಂದು ತನ್ನ ತಂಗಿ ಹಾಗೂ ತನ್ನ ಸೊಸೆಗೆ ಬೈದಿದ್ದಾರೆ. ನಾರಾಯಣ ಆಚಾರ್ಯರ ಅಬ್ಬರಕ್ಕೆ ಮನೆಯವರೆಲ್ಲರೂ ಸಹ ಮಂಕಾಗಿ ಮೌನಕ್ಕೆ ಶರಣಾಗಿದ್ದಾರೆ.
ರಾಮಾಚಾರಿ ಬಗ್ಗೆ ತುಳಸಿ ಮಾತು
"ಕೋದಂಡ ಮದುವೆಯಾದಂತೆ ರಾಮಾಚಾರಿ ಮದುವೆಯಾದರೆ ನನ್ನ ಮಗಳ ಪಾಡೇನು?" ಎಂದು ತುಳಸಿ, ನಾರಾಯಣ ಆಚಾರ್ಯರನ್ನೇ ಪ್ರಶ್ನೆಯನ್ನ ಮಾಡಿದ್ದಾಳೆ. ತುಳಸಿ ಆಡುತ್ತಿರುವ ಮಾತುಗಳು ನಾರಾಯಣ ಆಚಾರ್ಯರಿಗೆ ತುಂಬಾ ಕೋಪವನ್ನ ತರಿಸಿದೆ. ಈ ಕಡೆ ರಾಮಾಚಾರಿ ಸಹ ಅತ್ತೆಯ ಮಾತಿಗೆ ಶಾಕ್ ಆಗಿದ್ದಾನೆ.
ಈ ಕಡೆ ಚಾರು ಮನೆಯಲ್ಲಿ ಎಂಗೇಜ್ಮೆಂಟ್ ಶಾಸ್ತ್ರಗಳೆಲ್ಲವೂ ಸಹ ನಡೆಯುತ್ತಿದ್ದು ಇಬ್ಬರೂ ರಿಂಗ್ ಎಕ್ಸ್‌ಚೇಂಜ್ ಮಾಡಿಕೊಳ್ಳಬೇಕಿದೆ. ಆದರೆ ಚಾರುಗೆ ಇದ್ಯಾವುದು ಸಹ ಇಷ್ಟವಿಲ್ಲ. ತನ್ನ ತಂದೆ ತಾಯಿಗೆ ಚಾರು ಪ್ರಶ್ನೆಯನ್ನು ಮಾಡುತ್ತಿದ್ದಾಳೆ. "ಅಮ್ಮ ನಿಮಗೆ ಅಪ್ಪ ತಂದ ಕೆಲವು ವಸ್ತು ಇಷ್ಟವಾಗುವುದಿಲ್ಲ. ಆದರೂ ಸಹ ನೀವಿಬ್ಬರೂ ಸಂಸಾರ ಮಾಡುತ್ತಿಲ್ಲವೇ ಮದುವೆಯಾದರೆ ಮಾತ್ರ ತಾಳಿಗೆ ಬೆಲೆ" ಎಂದು ಚಾರು ಹೇಳಿದ್ದಾಳೆ.


Click it and Unblock the Notifications











