Ramachari: ವೈಶಾಖ ತೋಡಿದ ಹಳ್ಳಕ್ಕೆ ಬಿದ್ಲಾ ಚಾರು? ಮನೆ ಬಿಟ್ಟು ಹೋಗುವ ಸ್ಥಿತಿ ಎದುರಾಗುತ್ತಾ?
ಮೊದಲಿನಿಂದಲೂ ಸಹ ವೈಶಾಖಾಗೆ ಚಾರು ಮೇಲೆ ತುಂಬಾನೇ ಕೋಪವಿದೆ. ಅವಳನ್ನು ಕಂಡರೆ ಉರಿದು ಬೀಳುತ್ತಾಳೆ. ಈ ವೇಳೆ ಚಾರು ಹೋಗಿ ನನ್ನ ಹಾಗೂ ರಾಮಾಚಾರಿಯ ನಡುವಿನ ಸಂಬಂಧ ಸರಿಯಿಲ್ಲ. ನಾವಿಬ್ಬರೂ ಒಂದಾಗಿ ಬಾಳೋಕೆ ಯಾವುದಾದರೂ ಒಂದು ಐಡಿಯಾ ಕೊಡಕ್ಕ ಎಂದು ವೈಶಾಖ ಬಳಿ ಕೇಳಿದ್ದಾಳೆ.
ಕುರಿಯೇ ಬಂದು ತೊಳೆದ ಮುಂದೆ ನಿಂತುಕೊಂಡಿದೆ ಎಂದುಕೊಂಡು ವೈಶಾಖ ಮನೆಹಾಳು ಐಡಿಯಾ ಕೊಡುತ್ತಿದ್ದಾಳೆ. ಹೇಗಿದ್ದರೂ ನಿನ್ನ ಹಾಗೂ ರಾಮಾಚಾರಿಯ ಮೇಲೆ ಮಾವನಿಗೆ ತುಂಬಾ ಸಿಟ್ಟು ಇದೆ. ಇದಕ್ಕಾಗಿ ನೀನು ಮಾವ ಮಾತನಾಡಿದ ರೀತಿಯಲ್ಲಿ ರಾಮಾಚಾರಿಯ ಬಳಿ ಮಾತನಾಡು ನಿನ್ನನ್ನ ಕ್ಷಮಿಸಿದ್ದೇನೆ ಎಂದೆಲ್ಲಾ ಹೇಳು ಎಂಬ ಐಡಿಯಾವನ್ನ ನೀಡಿದ್ದಾಳೆ. ನೀನು ಹಾಗೂ ನಿನ್ನ ಹೆಂಡತಿ ಇಬ್ಬರೂ ಸಹ ಸುಖವಾಗಿ ಸಂಸಾರ ನಡೆಸಿ ಎಂದೆಲ್ಲಾ ಸುಳ್ಳನ್ನ ಹೇಳು. ಮಾವ ಹೇಳಿದ್ದನ್ನು ರಾಮಾಚಾರಿ ಯಾವತ್ತೂ ಕೂಡ ಇಲ್ಲ ಅನ್ನುವುದಿಲ್ಲ ಇದನ್ನು ಕೂಡ ರಾಮಾಚಾರಿ ಒಪ್ಪಿಕೊಂಡು ನಿನ್ನ ಜೊತೆಯಲ್ಲಿ ಚೆನ್ನಾಗಿ ಸಂಸಾರ ನಡೆಸುತ್ತಾನೆ ಎಂದು ಚಾರುಗೆ ವೈಶಾಖ ಕೊಟ್ಟಿದ್ದಾಳೆ.

ವೈಶಾಖ ಕೊಟ್ಟಂತಹ ಐಡಿಯಾವನ್ನ ನಾನು ಬೇರೆ ರೀತಿ ಉಪಯೋಗಿಸಿಕೊಳ್ಳುತ್ತೇನೆ, ನನ್ನ ಗಂಡನಿಗೆ ಸಾಂತ್ವನದ ನುಡಿಗಳನ್ನು ಹೇಳಲು ಬಳಸಿಕೊಳ್ಳುತ್ತೇನೆ ಎಂದು ವೈಶಾಖ ಬಳಿ ಚಾರು ಹೇಳಿದ್ದಾಳೆ. ಇದಕ್ಕೆ ವೈಶಾಖ ನೀನು ಯಾವ ರೀತಿಯಾದರೂ ಉಪಯೋಗಿಸಿಕೋ ಅದರಿಂದ ನನಗೆ ತಾನೇ ಪ್ರಯೋಜನ ಹೆಂಗೆ ಹೇಳಿದರು ನೀನು ಸುಳ್ಳು ಹೇಳಿದಂತೆ ಆಗುತ್ತದೆ. ರಾಮಾಚಾರಿಯ ಭಾವನೆಗಳ ಜೊತೆ ಆಟವಾಡಿದಂತೆ ಆಗುತ್ತದೆ. ಇದರಿಂದಾಗಿ ಎಲ್ಲರ ಕೋಪಕ್ಕೆ ಗುರಿಯಾಗಿ ನೀನು ಈ ಮನೆ ಬಿಟ್ಟು ಹೋಗುವಂತೆ ಆಗುತ್ತದೆ ಎಂದುಕೊಂಡಿದ್ದಾಳೆ.
ವೈಶಾಖ ತೋಡಿದ ಹಳ್ಳಕ್ಕೆ ಬಿದ್ದ ಚಾರು
ಯಾವಾಗಲೂ ವೈಶಾಖಳಿಂದ ದೂರ ಇರುತ್ತಿದ್ದ ಚಾರು ಈಗ ಹೋಗಿ ವೈಶಾಖ ತೋಡಿದ ಹಳ್ಳಕ್ಕೆ ಬೀಳುತ್ತಿದ್ದಾಳೆ. ವೈಶಾಖ ಹೇಳಿದಂತೆ ನಾರಾಯಣ ಆಚಾರ್ಯರ ಫೋನ್ ತಗೆದುಕೊಂಡು ರಾಮಾಚಾರಿಗೆ ಫೋನ್ ಮಾಡಿ ರಾಮಾಚಾರಿ ಊಟ ಮಾಡಿದ್ಯಾ? ಎಂದೆಲ್ಲಾ ವಿಚಾರಿಸಿಕೊಳ್ಳುತ್ತಿದ್ದಾಳೆ. ರಾಮಾಚಾರಿಗೆ ತನ್ನ ತಂದೆ ಕರೆ ಮಾಡಿದ್ದಾರೆ ಎಂಬುದೇ ಸಂತಸ ತಂದಿದೆ. ತಂದೆಯ ಧ್ವನಿ ಕೇಳಿದ್ದೇ ತಡ ಅವನಿಗೆ ತುಂಬಾನೇ ಖುಷಿಯಾಗಿದೆ. ಇನ್ನು ರಾಮಾಚಾರಿಯ ಬಳಿ ನಾರಾಯಣ ಆಚಾರ್ಯರು ಮಾತನಾಡಿದಂತೆ ಚಾರು ಮಾತನಾಡುತ್ತಿದ್ದಾಳೆ.

