twitter
    For Quick Alerts
    ALLOW NOTIFICATIONS  
    For Daily Alerts

    33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?

    |

    ಬಹುಶಃ ಮರುಪ್ರಸಾರದ ಯೋಜನೆ ಮಾಡಿದಾಗ ದೂರದರ್ಶನವೂ ಈ ಪವಾಡ ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಖಾಸಗಿ ವಾಹಿನಿಗಳ ಅಬ್ಬರದೆದುರು ಮಂಕಾಗಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ, ತನ್ನ ಮುಂದೆ ಖಾಸಗಿ ವಾಹಿನಿಗಳ ಮನರಂಜನೆ ಏನೂ ಅಲ್ಲ ಎಂಬಂತೆ ಭರ್ಜರಿ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆದು ದಾಖಲೆ ನಿರ್ಮಿಸಿದೆ.

    ಲಾಕ್ ಡೌನ್ ಅವಧಿಯಲ್ಲಿ ಊಹೆಗೂ ಮೀರಿ ಟಿಆರ್‌ಪಿ ಗಳಿಸುತ್ತಿರುವ ದೂರದರ್ಶನ, ಹಳೆಯ ಕಾರ್ಯಕ್ರಮಗಳ ಮರು ಪ್ರಸಾರದ ಮೂಲಕ ತನ್ನ ಜನಪ್ರಿಯತೆಯನ್ನು ಮರಳಿ ಗಳಿಸಿದೆ. ಅದರಲ್ಲಿಯೂ ರಮಾನಂದ ಸಾಗರ್ ನಿರ್ದೇಶನದ 'ರಾಮಾಯಣ' ಪಡೆದಿರುವ ವೀಕ್ಷಣೆ ಟಿವಿ ಕಾರ್ಯಕ್ರಮವೊಂದು ಇಡೀ ಜಗತ್ತಿನಲ್ಲಿಯೇ ಪಡೆದಿರುವ ಅತಿ ಹೆಚ್ಚಿನ ವೀಕ್ಷಣೆ. ಅಂದರೆ ವೀವರ್ ಶಿಪ್ ವಿಚಾರದಲ್ಲಿ 'ರಾಮಾಯಣ' ವಿಶ್ವ ದಾಖಲೆಯನ್ನೇ ನಿರ್ಮಿಸಿದೆ. ಆ ದಾಖಲೆ ಯಾವ ರೀತಿಯದ್ದು? ಮುಂದೆ ಓದಿ...

    ರಾಮ-ರಾವಣ ಕಾಳಗ

    ರಾಮ-ರಾವಣ ಕಾಳಗ

    ಮಾರ್ಚ್ 28ರಂದು 'ರಾಮಾಯಣ'ದ ಮರು ಪ್ರಸಾರವನ್ನು ದೂರದರ್ಶನ ಆರಂಭಿಸಿತ್ತು. ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಒಂದು ಗಂಟೆ ಧಾರಾವಾಹಿ ಪ್ರಸಾರವಾಗುತ್ತಿತ್ತು. ಏಪ್ರಿಲ್ 16ರಂದು ಅದರ ಕೊನೆಯ ಕಂತು ಪ್ರಸಾರವಾಗಿತ್ತು. ರಾಮ-ರಾವಣರ ಯುದ್ಧ ಮತ್ತು ರಾಮನ ಅಯೋಧ್ಯೆ ಮರುಪ್ರವೇಶದ ಸನ್ನಿವೇಶ ಇದಾಗಿತ್ತು.

    ವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನ

    ದಾಖಲೆಯ ವೀಕ್ಷಣೆ

    ದಾಖಲೆಯ ವೀಕ್ಷಣೆ

    ಏಪ್ರಿಲ್ 16ರಂದು ಮರು ಪ್ರಸಾರದ ಕೊನೆಯ ಕಂತು ಪ್ರಸಾರವಾದಾಗ ಅಂದು 77 ಮಿಲಿಯನ್ ವೀಕ್ಷಣೆ ಕಂಡಿತ್ತು. ಇದು ಜಗತ್ತಿನ ಟೆಲಿವಿಷನ್ ಕ್ಷೇತ್ರದಲ್ಲಿಯೇ ಅತ್ಯಧಿಕ ವೀಕ್ಷಣೆ ಎಂಬ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ. ಅಂದರೆ ಜಗತ್ತಿನಾದ್ಯಂತ ಸುಮಾರು 7.7 ಕೋಟಿ ಮಂದಿ ವೀಕ್ಷಿಸಿದ್ದರು.

