ಬೆಲ್ಲಿ ಡ್ಯಾನ್ಸ್ ಮೂಲಕ ಗಮನ ಸೆಳೆದ ರಮೋಲಾ; ಯಾವ ಹಾಡಿಗೆ ಡ್ಯಾನ್ಸ್ ಮಾಡಿದ್ದು ಗೊತ್ತೇ?

By ಅನಿತಾ ಬನಾರಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಚ್ಚ ಹೊಸ ಸಿನಿಮಾ 'ಕೃಷ್ಣ ಪ್ರಣಯ ಸಖಿ' ಸಿನಿಮಾ ಈಗಾಗಲೇ ರಿಲೀಸ್ ಆಗಿದ್ದು ಸಖತ್ ಸದ್ದು ಮಾಡುತ್ತಿದೆ. ಅದರಲ್ಲಿನ "ಜೇನ ದನಿಯೋಳೆ, ಮೀನ ಕಣ್ಣೋಳೆ" ಹಾಡು ಇದೀಗ ಟ್ರೆಂಡಿಂಗ್‌ನಲ್ಲಿದೆ. ದೊಡ್ಡವರಿಂದ ಹಿಡಿದು ಸಣ್ಣ ಮಕ್ಕಳ ತನಕ ಎಲ್ಲರೂ ಆ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಕಿರುತೆರೆ ನಟಿ ರಮೋಲಾ ಅವರು ಕೂಡಾ ಈ ಹಾಡಿಗೆ ಹೆಜ್ಜೆ ಹಾಕಿ ಸದ್ದು ಮಾಡಿದ್ದಾರೆ.

ಅದರಲ್ಲೇನು ವಿಶೇಷ ಎಂದು ಅಂದುಕೊಂಡಿದ್ದೀರಾ? ರಮೋಲಾ ಅವರು ಕೃಷ್ಣ ಪ್ರಣಯ ಸಖಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿರುವುದೇನೋ ನಿಜ. ಆದರೆ ಅವರು ಮಾಡಿರುವುದು ಬೆಲ್ಲಿ ಡ್ಯಾನ್ಸ್! ರಮೋಲಾ ಅವರ ಬೆಲ್ಲಿ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು ಈಗಾಗಲೇ 22000 ಜನ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 1300 ಜನ ಆ ವಿಡಿಯೋವನ್ನು ಶೇರ್ ಮಾಡಿದ್ದಾರೆ.

Ramola dance to a song from Ganesh starrer Krishnam Pranaya Sakhi video is trending

ನಟನೆಯ ಹೊರತಾಗಿ ರಮೋಲಾ ಅವರು ಬೆಲ್ಲಿ ಡ್ಯಾನ್ಸ್ ನಲ್ಲಿ ಪಳಗಿದವರು ಎಂದರೆ ತಪ್ಪಾಗಲಾರದು. ಇನ್‌ಸ್ಟಾಗ್ರಾಂನಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ಈಕೆ ಸಮಯ ಸಿಕ್ಕಾಗಲ್ಲೆಲ್ಲಾ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಬೆಲ್ಲಿ ಡ್ಯಾನ್ಸ್‌ನ ವಿಡಿಯೋಗಳನ್ನು ಕೂಡಾ ಈಕೆ ಶೇರ್ ಮಾಡುತ್ತಿರುತ್ತಿದ್ದು ನೆಟ್ಟಿಗರ ಮನ ಸೆಳೆಯುತ್ತಿದ್ದಾರೆ.

'ಕನ್ನಡತಿ' ಧಾರಾವಾಹಿಯಲ್ಲಿ ಸಾನಿಯಾ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ರಮೋಲಾ. ಮೊದಲ ಧಾರಾವಾಹಿಯಲ್ಲಿಯೇ ನೆಗೆಟಿವ್ ಪಾತ್ರದ ಮೂಲಕ ಮೋಡಿ ಮಾಡಿದ ರಮೋಲಾ ಆ ಪಾತ್ರದ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯತೆ ಗಳಿಸಿಕೊಂಡಿದ್ದರು. ಆದರೆ ನಂತರ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು.

Ramola dance to a song from Ganesh starrer Krishnam Pranaya Sakhi video is trending

ನಂತರ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ ಈಕೆ 'ರಿಚ್ಚಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದರು. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ವೆಡ್ಡಿಂಗ್ ಪ್ಲಾನರ್ ಸಾರಾ ಆಗಿ ಈಕೆ ಬಣ್ಣ ಹಚ್ಚಿದ್ದರು. ಅದು ಅತಿಥಿ ಪಾತ್ರವಾಗಿದ್ದರೂ ಆ ಮೂಲಕ ಮತ್ತೊಮ್ಮೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿಯಲ್ಲಿ ಚಾಂದಿನಿ ಎನ್ನುವ ಪಾತ್ರದಲ್ಲಿ ಈಕೆ ಅಭಿನಯಿಸುತ್ತಿದ್ದಾರೆ. ಸಂಪೂರ್ಣ ನೆಗೆಟಿವ್ ಅಲ್ಲದಿದ್ದರೂ ನೆಗೆಟಿವ್ ಛಾಯೆ ಹೊಂದಿರುವ ಚಾಂದಿನಿ ಪಾತ್ರದ ಮೂಲಕ ವೀಕ್ಷಕರನ್ನು ರಮೋಲಾ ಸೆಳೆಯುತ್ತಿದ್ದಾರೆ.

More from Filmibeat

English summary
Ramola dance to a song from Ganesh starrer Krishnam Pranaya Sakhi video is trending
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X