ಕೋಟ್ಯಧಿಪತಿಯಲ್ಲಿ 'ಲಕ್ಷ' ಗೆದ್ದ ಸ್ವಾಭಿಮಾನಿ ವಿಕಲಚೇತನ ರಂಗನಾಥ್
ಎರಡು ಕೈ, ಎರಡು ಕಾಲು, ಕಣ್ಣು....ದೇಹದ ಎಲ್ಲ ಅಂಗಾಂಗಳು ಸರಿಯಾಗಿದ್ದರೂ ಸನ್ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವಲ್ಲಿ ಹಿಂದೆ ಬಿದ್ದಿರುವ ಜನರು ಸಮಾಜದಲ್ಲಿದ್ದಾರೆ. ಆದರೆ, ಎರಡು ಕಾಲಿಲ್ಲದೇ ರಂಗನಾಥ್ ಎಂಬ ಯುವಕ ಎಲ್ಲರಿಗೂ ಮಾದರಿಯಾಗಿ ಜೀವಿಸುತ್ತಿದ್ದಾರೆ. ಬಾಲ್ಯದಿಂದಲೂ ಬರಿ ಅವಮಾನಗಳನ್ನೇ ಎದುರಿಸುತ್ತಾ ಬೆಳೆದಿರುವ ರಂಗನಾಥ್ ಸ್ವಾಭಿಮಾನಕ್ಕಾಗಿ ಗೆಲ್ಲಬೇಕು ಎಂದು ನಿರ್ಧರಿಸಿ ಕನ್ನಡದ ಕೋಟ್ಯಧಿಪತಿ ಶೋಗೆ ಬಂದಿದ್ದರು.
ಶಾಲಾ ಮಕ್ಕಳಿಗೆ ಟೂಷನ್ ಹೇಳಿಕೊಡುತ್ತಾ ಬದುಕು ಕಟ್ಟಿಕೊಂಡಿರುವ ರಂಗನಾಥ್ ಅವರಿಗೆ ಕೆಎಎಸ್ ಅಧಿಕಾರಿಯಾಗಬೇಕು ಎಂಬ ಆಸೆ. ತನ್ನ ಕುಟುಂಬಸ್ಥರು, ಸ್ನೇಹಿತರು, ಕೀಳಾಗಿ ನೋಡಿದ ಜನರ ಮುಂದೆ ಚೆನ್ನಾಗಿ ಬದುಕುಬೇಕೆಂಬ ಛಲದಿಂದ ಕೋಟ್ಯಧಿಪತಿ ಆಟ ಆಡಿದರು.
ಕೋಟ್ಯಧಿಪತಿ ಆಟ ನಿರಾಸೆ ಮಾಡಿಲ್ಲ. ದೊಡ್ಡ ಮಟ್ಟದ ಹಣ ಗೆಲ್ಲುವ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದರು. ಮೊದಲ ಪ್ರಶ್ನೆಯಲ್ಲೆ ಲೈಫ್ ಲೈನ್ ಬಳಸಿದ ರಂಗನಾಥ್ ಆಶ್ಚರ್ಯವೆಂಬಂತೆ ಗೆದ್ದಿದ್ದು ವಿಶೇಷ. ರಂಗನಾಥ್ ಅವರ ಆಟ ಹೇಗಿತ್ತು? ಮುಂದೆ ಓದಿ....

ಮೊದಲ ಪ್ರಶ್ನೆಯಲ್ಲೇ ಲೈಫ್ ಲೈನ್
ಒಂದು ಕೋಟಿ ಗೆಲ್ಲಬೇಕು ಎಂಬ ಛಲದಿಂದ ಆಟ ಆರಂಭಿಸಿದ ರಂಗನಾಥ್ ಮೊದಲ ಪ್ರಶ್ನೆಯಲ್ಲೇ ಲೈಫ್ ಲೈನ್ ಬಳಸಿದರು.
ಪ್ರಶ್ನೆ: ಇವುಗಳಲ್ಲಿ ಗಾಥೆ ಎಂಬ ಅರ್ಥ ಕೊಡುವ ಇನ್ನೊಂದು ಅರ್ಥ ಯಾವುದು?
A ಗಾತ್ರ
B ಗಾಡಿ
C ಕಥೆ
D ಕಡಲು
ಆಡಿಯೆನ್ಸ್ ಪೋಲ್ ಲೈಫ್ ಲೈನ್ ಬಳಸಿದ ರಂಗನಾಥ್ ಅವರ ಉತ್ತರದ ಮೇಲೆ ಆಟ ಮುಂದುವರಿಸಿದರು. ಸರಿಯಾದ ಉತ್ತರ: C ಕಥೆ