ನಿಜ ಎಂದುಕೊಂಡ ರಾಮಾಚಾರಿ
ರಾಮಾಚಾರಿ ನೀನು ನನ್ನ ಮಾತಿನಿಂದ ಎಷ್ಟು ನೊಂದುಕೊಂಡಿದ್ಯಾ ಎಂದು ಗೊತ್ತಿದೆ. ನೀನು ನಮಗೆ ಹೇಳದೇ ಮದುವೆಯಾದೆ ಎಂಬ ಒಂದೇ ಒಂದು ಕಾರಣಕ್ಕಾಗಿ ನಾನು ನಿನ್ನನ್ನ ದೂರ ಇಟ್ಟು ತಪ್ಪು ಮಾಡಿದೆ ಎಂದು ಹೇಳುತ್ತಾ ಇದ್ದಾಳೆ. ಕಂದ ನಿನ್ನ ನಾನು ಕ್ಷಮಿಸಿದ್ದೇನೆ ಎಂದು ಚಾರು ಹೇಳಿದ್ದಾಳೆ. ಅಪ್ಪ ನನ್ನನ್ನ ಕ್ಷಮಿಸಿದ್ದಾರೆ ಎಂದು ರಾಮಾಚಾರಿ ಅಂದುಕೊಂಡಿದ್ದಾನೆ. ಎಂದೆಂದಿಗೂ ಸಹ ಅಪರಂಜಿಯ ಗುಣದವನೇ ತನ್ನ ಮನೆಗೆ ತಕ್ಕ ಮಗ ಎಂದೆಲ್ಲಾ ನಾರಾಯಣ ಆಚಾರ್ಯರು ಹೇಳುತ್ತಿರುವ ರೀತಿಯೇ ಚಾರು ರಾಮಾಚಾರಿಯ ಬಳಿ ಮಿಮಿಕ್ರಿ ಮಾಡುತ್ತಾ ಹೇಳುತ್ತಾ ಇದ್ದಾಳೆ.
ಮನೆ ಬಿಟ್ಟು ಹೋಗ್ತಾಳಾ ಚಾರು..?
ರಾಮಾಚಾರಿ ಬಳಿ ಚಾರು ಬೈಸಿಕೊಳ್ಳೋದು ಪಕ್ಕಾ ಆಗಿದೆ. ಮನೆಗೆ ಬಂದೊಡನೆ ರಾಮಾಚಾರಿ ತನ್ನ ತಂದೆಯ ಕಾಲಿಗೆ ಬೀಳುತ್ತಾನೆ. ಆಗ ನಾನು ನಿನಗೆ ಫೋನ್ ಮಾಡಿಲ್ಲ ಎಂಬ ವಿಚಾರವನ್ನು ನಾರಾಯಣ ಆಚಾರ್ಯರು ರಾಮಾಚಾರಿ ಬಳಿ ಹೇಳುತ್ತಾರೆ. ಬಳಿಕ ಚಾರು ಸಿಕ್ಕಿ ಬಿದ್ದು ಮನೆಯಿಂದ ಆಚೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂಬುದೇ ವೈಶಾಖಳ ಪ್ಲ್ಯಾನ್ ಆಗಿದೆ. ಎಲ್ಲರ ಕೈಯಲ್ಲಿ ಬೈಸಿಕೊಂಡು ಚಾರು ಕೆಟ್ಟವಳಾಗಿ ಮನೆ ಬಿಟ್ಟು ಹೋಗಬೇಕು ಎಂಬುದೇ ವೈಶಾಖದ ಉದ್ದೇಶವಾಗಿದೆ.


Click it and Unblock the Notifications











