twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೆ ಡಬ್ ಆಗಿ ಬರಲಿದೆ ಜನಪ್ರಿಯ ಧಾರಾವಾಹಿ 'ರಾಮಾಯಣ'

    |

    ಕನ್ನಡ ಕಿರುತೆರೆಗೆ ಸಾಲು ಸಾಲು ಡಬ್ಬಿಂಗ್ ಧಾರಾವಾಹಿಗಳು ಕಾಲಿರಿಸುತ್ತಿವೆ. ಅದರಲ್ಲಿಯೂ ಹಳೆಯ ಮತ್ತು ಪೌರಾಣಿಕ ಧಾರಾವಾಹಿಗಳು ನಮ್ಮದೇ ಭಾಷೆಯಲ್ಲಿ ನೋಡಲು ಸಿಗುತ್ತಿರುವುದು ಕನ್ನಡದ ವೀಕ್ಷಕರಿಗೆ ಖುಷಿ ನೀಡಿದೆ.

    Recommended Video

    IFS ಅಧಿಕಾರಿಯ ಪಾತ್ರದಲ್ಲಿ ದರ್ಶನ್ | Darshan | Gandhadagudi 3

    ಸಾರ್ವಕಾಲಿಕ ಕ್ಲಾಸಿಕ್ ಧಾರಾವಾಹಿಗಳಲ್ಲಿ ಒಂದಾದ 'ಮಾಲ್ಗುಡಿ ಡೇಸ್' ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಶಂಕರ್ ನಾಗ್ ನಿರ್ದೇಶನದ ಈ ಧಾರಾವಾಹಿ ಕನ್ನಡಿಗರದ್ದೇ ಆದರೂ ಕನ್ನಡಿಗರಿಗೆ ಅವರದೇ ಭಾಷೆಯಲ್ಲಿ ಸಿಗುತ್ತಿಲ್ಲ ಎಂಬ ನೋವು ಶಮನವಾಗಿದೆ. ಅದರ ಬೆನ್ನಲ್ಲೇ ಇನ್ನಷ್ಟು ಧಾರಾವಾಹಿಗಳು ಡಬ್ಬಿಂಗ್ ಮೂಲಕ ಕನ್ನಡಕ್ಕೆ ಲಗ್ಗೆ ಇಟ್ಟಿವೆ. ಬಹುತೇಕ ಖಾಸಗಿ ವಾಹಿನಿಗಳೂ ಡಬ್ಬಿಂಗ್ ಧಾರಾವಾಹಿಗಳ ಪ್ರಸಾರಕ್ಕೆ ಮುಂದಾಗಿವೆ. ಮಹಾಭಾರತ, ರಾಧಾ ಕೃಷ್ಣ ಧಾರಾವಾಹಿಗಳ ಸಾಲಿಗೆ ರಾಮಾಯಣ ಕೂಡ ಸೇರಿಕೊಳ್ಳುತ್ತಿದೆ. ಮುಂದೆ ಓದಿ...

    ಮರು ಪ್ರಸಾರವಾಗಿದ್ದ ಧಾರಾವಾಹಿ

    ಮರು ಪ್ರಸಾರವಾಗಿದ್ದ ಧಾರಾವಾಹಿ

    80ರ ದಶಕದ ಅಂತ್ಯದಲ್ಲಿ ಹವಾ ಸೃಷ್ಟಿಸಿದ್ದ ಹಿಂದಿಯ 'ರಾಮಾಯಣ' ಧಾರಾವಾಹಿ ಇತ್ತೀಚೆಗೆ ಡಿಡಿ ನ್ಯಾಷನಲ್‌ನಲ್ಲಿ ಮರುಪ್ರಸಾರವಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇದ್ದ ಜನರೂ ಖುಷಿಯಿಂದ ಹಳೆಯ ಪೌರಾಣಿಕ ಧಾರಾವಾಹಿಯನ್ನು ವೀಕ್ಷಿಸಿದ್ದರು.

    33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?