3.20 ಲಕ್ಷ ಹಣ ಗೆದ್ದ ರಂಗನಾಥ್
ಮೊದಲ ಪ್ರಶ್ನೆಗೆ ಲೈಫ್ ಲೈನ್ ಬಳಸಿದ್ದ ರಂಗನಾಥ್ ಹತ್ತು ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು 3.20 ಲಕ್ಷ ಹಣ ಗೆದ್ದರು. ಅಲ್ಲಿಗೆ ಮೂರು ಲೈಫ್ ಲೈನ್ ಬಳಸಿಕೊಂಡಿದ್ದರು. ಹೀಗಾಗಿ, ಯಾವುದೇ ಲೈಫ್ ಲೈನ್ ಇರಲಿಲ್ಲ. ಎರಡು ಸೇಫ್ ಝೋನ್ ದಾಟಿದ ಮೇಲೆ ಇನ್ನೊಂದು ಡಬಲ್ ಡಿಪ್ ಲೈಫ್ ಲೈನ್ ಸಿಗುತ್ತೆ. ಇದನ್ನ ಬಳಸಿದ್ರೆ ಆಟವನ್ನ ಕ್ವಿಟ್ ಮಾಡುವಂತಿಲ್ಲ. ಈಗಾಗಲೇ 3.20 ಲಕ್ಷ ಗೆದ್ದಿದ್ದ ರಂಗನಾಥ್ ಹನ್ನೊಂದನೇ ಪ್ರಶ್ನೆ ಎದುರಿಸಿದರು.

6.40 ಲಕ್ಷದ ಪ್ರಶ್ನೆ ಯಾವುದು?
ಕನ್ನಡದ ಯಾವ ಕೃತಿಯಲ್ಲಿ ಮೊಟ್ಟಮೊದಲನೇಯದಾಗಿ ಇಡ್ಲಿಯ ಪ್ರಸ್ತಾಪ ಬರುತ್ತೆ?
A ಮೋಹನತರಂಗಿಣಿ
B ಕುಮಾರವ್ಯಾಸ ಭಾರತ
C ವಡ್ಡಾರಾಧನೆ
D ಹರಿಶ್ಚಂದ್ರ ಕಾವ್ಯ

ರಂಗನಾಥ್ ಗೆ ಕೈಕೊಟ್ಟ ಅದೃಷ್ಟ
'ಡಬಲ್ ಡಿಪ್' ಲೈಫ್ ಲೈನ್ ಬಳಸಿದ ರಂಗನಾಥ್ ಗೆ ಅದೃಷ್ಟ ಕೈಹಿಡಿಯಲಿಲ್ಲ. ಎರಡು ತಪ್ಪು ಉತ್ತರ ತೆಗೆದರು. ಸರಿಯಾದ ಉತ್ತರ ಕೊಡುವಲ್ಲಿ ರಂಗನಾಥ್ ಹಿನ್ನಡೆ ಅನುಭವಿಸಿದರು. ರಂಗನಾಥ್ A ಮೋಹನತರಂಗಿಣಿ ಎಂದರು. ಸರಿಯಾದ ಉತ್ತರ: C ವಡ್ಡಾರಾಧನೆ ಆಗಿತ್ತು. ಅಲ್ಲಿಗೆ 3.20 ಲಕ್ಷ ತನ್ನ ಖಾತೆಯಲ್ಲಿ ಉಳಿಸಿಕೊಂಡಿದ್ದರು.


Click it and Unblock the Notifications











