ರಮೇಶ್ ಜೊತೆಗೆ 'ನಂ 1 ಯಾರಿ' ಶೋಗೆ ಬಂದವರು ಯಾರು?
Recommended Video

ಶಿವರಾಜ್ ಕುಮಾರ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಇದೀಗ ನಟ ರಮೇಶ್ ಅರವಿಂದ್ ಬಂದಿದ್ದಾರೆ. ಈಗಾಗಲೇ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ಗಳು ಆಗಮಿಸಿದ್ದ ಈ ಕಾರ್ಯಕ್ರಮಕ್ಕೆ ಈಗ ರಮೇಶ್ ಕೂಡ ಕಾಲಿಟ್ಟಿದ್ದಾರೆ. ನಟ ರಮೇಶ್ ಅವರ ಈ ವಿಶೇಷ ಸಂಚಿಕೆಯ ಪ್ರೋಮೊ ಹೊರಬಂದಿದೆ.
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮ ಮುಖ್ಯವಾಗಿ ಸ್ನೇಹಿತರ ಬಗ್ಗೆ ಇರುವ ಶೋ. ಅದ್ದರಿಂದ ಇಲ್ಲಿಗೆ ಬರುವ ಅತಿಥಿಗಳ ರೀತಿ ಅವರ ಜೊತೆಗೆ ಬರುವ ಸ್ನೇಹಿತರು ಸಹ ಅಷ್ಟೇ ಮುಖ್ಯವಾಗುತ್ತಾರೆ. ಅಂದಹಾಗೆ, ರಮೇಶ್ ಜೊತೆಗೆ ಗೌರವ್ ಎನ್ನುವ ಅವರ ಸ್ನೇಹಿತರೊಬ್ಬರು ಯಾರಿ ಯಾಗಿ ಕಾರ್ಯಕ್ರಮದಲ್ಲಿ ಸಾಥ್ ನೀಡಿದ್ದಾರೆ. ಹಾಗೆ ಹೇಳಬೇಕು ಅಂದರೆ ಶಿವಣ್ಣ ಕೂಡ ರಮೇಶ್ ಗೆ ಹತ್ತಿರದ ಸ್ನೇಹಿತರು. ಕಾರ್ಯಕ್ರಮದಲ್ಲಿ ಶಿವಣ್ಣ ಕೇಳುವ ತರ್ಲೆ ಪ್ರಶ್ನೆಗಳಿಗೆ ರಮೇಶ್ ಉತ್ತರಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ನಟಿ ಪಾರೂಲ್ ಯಾದವ್ ಕೂಡ ಭಾಗಿಯಾಗಿದ್ದಾರೆ. ಪ್ರೊಮೊದಲ್ಲಿ ಪಾರೂಲ್ ಪುನೀತ್ ಜೊತೆಗೆ ಡಿನ್ನರ್ ಹೊಗುತ್ತೇನೆ ಎಂದಿದ್ದಾರೆ. ರಮೇಶ್ ಅರವಿಂದ್ ನಿರ್ದೇಶಕದ 'ಬಟರ್ ಫ್ಲೈ' ಸಿನಿಮಾದಲ್ಲಿ ಪಾರೂಲ್ ನಟಿಸಿದ್ದಾರೆ. ಈ ಸಿನಿಮಾ ಹಿಂದಿಯ 'ಕ್ವೀನ್' ಚಿತ್ರದ ರಿಮೇಕ್ ಆಗಿದೆ. ರಮೇಶ್ ಅವರ 'ನಂ 1 ಯಾರಿ ವಿತ್ ಶಿವಣ್ಣ' ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರ ಆಗಲಿದೆ.


Click it and Unblock the Notifications











