For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್‌ನಿಂದ ನಾಗಾರ್ಜುನ ಔಟ್, ಸ್ಟಾರ್ ನಟನ ಹೆಗಲಿಗೆ ಜವಾಬ್ದಾರಿ?

  |

  ತೆಲುಗು ಬಿಗ್ ಬಾಸ್ ಐದನೇ ಆವೃತ್ತಿ ಆರಂಭಕ್ಕೆ ಎಲ್ಲಾ ತಯಾರಿ ನಡೆದಿದೆ. ಸದ್ಯದ ವರದಿ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್ ಶುರುವಾಗಲಿದೆ. ಇದುವರೆಗೂ ನಡೆದ ನಾಲ್ಕು ಆವೃತ್ತಿಯೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಐದನೇ ಸೀಸನ್ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಕೊಂಡಿದೆ.

  ಕೋವಿಡ್ ಭೀತಿಯಿದ್ದರೂ ಅದರ ಜೊತೆ ಜೊತೆಗೆ ರಿಯಾಲಿಟಿ ಶೋ ಆಯೋಜಿಸಲು ಸಿದ್ದತೆ ನಡೆಯುತ್ತಿದೆ. ಈ ಕ್ಷಣದವರೆಗೂ ಅಕ್ಕಿನೇನಿ ನಾಗಾರ್ಜುನ ಅವರೇ ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ನಾಗಾರ್ಜುನ ಈ ಕಾರ್ಯಕ್ರಮದಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ನಾಗಾರ್ಜುನ ಬದಲಿಗೆ ತೆಲುಗಿನ ಸ್ಟಾರ್ ನಟನನ್ನು ಬಿಗ್ ಬಾಸ್ ವೇದಿಕೆಗೆ ಕರೆತರುವ ಪ್ರಯತ್ನ ಸದ್ದಿಲ್ಲದೇ ಸಾಗಿದ್ದು, ಶೀಘ್ರದಲ್ಲಿ ಪ್ರೇಕ್ಷಕರಿಗೆ ಸರ್ಪ್ರೈಸ್ ಸಿಗಲಿದೆ. ನಾಗಾರ್ಜುನ ಇಲ್ಲವಾದರೇ ಬಿಗ್ ಬಾಸ್ ವೇದಿಕೆಯ ಸಾರಥ್ಯ ವಹಿಸಲಿರುವ ನಟ ಯಾರು? ಮುಂದೆ ಓದಿ....

  ಎನ್‌ಟಿಆರ್ ಜೊತೆ ಆರಂಭ

  ಎನ್‌ಟಿಆರ್ ಜೊತೆ ಆರಂಭ

  ಬಿಗ್ ಬಾಸ್ ತೆಲುಗು ಮೊದಲ ಆವೃತ್ತಿಯನ್ನು ಜೂನಿಯರ್ ಎನ್‌ಟಿಆರ್ ನಡೆಸಿಕೊಟ್ಟರು. ಒಂದೇ ಸೀಸನ್‌ಗೆ ಹಿಂದೆ ಸರಿದ ಎನ್‌ಟಿಆರ್ ಜಾಗಕ್ಕೆ ಎರಡನೇ ಆವೃತ್ತಿಯಲ್ಲಿ ನಟ ನಾನಿ ಬಂದರು. ನ್ಯಾಚುರಲ್ ಸ್ಟಾರ್ ನಾನಿ ಸಹ ಒಂದೇ ಆವೃತ್ತಿಗೆ ನಿಲ್ಲಿಸಿದರು. ಬಳಿಕ ಬಿಗ್ ಬಾಸ್ ಸಾರಥ್ಯ ವಹಿಸಿದ ನಾಗಾರ್ಜುನ ಮೂರನೇ ಮತ್ತು ನಾಲ್ಕನೇ ಸೀಸನ್ ನಿರೂಪಣೆ ಮಾಡಿದರು. ಈಗ ಐದನೇ ಆವೃತ್ತಿಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

  ಮತ್ತೆ ಪ್ರಾರಂಭವಾಗುತ್ತಿದೆ ತೆಲುಗು ಬಿಗ್‌ಬಾಸ್‌: ನಿರೂಪಕ ಯಾರು?ಮತ್ತೆ ಪ್ರಾರಂಭವಾಗುತ್ತಿದೆ ತೆಲುಗು ಬಿಗ್‌ಬಾಸ್‌: ನಿರೂಪಕ ಯಾರು?

