'ವೀಕೆಂಡ್ ವಿತ್ ರಮೇಶ್‌'ಗೆ ಬಂದ ರಮ್ಯಾ ಹೆವೀ ಟ್ರೋಲ್: ರಶ್ಮಿಕಾ 'ತತ್ಸಮ' ರಮ್ಯಾ 'ತದ್ಬವ' ಅಂತೆ!

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಕಿರುತೆರೆಯ ಜನಪ್ರಿಯ ಟಾಕ್‌ ಶೋಗಳಲ್ಲಿ ಒಂದಾದ ವೀಕೆಂಡ್ ವಿತ್ ರಮೇಶ್ ನಿನ್ನೆ (ಮಾರ್ಚ್ 25)ಯಿಂದ ಆರಂಭಗೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಈ ಶೋಗಾಗಿ ಕಿರುತೆರೆ ವೀಕ್ಷಕರು ಕಾದು ಕೂತಿದ್ದರು. ದುಪ್ಪಟ್ಟು ನಿರೀಕ್ಷೆಯೊಂದಿಗೆ ಕೂತಿದ್ದ ವೀಕ್ಷಕರಿಗೆ ಕೊಂಚ ಮಟ್ಟಿಗೆ ನಿರಾಸೆಯಾಗಿದೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5ರ ಮೊದಲ ಅತಿಥಿ ಮೋಹಕತಾರೆ ರಮ್ಯಾ. ಇವರನ್ನು ಸಾಧಕರ ಸೀಟ್‌ನಲ್ಲಿ ನೋಡಬೇಕು ಅಂತ ಹಲವು ಮಂದಿಯ ಒತ್ತಾಸೆಯಾಗಿತ್ತು. ಈ ಆಸೆಯಂತೆಯೇ ಜೀ ಕನ್ನಡ ಮೊದಲ ಅತಿಥಿಯನ್ನಾಗಿ ರಮ್ಯಾರನ್ನು ಕರೆದುಕೊಂಡು ಬಂದಿದ್ದರು.

Ramya was heavily trolled after Weekend with Ramesh episode, also compare with Rashmika Mandanna

ಮೊದಲ ಸಂಚಿಕೆ ಪ್ರಸಾರಕ್ಕೂ ಮುನ್ನ ಜೀ ಕನ್ನಡ ಕಾರ್ಯಕ್ರಮದ ಹಲವು ತುಣುಕುಗಳನ್ನು ರಿಲೀಸ್ ಮಾಡಿತ್ತು. ಐದು ಪ್ರೋಮೊಗಳು ಕಿರುತೆರೆ ವೀಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಇದೇ ನಿರೀಕ್ಷೆಯೊಂದಿಗೆ ಕೂತಿದ್ದ ವೀಕ್ಷಕರಿಗೆ ನಿರಾಸೆ ಆಗಿದ್ದು, ರಮ್ಯಾ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾರನ್ನು ಹೆವಿ ಟ್ರೋಲ್ ಮಾಡುತ್ತಿದ್ದಾರೆ.

ಕನ್ನಡಕ್ಕಿಂತ ಇಂಗ್ಲಿಷ್ ಬಳಸಿದ್ದೇ ಹೆಚ್ಚು

ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮದಲ್ಲಿ ರಮ್ಯಾ ಸೀರೆಯುಟ್ಟು ವೇದಿಕೆ ಮೇಲೆ ಬರುತ್ತಿದೆ, ಅಭಿಮಾನಿಗಳು ಫಿದಾ ಆಗಿದ್ದರು. ಇತ್ತ ಕಿರುತೆರೆ ವೀಕ್ಷಕರು ರಮ್ಯಾ ಬದುಕನ್ನು ತಿಳಿದುಕೊಳ್ಳುವುದಕ್ಕೆ ಕಾತುರದಿಂದ ಕಾದು ಕೂತಿದ್ದರು. ಆದರೆ, ವೀಕ್ಷಕರು ಸ್ಪಲ್ಪ ಹೊತ್ತಿನಲ್ಲೇ ಕಿರಿಕಿರಿ ಅನುಭವಿಸಿದ್ರು.