    ಸಂತಸದ ಸುದ್ದಿ: ಕನ್ನಡದಲ್ಲಿ ಪ್ರಸಾರವಾಗಲಿದೆ ಹೆಮ್ಮೆಯ 'ಮಾಲ್ಗುಡಿ ಡೇಸ್' ಧಾರಾವಾಹಿಸಂತಸದ ಸುದ್ದಿ: ಕನ್ನಡದಲ್ಲಿ ಪ್ರಸಾರವಾಗಲಿದೆ ಹೆಮ್ಮೆಯ 'ಮಾಲ್ಗುಡಿ ಡೇಸ್' ಧಾರಾವಾಹಿ

    ಬಿಗ್ ಬ್ಯಾಂಗ್ ಕೂಡ ಹಿಂದೆ

    ಬಿಗ್ ಬ್ಯಾಂಗ್ ಕೂಡ ಹಿಂದೆ

    ವಿಶೇಷವೆಂದರೆ ಇಡೀ ವಿಶ್ವದೆಲ್ಲೆಡೆ ಖ್ಯಾತಿ ಗಳಿಸಿದ್ದ 'ಗೇಮ್ ಆಫ್ ಥೋರ್ನ್ಸ್' ಸರಣಿಯ ಕೊನೆಯ ಕಂತು 2019ರ ಮೇ ನಲ್ಲಿ ಪ್ರಸಾರವಾಗಿತ್ತು. ಆಗ ಅದು ಗಳಿಸಿದ್ದ ವೀವರ್ ಶಿಪ್ 17.4 ಮಿಲಿಯನ್. ಹಾಗೆಯೇ ಅಮೆರಿಕದ ಮತ್ತೊಂದು ಜನಪ್ರಿಯ ಶೋ 'ಬಿಗ್ ಬ್ಯಾಂಗ್ ಥಿಯರಿ' 18 ಮಿಲಿಯನ್ ವೀವರ್ ಶಿಪ್ ಪಡೆದುಕೊಂಡಿತ್ತು.

    ಅಮುಲ್ ಬಾಲಕಿಯ ಗೌರವ

    ಅಮುಲ್ ಬಾಲಕಿಯ ಗೌರವ

    ದೂರದರ್ಶನದ ಈ ಸಾಧನೆಯನ್ನು ಅಮುಲ್ ತನ್ನ ಜಾಹೀರಾತಿನಲ್ಲಿ ವಿಶಿಷ್ಟವಾಗಿ ಪ್ರಶಂಸಿಸಿದೆ. ಅಮುಲ್ ತನ್ನ 'ಬ್ರ್ಯಾಂಡ್' ಬಾಲಕಿಯ ಚಿತ್ರದ ಜತೆಗೆ 'ರಾಮಾಯಣ' ಮತ್ತು 'ಬಿಗ್ ಬ್ಯಾಂಗ್ ಥಿಯರಿ'ಯ ಚಿತ್ರಗಳನ್ನು ಪ್ರಕಟಿಸಿದೆ. ಡೂಡಲ್‌ನ ಮೇಲ್ಭಾಗದಲ್ಲಿ 'ದಿ ಬಿಗ್ಗೆಸ್ಟ್ ಬ್ಯಾಂಗ್!' ಎಂಬ ಶೀರ್ಷಿಕೆ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದೆ.

    ದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟ

    ಸ್ಟಾರ್ ಪ್ಲಸ್‌ನಲ್ಲಿ ಮತ್ತ ಪ್ರಸಾರ

    ಸ್ಟಾರ್ ಪ್ಲಸ್‌ನಲ್ಲಿ ಮತ್ತ ಪ್ರಸಾರ

    ದೂರದರ್ಶನದಲ್ಲಿ 'ರಾಮಾಯಣ' ಪ್ರಸಾರ ಮುಕ್ತಾಯವಾಗಿ 'ಉತ್ತರ ರಾಮಾಯಣ' ಪ್ರಸಾರವಾಗುತ್ತಿದೆ. ಇದೀಗ ಖಾಸಗಿ ವಾಹಿನಿ ಸ್ಟಾರ್ ಪ್ಲಸ್ ಕೂಡ ರಮಾನಂದ ಸಾಗರ್ ಅವರ 'ರಾಮಾಯಣ'ವನ್ನು ಮರು ಪ್ರಸಾರ ಮಾಡಲಿದೆ. ಮೇ 4ರಿಂದ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ರಾತ್ರಿ 9.30ರಿಂದ 'ರಾಮಾಯಣ' ಪ್ರಸಾರವಾಗಲಿದೆ.

    English summary
    Ramanand Sagar's Ramayan which was re telecasted on Doordarshan has beats Big Bang Theory and Game of Thrones in viewership.
    Monday, May 4, 2020, 11:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X