ಗಾಳಿಸುದ್ದಿ ನಿಜವಾಯ್ತು, ಅಪ್ಪು ಜತೆ ಮತ್ತೆ ಲಕ್ಕಿಸ್ಟಾರ್

By Mahesh

ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳ ಪ್ರೀತಿಯ 'ಅಪ್ಪು' ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜತೆ ಲಕ್ಕಿಸ್ಟಾರ್ ರಮ್ಯಾ ಮತ್ತೆ ನಟಿಸುತ್ತಾರೆ ಎಂಬ ಗಾಳಿ ಸುದ್ದಿ ಗಟ್ಟಿಯಾಗಿದೆ. ದುನಿಯಾ ಸೂರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ದೊಡ್ಮನೆ ಹುಡ್ಗ' ದಲ್ಲಿ ಜನಪ್ರಿಯ ಯಶಸ್ವಿ ಜೋಡಿ ರಮ್ಯಾ ಹಾಗೂ ಪುನೀತ್ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದ್ದಾರೆ.

ದೊಡ್ಡಮನೆ ಹುಡುಗನಿಗೆ ಹುಡುಗಿ ಸಿಗುವುದೇ ಕಷ್ಟ ಎನ್ನಲಾಗಿತ್ತು. ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ಊರೆಲ್ಲಾ ಹುಡುಕಿದರೂ ಎಂಬಂತೆ ಹುಡುಗಿ ಹುಡುಕಾಟ ನಡೆಸಿದ ಚಿತ್ರತಂಡ ಕೊನೆಗೂ ಲಕ್ಕಿಸ್ಟಾರ್ ಅವರ ಮನವೊಲಿಸಿದ್ದಾರೆ. ಅಪ್ಪು ಜತೆ ನಟಿಸಲು ಯಾವತ್ತಿಗೂ ರೆಡಿ ಎನ್ನುವ ರಮ್ಯಾ ಅವರು ಕೂಡಾ ಈ ಚಿತ್ರಕ್ಕೆ ಸಹಿ ಹಾಕಲು ಸಮ್ಮತಿಸಿದ್ದಾರೆ ಎಂದು ನಿರ್ದೇಶಕ ದುನಿಯಾ ಸೂರಿ ಸ್ಪಷ್ಟಪಡಿಸಿದ್ದಾರೆ. [ಪುನೀತ್ ಜೊತೆ ಲಕ್ಕಿ ಸ್ಟಾರ್ ರಮ್ಯಾ]

ಈ ಹಿಂದೆ ಅಭಿ, ಆಕಾಶ್ ಹಾಗೂ ಅರಸು ಯಶಸ್ವಿ ಚಿತ್ರಗಳಲ್ಲಿ ಈ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗ ದೊಡ್ಡಮನೆ ಹುಡುಗ ಚಿತ್ರದಲ್ಲಿ ಮತ್ತೊಮ್ಮೆ ಈ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Ramya to act with Puneeth in Dodmane Huduga movie

ಸದ್ಯ ಬಳ್ಳಾರಿ ಸುತ್ತಮುತ್ತಾ ಪವರ್ ಸ್ಟಾರ್ ಅವರ ರಣ ವಿಕ್ರಮ ಶೂಟಿಂಗ್ ಜಾರಿಯಲ್ಲಿದೆ. ರಮ್ಯಾ ಅವರು ತಮ್ಮ ಕನಸಿನ ಎರಡು ಯೋಜನೆಗಳ ಬೆನ್ನು ಹತ್ತಿದ್ದಾರೆ. ಶಿವರಾಜ್ ಕುಮಾರ್ ಜತೆ ನಟಿಸಿರುವ ಆರ್ಯನ್ ಚಿತ್ರ ಇದೇ ತಿಂಗಳ 18ಕ್ಕೆ ತೆರೆ ಕಾಣುವ ಸಾಧ್ಯತೆಯಿದೆ. ರಣವಿಕ್ರಮದ ನಂತರವೇ ದೊಡ್ಡಮನೆ ಹುಡುಗ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.

ದುನಿಯಾ ಸೂರಿ ಆಕ್ಷನ್ ಕಟ್ ಹೇಳುತ್ತಿರುವ ದೊಡ್ಮನೆ ಹುಡ್ಗ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ. ಎಂ ಗೋವಿಂದು ಅವರು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.ಈ ಹಿಂದೆ 'ವಿಷ್ಣುಸೇನೆ' ಹಾಗೂ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರಗಳನ್ನು ನಿರ್ಮಿಸಿದ್ದರು ಜಾಕಿ ಹಾಗೂ ಅಣ್ಣಾಬಾಂಡ್ ಚಿತ್ರಗಳ ಬಳಿಕ ಸೂರಿ, ಪುನೀತ್ ಕಾಂಬಿನೇಷನಲ್ಲಿ ಬರುತ್ತಿರುವ ಮೂರನೇ ಚಿತ್ರ ದೊಡ್ಮನೆ ಹುಡ್ಗ.

More from Filmibeat

English summary
The rumours have turned out to be true and Ramya is paired with Puneeth Rajkumar in his next film 'Dodmane Huduga' to be directed by Duniya Soori. Soori himself has confirmed that Ramya will be acting opposite Puneeth in the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X