  ಸಮಂತಾ ಬಿಗ್ ಬಾಸ್ ನಿರೂಪಿಸಿದ್ದರು

  ಸಮಂತಾ ಬಿಗ್ ಬಾಸ್ ನಿರೂಪಿಸಿದ್ದರು

  ಕಳೆದ ಆವೃತ್ತಿಯಲ್ಲಿ ನಾಗಾರ್ಜುನರ ಅಲಭ್ಯತೆ ಹಿನ್ನೆಲೆ ವಾರಾಂತ್ಯದಲ್ಲಿ ನಟಿ ಸಮಂತಾ ಬಿಗ್ ಬಾಸ್ ಹೋಸ್ಟ್ ಮಾಡಿದ್ದು ವಿಶೇಷವಾಗಿತ್ತು. ಶೂಟಿಂಗ್ ಕಾರಣಕ್ಕಾಗಿ ನಾಗಾರ್ಜುನ ಒಂದು ವಾರ ಬಿಗ್ ಬಾಸ್‌ಗೆ ಬ್ರೇಕ್ ಹಾಕಿದ್ದರು. ಆ ವಾರ ಅಕ್ಕಿನೇನಿ ಸೊಸೆ ಸಮಂತಾ ಶೋ ನಿರೂಪಣೆ ಮಾಡಿ ಸರ್ಪ್ರೈಸ್ ಕೊಟ್ಟಿದ್ದರು.

  ರಾಣಾ ಹೆಗಲಿಗೆ ಹೊಸ ಜವಾಬ್ದಾರಿ

  ರಾಣಾ ಹೆಗಲಿಗೆ ಹೊಸ ಜವಾಬ್ದಾರಿ

  ಇದೀಗ, ಬಿಗ್ ಬಾಸ್ ಐದನೇ ಆವೃತ್ತಿಯಲ್ಲಿ ನಾಗಾರ್ಜುನ ಬದಲಿಗೆ ರಾಣಾ ದಗ್ಗುಬಾಟಿ ನಿರೂಪಣೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯಕ್ಕೆ ಈ ಸುದ್ದಿ ಅಧಿಕೃತವಾಗಿಲ್ಲ. ಆದರೆ, ನಾಗ್‌ಗೆ ಪರ್ಯಾಯವಾಗಿ ರಾಣಾ ಅವರನ್ನು ಕರೆತರಲು ಮಾತುಕತೆ ಸಹ ಆಗಿದೆಯಂತೆ.

  ಬಿಗ್‌ಬಾಸ್‌ ನಿರೂಪಣೆಗೆ ಯುವನಟನ ಹೆಸರು, 'ನಾನೇ ಮಾಡ್ತೀನಿ' ಎಂದ ಕಮಲ್ಬಿಗ್‌ಬಾಸ್‌ ನಿರೂಪಣೆಗೆ ಯುವನಟನ ಹೆಸರು, 'ನಾನೇ ಮಾಡ್ತೀನಿ' ಎಂದ ಕಮಲ್

  ನಂ 1 ಯಾರಿ ನಿರೂಪಕ ರಾಣಾ

  ನಂ 1 ಯಾರಿ ನಿರೂಪಕ ರಾಣಾ

  'ಬಾಹುಬಲಿ' ಸಿನಿಮಾದ ಮೂಲಕ ರಾಷ್ಟ್ರ ಮಟ್ಟದ ಖ್ಯಾತಿ ಗಳಿಸಿಕೊಂಡ ನಟ ರಾಣಾ ದಗ್ಗುಬಾಟಿ ಅದಾಗಲೇ ಕಿರುತೆರೆಯಲ್ಲಿ 'ನಂ 1 ಯಾರೀ' ಎಂಬ ಶೋ ನಡೆಸಿಕೊಟ್ಟಿದ್ದಾರೆ. ಇದೇ ಅನುಭವದೊಂದಿಗೆ ಬಿಗ್ ಬಾಸ್ ಹೋಸ್ಟ್ ಮಾಡಲು ನಿರ್ಧರಿಸಿದ್ದಾರೆ ಎಂಬ ವಿಚಾರ ಟಾಲಿವುಡ್‌ನಲ್ಲಿ ಕುತೂಹಲ ಮೂಡಿಸಿದೆ.

  English summary
  Bigg Boss Telugu 5: Nagarjuna will not host the new session. Another tollywood star Rana daggubati will take responsibility.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X