»   » ಸುವರ್ಣ ವಾಹಿನಿಯಲ್ಲಿ ರಮ್ಯಾ ಹೊಚ್ಚ ಹೊಸ ಚಿತ್ರ

ಸುವರ್ಣ ವಾಹಿನಿಯಲ್ಲಿ ರಮ್ಯಾ ಹೊಚ್ಚ ಹೊಸ ಚಿತ್ರ

Posted By:
Subscribe to Filmibeat Kannada

ಸುವರ್ಣ ವಾಹಿನಿ ಪ್ರತಿ ಭಾನುವಾರ ತನ್ನ ವೀಕ್ಷಕರ ಬಳಗಕ್ಕೆ ಹೊಚ್ಚ ಹೊಸ ಸಿನೆಮಾಗಳನ್ನು ಕೊಡುತ್ತಾ ಬರುತ್ತಿದೆ. ಈ ಭಾನುವಾರ (ಅ.21) ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ಕಾಮಿಡಿ ಚಿತ್ರ 'ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್' ಪ್ರಸಾರವಾಗುತ್ತಿದೆ.

ಈ ಚಿತ್ರದ ನಾಯಕ ನಟ ದುನಿಯಾ ವಿಜಯ್. ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರವಿದು. ಇದೇ ಭಾನುವಾರ ಸಂಜೆ 6ಗಂಟೆಗೆ ಚಿತ್ರ ಪ್ರಸಾರವಾಲಿದೆ. ಜಯಣ್ಣ ಹಾಗೂ ಭೋಗೇಂದ್ರ ನಿರ್ಮಾಣದ ಈ ಚಿತ್ರ 2011ರ ಜೂನ್ ತಿಂಗಳಲ್ಲಿ ತೆರೆಕಂಡಿದೆ. ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಚಿತ್ರ ವಿಮರ್ಶೆ ಓದಿ.

ಒಟ್ಟು ರು.3.5 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ಬಾಕ್ಸಾಫೀಸಲ್ಲಿ ರು.10 ಕೋಟಿ ಕಲೆಕ್ಷನ್ ಮಾಡಿತ್ತು. ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಪ್ರಧಾನ ಚಿತ್ರವಿದು. ಚಿತ್ರದಲ್ಲಿ ಬಳಸಿಕೊಂಡಿರುವ ಸೆಟ್ ಗಳು ಅದ್ದೂರಿಯಾಗಿದ್ದು ಪ್ರೇಕ್ಷಕರ ಕಣ್ಮನ ತಣಿಸುವಂತಿವೆ.

ರಂಗಾಯಣ ರಘು, ದತ್ತಣ್ಣ, ಸಾಧು ಕೋಕಿಲ, ಅಚ್ಯುತ್ ಕುಮಾರ್ ಅವರ ಹಾಸ್ಯ ಪ್ರೇಕ್ಷಕರಿಗೆ ಇನ್ನಷ್ಟು ಕಚಗುಳಿಯಿಡುತ್ತದೆ. ಈ ಚಿತ್ರದ ಹಾಡೊಂದರಲ್ಲಿ ರಮ್ಯಾ ಮೊಟ್ಟಮೊದಲ ಬಾರಿಗೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. "ಊರಿಗೊಬ್ಳೆ ಪದ್ಮಾವತಿ..." ಹಾಡು ಸೂಪರ್ ಹಿಟ್ ಆಗಿತ್ತು. ಬಿಡುವಾದರೆ ಇದೇ ಭಾನುವಾರ ಚಿತ್ರವನ್ನು ನೋಡಿ ಆನಂದಿಸಿ. (ಒನ್ಇಂಡಿಯಾ ಕನ್ನಡ)

English summary
Golden girl Ramya and Duniya Vijay lead Kannada film Johny Mera Naam Preethi Mera Kaam airs on Suvarna Channel on 21st October at 6 pm IST. The film is directed by Preetam Gubbi and Jayanna and Bhogendra have jointly produced this venture under Jayanna combines banner. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada