ರಾಜ್, ವಿಷ್ಣು, ಶಂಕರ್ ನಾಗ್, ಅಂಬಿ ಜೀವನ ಚರಿತ್ರೆಗೆ ರಮೇಶ್ ಇಡುವ ಹೆಸರು ಏನು?
ಕನ್ನಡ ಚಿತ್ರರಂಗ ಅಂದ ತಕ್ಷಣ ನೆನಪಾಗುವ ದಿಗ್ಗಜ ನಟರು ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಮತ್ತು ಅಂಬರೀಶ್. ಈ ನಟರ ಬಗ್ಗೆ ಈಗಾಗಲೇ ಅನೇಕ ಪುಸ್ತಕಗಳು ಬಂದಿದೆ. ಆದರೆ ರಮೇಶ್ ಈ ನಟರ ಬಗ್ಗೆ ಪುಸ್ತಕ ಬರೆದರೆ ಚಂದದ ಹೆಸರನ್ನು ಇಡುತ್ತಾರೆ.
ಅಂದಹಾಗೆ, ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ''ಈ ಮಹಾನ್ ನಟರ ಬಗ್ಗೆ ಒಂದು ಜೀವನ ಚರಿತ್ರೆಯ ಪುಸ್ತಕ ಬರೆದರೆ ಅದಕ್ಕೆ ಏನು ಹೆಸರು ಇಡುತ್ತೀರಾ?'' ಎಂದು ಕೇಳಿದರು. ಆಗ ರಮೇಶ್, ರಾಜ್ ಕುಮಾರ್ ಅವರ ಪುಸ್ತಕಕ್ಕೆ 'ಪ್ರೀತಿಯ ವಿಳಾಸ', ವಿಷ್ಣುವರ್ಧನ್ ಅವರ ಪುಸ್ತಕಕ್ಕೆ ಸಿಂಹ ಘರ್ಜನೆ, ಶಂಕರ್ ನಾಗ್ ಪುಸ್ತಕಕ್ಕೆ 'ಆಕಾಶದ ಆಚೆಗೆ ಕನಸು', ಅಂಬರೀಶ್ ಅವರ ಪುಸ್ತಕಕ್ಕೆ ಸ್ನೇಹಲೋಕ ಎಂಬ ಉತ್ತರ ನೀಡಿದರು.

ಸ್ಯಾಂಡಲ್ ವುಡ್ ಕಂಡ ನಾಲ್ಕು ದೊಡ್ಡ ನಟರ ಪುಸ್ತಕಕ್ಕೆ ಅಷ್ಟೆ ಚೆಂದವಾದ ಹೆಸರನ್ನು ರಮೇಶ್ ನೀಡಿದರು. ಇನ್ನು ಇದೇ ಕಾರ್ಯಕ್ರಮದಲ್ಲಿ ಶಂಕರ್ ನಾಗ್ ಬಗ್ಗೆ ಮಾತನಾಡಿದ ಅವರು ''ನಾನು ಒಮ್ಮೆ ಶಂಕರ್ ನಾಗ್ ಅವರಿಗೆ, ಸರ್ ನೀವು ಏನೇನೋ ಕನಸು ಕಾಣುತ್ತಿದ್ದೀರಾ.. ಅಲ್ಲಿಂದ.. ಇಲ್ಲಿಂದ ಲೋನ್ ತೆಗೆದುಕೊಳ್ಳುತ್ತಿದ್ದೀರಾ. ಕೆಲವೊಮ್ಮೆ ಅನಿಸುತ್ತದೆ ನಿಮ್ಮ ಸಾಮರ್ಥ್ಯಕ್ಕಿಂತ ನಿಮ್ಮ ಲೋನ್ ಜಾಸ್ತಿ ಆಗುತ್ತಿದೆ ಅಂತ ಕೇಳಿದೆ. ಆಗ ಅವರು 'ಈ ಕ್ರೆಡಿಟ್, ಡೆಬಿಟ್ ಎಲ್ಲ ಅಕೌಂಟ್ಸ್ ಬುಕ್ ನಲ್ಲಿರುವ ಕಾಲಂ ರಮೇಶ್. ಅವು ನಮ್ಮ ಕನಸುಗಳಿಗೆ ಅಡ್ಡ ಬರಬಾರದು' ಎಂದರು .
ಅದಕ್ಕೆ ಶಂಕರ್ ನಾಗ್ ಅವರ ಜೀವನ ಚರಿತ್ರೆಗೆ 'ಡೀಮ್ಸ್ ಬಿಯಾಂಡ್ ಕ್ರೆಡಿಟ್ ಡಿಬಿಟ್' ಅಥವಾ 'ಆಕಾಶದ ಆಚೆಗೆ ಕನಸು' ಅಂತ ಬರೆಯಬೇಕು.'' ಎಂದು ಶಂಕರ್ ನಾಗ್ ಅವರ ಕನಸಿನ ಬಗ್ಗೆ ರಮೇಶ್ ಮಾತನಾಡಿದರು.


Click it and Unblock the Notifications