    ದಾಖಲೆ ಬರೆದ ರಾಮಾಯಣ

    ದಾಖಲೆ ಬರೆದ ರಾಮಾಯಣ

    ರಮಾನಂದ ಸಾಗರ್ ನಿರ್ದೇಶನದ 'ರಾಮಾಯಣ' ಪಡೆದ ಪ್ರಸಿದ್ಧಿ ಅಂತಿದ್ದಲ್ಲ. 1987ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿ ಮರುಪ್ರಸಾರದಲ್ಲಿಯೂ ದಾಖಲೆ ಬರೆದಿತ್ತು. ಕೊನೆಯ ಕಂತು ಪ್ರಸಾರವಾದಾಗ 77 ಮಿಲಿಯನ್ ವೀಕ್ಷಣೆಗೆ ಒಳಗಾಗಿತ್ತು. ಇದು ಜಗತ್ತಿನಲ್ಲಿಯೇ ಟಿವಿ ಕಾರ್ಯಕ್ರಮವೊಂದರ ಎಪಿಸೋಡ್ ಅತಿ ಹೆಚ್ಚು ವೀಕ್ಷಣೆ ಪಡೆದ ದಾಖಲೆಯಾಗಿದೆ.

    ಕನ್ನಡದಲ್ಲಿ ಧಾರಾವಾಹಿ

    ಕನ್ನಡದಲ್ಲಿ ಧಾರಾವಾಹಿ

    ಈ ಧಾರಾವಾಹಿ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದ್ದರೂ ಕನ್ನಡಕ್ಕೆ ಮಾತ್ರ ಬಂದಿಲ್ಲ. ಇದರ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಇಂತಹ ಧಾರಾವಾಹಿ ನಿರ್ಮಾಣವಾಗುವುದಿಲ್ಲ. ಹಿಂದಿಯಲ್ಲಿ ಪ್ರಸಾರವಾದಾಗ ಅದೇ ಭಾಷೆಯಲ್ಲಿ ನೋಡುವಂತಾಗಿದೆ. ಅದರ ಬದಲು ನಮ್ಮದೇ ಭಾಷೆಯಲ್ಲಿ ಬೇಕು ಎಂದು ಹೇಳಿದ್ದರು. ಅದರಂತೆ ಈ ಧಾರಾವಾಹಿ ಈಗ ಕನ್ನಡಕ್ಕೂ ಡಬ್ ಆಗಿದ್ದು, ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.

    ಏಳು ವರ್ಷದ ಹಿಂದೆಯೇ ನೂರು ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಧಾರಾವಾಹಿಏಳು ವರ್ಷದ ಹಿಂದೆಯೇ ನೂರು ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದ ಧಾರಾವಾಹಿ

    ದಿನಾಂಕ ಮತ್ತು ಸಮಯ

    ದಿನಾಂಕ ಮತ್ತು ಸಮಯ

    ಅರುಣ್ ಗೋವಿಲ್, ಸುನೀಲ್ ಲಹ್ರಿ, ಅರವಿಂದ್ ತ್ರಿವೇದಿ, ದೀಪಿಕಾ ಚಿಖ್ಲಿಯಾ ಮುಂತಾದವರು ನಟಿಸಿದ್ದ ರಾಮಾಯಣ, ಕನ್ನಡದ ವೀಕ್ಷಕರಿಗೆ ಸಿಗಲಿದೆ. ಅದರ ಪ್ರಸಾರದ ದಿನಾಂಕ ಮತ್ತು ಸಮಯ ಇನ್ನೂ ಘೋಷಣೆಯಾಗಿಲ್ಲ.

    'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ಹೊರಬಂದ ನಟಿ ಸೌಂದರ್ಯ: ಅಸಲಿ ಕಾರಣವೇನು?'ಮಂಗಳಗೌರಿ ಮದುವೆ' ಧಾರಾವಾಹಿಯಿಂದ ಹೊರಬಂದ ನಟಿ ಸೌಂದರ್ಯ: ಅಸಲಿ ಕಾರಣವೇನು?

    English summary
    Kannada dubbing version of Ramanand Sagar's Ramayan will be telecasted soon on television.
    Wednesday, June 10, 2020, 18:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X