twitter
    For Quick Alerts
    ALLOW NOTIFICATIONS  
    For Daily Alerts

    ವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನ

    |

    ಬಿಡುಗಡೆಯಾಗಿ ಸುಮಾರು 33 ವರ್ಷಗಳ ಬಳಿಕ ಮರು ಪ್ರಸಾರವಾಗುವ ಮೂಲಕ ಮತ್ತೆ ಭಾರತೀಯ ಮನೆ ಮನಗಳಿಗೆ ತಲುಪಿದ ರಮಾನಂದ ಸಾಗರ್ ನಿರ್ದೇಶನದ ಬಹು ಜನಪ್ರಿಯ ಧಾರಾವಾಹಿ 'ರಾಮಾಯಣ' ಮತ್ತೊಂದು ಹೊಸ ದಾಖಲೆ ಬರೆದಿದೆ.

    Recommended Video

    ಸಾವಿಗೂ ಮುನ್ನ ರಿಷಿ ಕಪೂರ್ ಆಸ್ಪತ್ರೆಯಲ್ಲಿ ಕೇಳಿದ ಹಾಡು ಇದೇ | Rishi Kapoor | Filmibeat Kannada

    ಲಾಕ್‌ ಡೌನ್ ಅವಧಿಯಲ್ಲಿ ಜನರ ಬೇಸರ ಕಳೆಯುವ ಉದ್ದೇಶದಿಂದ ದೂರದರ್ಶನ 'ರಾಮಾಯಣ' ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ಇದು ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದುಕೊಂಡಿತು. ಹೊಸ ತಲೆಮಾರಿನ ಜನರೂ ಉತ್ಸಾಹದಿಂದ ಧಾರಾವಾಹಿ ವೀಕ್ಷಿಸಿದರು. ಇದರ ಪರಿಣಾಮವಾಗಿ ಇತರೆ ಖಾಸಗಿ ವಾಹಿನಿಗಳ ಪೈಪೋಟಿ ನಡುವೆ ಮಂಕಾಗಿದ್ದ ದೂರದರ್ಶನ ಏಕಾಏಕಿ ತನ್ನ ಟಿಆರ್‌ಪಿ ಹೆಚ್ಚಿಸಿಕೊಂಡಿತು. ಬಾರ್ಕ್ ರೇಟಿಂಗ್ಸ್‌ನಲ್ಲಿ ಮೊದಲ ಸ್ಥಾನ ಪಡೆದು ಅಚ್ಚರಿ ಹುಟ್ಟಿಸಿತು. ಮುಂದೆ ಓದಿ...

    'ರಾಮಾಯಣ'ದ ವಿಶ್ವದಾಖಲೆ

    'ರಾಮಾಯಣ'ದ ವಿಶ್ವದಾಖಲೆ

    ದೂರದರ್ಶನ ಮಾಹಿತಿ ನೀಡಿರುವ ಪ್ರಕಾರ ಮರು ಪ್ರಸಾರವಾದ 'ರಾಮಾಯಣ' ವಿಶ್ವದಾಖಲೆಯನ್ನೇ ಬರೆದಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಮನರಂಜನಾ ಕಾರ್ಯಕ್ರಮ ಎಂಬ ಹೆಗ್ಗಳಿಕೆಯನ್ನು 'ರಾಮಾಯಣ' ಸೃಷ್ಟಿಸಿದೆ.

    ದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟ

    7.7 ಕೋಟಿ ವೀವರ್ಸ್

    7.7 ಕೋಟಿ ವೀವರ್ಸ್

    'ದೂರದರ್ಶನದಲ್ಲಿ 'ರಾಮಾಯಣ'ದ ಮರು ಪ್ರಸಾರವು ವಿಶ್ವ ವ್ಯಾಪಿ ವೀವರ್ ಶಿಪ್ ದಾಖಲೆಗಳನ್ನು ಪುಡಿಗಟ್ಟಿದೆ. ಏಪ್ರಿಲ್ 16ರ ವೇಳೆಗೆ 7.7 ಕೋಟಿ ವೀವರ್ಸ್ ಪಡೆದುಕೊಳ್ಳುವ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಮನರಂಜನಾ ಕಾರ್ಯಕ್ರಮ ಎನಿಸಿಕೊಂಡಿದೆ ಎಂದು ದೂರದರ್ಶನ ಟ್ವೀಟ್ ಮಾಡಿದೆ.