ರಮ್ಯಾ ಸಂಚಿಕೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಇಡೀ ಮನೆ ಮಂದಿ ಕೂತು ಕಾರ್ಯಕ್ರಮ ನೋಡುತ್ತಿದ್ದವರಿಗೆ ಕಿರಿಕಿರಿ ಮಾಡಿದ್ದು, ರಮ್ಯಾ ಇಂಗ್ಲಿಪ್. ಇಡೀ ಕಾರ್ಯಕ್ರಮದಲ್ಲಿ ಕನ್ನಡ ಬಳಸಿದ್ದು ಕಡಿಮೆ ಅನ್ನೋದು ನೆಟ್ಟಿಗರ ವಾದ. ಇದು ಕನ್ನಡ ಕಾರ್ಯಕ್ರಮದಂತೆ ಇರಲಿಲ್ಲ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಹೆವೀ ಟ್ರೋಲ್ ಆದ ರಮ್ಯಾ

ಮೋಹಕತಾರೆ ರಮ್ಯಾ ಕಾರ್ಯಕ್ರಮದಲ್ಲಿ ಹೆಚ್ಚು ಕನ್ನಡ ಬಳಸಿದೆ ಇದ್ದಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಒಬ್ಬರು "ಕನ್ನಡಕ್ಕಿಂತ ಯಾರು ದೊಡ್ಡವರಿಲ್ಲ, ಇಂಗ್ಲಿಷ್ ಊಟದ ಜೊತೆ ಉಪ್ಪಿನಕಾಯಿ ತರ ಇರ್ಲಿ. ಆದ್ರೆ ಅದೇ ಊಟ ಆಗೋದು ಬೇಡ." ಅಂತ ಹೇಳಿ ಉಪೇಂದ್ರ ಕನ್ನಡದ ಬಗ್ಗೆ ಮಾತಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇನ್ನೊಬ್ಬರು "ತುಂಬಾ ಚೆನ್ನಾಗಿರುತ್ತೆ ನೋಡಕ್ಕೆ ಅಂತ ಕುಳಿತೆ ರಮ್ಯಾ ಎಪಿಸೋಡ್‌ನ.. ಆದರೆ, ಬರೀ ತಸ್ಸು ಪುಸ್ಸು ಇಂಗ್ಲಿಷ್ ಕೇಳಿ ಕೇಳಿ ಸಾಕಾಗ್ತಿದೆ .. ಏನ್ ಕರ್ಮ ಬಂತಪ್ಪ.." ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು "ನಮ್ಮ ಅಮ್ಮನಿಗೆ ಅಜ್ಜಿಗೆ ಇಂಗ್ಲಿಷ್ ಗೊತ್ತಿಲ್ಲ ಬ್ರೋ" ಅಂತಾನೂ ಟ್ರೋಲ್ ಮಾಡುತ್ತಿದ್ದಾರೆ.

Ramya was heavily trolled after Weekend with Ramesh episode, also compare with Rashmika Mandanna

ರಮ್ಯಾ ಜೊತೆ ರಶ್ಮಿಕಾ ಎಳೆದು ತಂದ ನೆಟ್ಟಿಗರು

ಮೋಹಕತಾರೆ ರಮ್ಯಾ ಇಂಗ್ಲಿಷ್‌ನಲ್ಲಿ ಮಾತಾಡಿ ಟ್ರೋಲ್ ಆಗಿದ್ದು ಒಂದು ಕಡೆ. ಇದರ ಜೊತೆನೇ ನ್ಯಾಷನಲ್ ಕ್ರಶ್ ರಶ್ಮಿಕಾರನ್ನೂ ಎಳೆದು ತಂದಿದ್ದಾರೆ. ಟ್ರೋಲಿಗರೊಬ್ಬರು "ರಮ್ಯಾ ತತ್ಸಮ.. ರಶ್ಮಿಕಾ ಮಂದಣ್ಣ ತದ್ಬವ. ಹೆಚ್ಚಿನ ಮಾಹಿತಿಗಾಗಿ ವೀಕೆಂಡ್ ವಿತ್ ಇಂಗ್ಲಿಷ್ ನೋಡಿ" ಎಂದು ಟ್ರೋಲ್ ಮಾಡುತ್ತಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5 ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲ ಮೂಡಿಸಿದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅದರದ್ದೇ ಫ್ಯಾನ್ ಫಾಲೋವಿಂಗ್ ಇದೆ. ಅಲ್ಲದೆ ನಾಲ್ಕು ವರ್ಷಗಳಿಂದ ಕಾದು ಕೂತಿದ್ದವರಿಗೆ ಮೊದಲ ಎಪಿಸೋಡ್‌ನಲ್ಲಿ ಅತಿ ಹೆಚ್ಚು ಬಾರಿ ರಮ್ಯಾ ಕನ್ನಡ ಮರೆತು ಇಂಗ್ಲಿಷ್‌ ಮಾತಾಡಿದ್ದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಎರಡನೇ ಅತಿಥಿ ಪ್ರಭುದೇವ ಮೇಲೆ ಎಲ್ಲರ ಕಣ್ಣಿದೆ.

More from Filmibeat

English summary
Ramya was heavily trolled after Weekend with Ramesh episode, also compare with Rashmika Mandanna. Weekend With Ramesh season 5 first episode aired on March 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X