    ಧಾರಾವಾಹಿಗಳ ಮರು ಪ್ರಸಾರ

    ಧಾರಾವಾಹಿಗಳ ಮರು ಪ್ರಸಾರ

    ದೂರದರ್ಶನವು 'ರಾಮಾಯಣ'ವಲ್ಲದೆ, ಮಹಾಭಾರತ, ಉತ್ತರ ರಾಮಾಯಣ, ಶ್ರೀ ಕೃಷ್ಣ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುತ್ತಿದೆ. ಹಾಗೆಯೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದ ಅನೇಕ ಹಳೆಯ ಕಾರ್ಯಕ್ರಮಗಳನ್ನು ಪುನಃ ಪ್ರಸಾರ ಮಾಡುವ ಮೂಲಕ ಹೆಚ್ಚು ಜನರನ್ನು ತಲುಪುತ್ತಿದೆ.

    'ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ''ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ'

    ವೀಕ್ಷಕರ ಸಂಖ್ಯೆ ಕುಸಿತ

    ವೀಕ್ಷಕರ ಸಂಖ್ಯೆ ಕುಸಿತ

    ಲಾಕ್ ಡೌನ್ ಸಂದರ್ಭದಲ್ಲಿ ಅತಿ ಹೆಚ್ಚು ವೀಕ್ಷಣೆಗೊಳಗಾಗುತ್ತಿರುವ ಚಾನೆಲ್ ಗಳ ಪಟ್ಟಿಯಲ್ಲಿ ಡಿಡಿ ನ್ಯಾಷನಲ್ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ 'ರಾಮಾಯಣ' ಧಾರಾವಾಹಿ ಏ. 18ರಂದು ಮುಕ್ತಾಯವಾದ ನಂತರ ಅದರ ವೀಕ್ಷಕರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

    ಆರನೇ ವಾರದಲ್ಲಿ ಇಳಿಕೆ

    ಆರನೇ ವಾರದಲ್ಲಿ ಇಳಿಕೆ

    ಲಾಕ್ ಡೌನ್ ಸಂದರ್ಭದಲ್ಲಿ ಬಿಡುಗಡೆಯಾಗಿರುವ ಬ್ರಾಡ್ ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್) ನೀಲ್ಸನ್ ವರದಿ ಪ್ರಕಾರ, ಕಳೆದ ಐದು ವಾರಗಳ ರೇಟಿಂಗ್‌ಗೆ ಹೋಲಿಸಿದರೆ ಆರನೇ ವಾರದಲ್ಲಿ ಏ. 18-24ರ ಅವಧಿಯಲ್ಲಿ ಬೆಳಗಿನ ಅವಧಿಯ ವೀಕ್ಷಕರ ಸಂಖ್ಯೆ ಶೇ 66ರಷ್ಟು ಕುಸಿತವಾಗಿದೆ. ಹಾಗೆಯೇ ಸಂಜೆಯ ವೀಕ್ಷಕರ ಪ್ರಮಾಣ ಶೇ 29 ರಷ್ಟು ಇಳಿಕೆಯಾಗಿದೆ.

    'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ

    ಯೂಟ್ಯೂಬ್ ವೀಕ್ಷಕರ ಸಂಖ್ಯೆ ಹೆಚ್ಚಳ

    ಯೂಟ್ಯೂಬ್ ವೀಕ್ಷಕರ ಸಂಖ್ಯೆ ಹೆಚ್ಚಳ

    ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಒಟ್ಟಾರೆಯಾಗಿ ಡಿಡಿ ವೀಕ್ಷಕರ ಪ್ರಮಾಣವು ಶೇ 46ರಷ್ಟು ಕಡಿಮೆಯಾಗಿದೆ. ರಾಮಾಯಣ ಮರು ಪ್ರಸಾರದ ಬಳಿಕ ದೂರದರ್ಶನದ ಯೂಟ್ಯೂಬ್ ವೀಕ್ಷಕರ ಸಂಖ್ಯೆಯೂ ದುಪ್ಪಟ್ಟಾಗಿದೆ. ಆದರೆ 'ಉತ್ತರ ರಾಮಾಯಣ' ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಇಳಿಮುಖವಾಗಿದೆ.

    English summary
    Ramanand Sagar directed Ramayan which was telecasted in Doordarshan after 33 years has set world record with 7.7 crore viewers.
    Friday, May 1, 2020, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X