For Quick Alerts
  ALLOW NOTIFICATIONS  
  For Daily Alerts

  ಸೀರಿಯಲ್ ಮತ್ತು ಸಿನಿಮಾ: 'ಪುಟ್ಟಗೌರಿ' ರಂಜನಿಗೆ ಪುರುಸೊತ್ತೇ ಇಲ್ಲ.!

  |

  'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕರುನಾಡ ಮನೆ ಮನಗಳಿಗೆ ಪರಿಚಯವಾದ ಪ್ರತಿಭೆ ರಂಜನಿ ರಾಘವನ್. 'ಪುಟ್ಟಗೌರಿ' ಆಗಿದ್ದಾಗಲೇ 'ರಾಜಹಂಸ', 'ಟಕ್ಕರ್' ಚಿತ್ರಗಳಲ್ಲಿ ಅಭಿನಯಿಸಿ ಮೂಲಕ ಬೆಳ್ಳಿತೆರೆಗೂ ರಂಜನಿ ರಾಘವನ್ ಪದಾರ್ಪಣೆ ಮಾಡಿದ್ದರು.

  ಕಿರುತೆರೆ ಮತ್ತು ಬೆಳ್ಳಿತೆರೆ.. ಎರಡರಲ್ಲೂ ಗುರುತಿಸಿಕೊಂಡಿರುವ ಈ ಚೆಲುವೆ ಸದ್ಯ ಸಿನಿಮಾ ಮತ್ತು ಸೀರಿಯಲ್ ಅಂತ ಫುಲ್ ಬಿಜಿಯಾಗಿದ್ದಾರೆ. ಎಷ್ಟರಮಟ್ಟಿಗೆ ಅಂದ್ರೆ ರಂಜನಿ ರಾಘವನ್ ಗೆ ಕಿಂಚಿತ್ತು ಪುರುಸೊತ್ತಿಲ್ಲ.

  ಸೀರಿಯಲ್ ಶೂಟಿಂಗ್

  ಸೀರಿಯಲ್ ಶೂಟಿಂಗ್

  ರಂಜನಿ ರಾಘವನ್ ಮುಖ್ಯ ಭೂಮಿಕೆಯಲ್ಲಿರುವ 'ಕನ್ನಡತಿ' ಸೀರಿಯಲ್ ಇನ್ನೇನು ಶುರುವಾಗಲಿದೆ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಪಾರ್ಟ್ ಟೈಮ್ ಕನ್ನಡ ಲೆಕ್ಚರರ್ ಭುವನೇಶ್ವರಿ ಆಗಿ ರಂಜನಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  'ಕನ್ನಡತಿ' ಭುವನೇಶ್ವರಿ ಆಗಿ ಮತ್ತೆ ನಿಮ್ಮ ಮನೆಗೆ ಬರ್ತಿದ್ದಾರೆ ರಂಜನಿ ರಾಘವನ್.!'ಕನ್ನಡತಿ' ಭುವನೇಶ್ವರಿ ಆಗಿ ಮತ್ತೆ ನಿಮ್ಮ ಮನೆಗೆ ಬರ್ತಿದ್ದಾರೆ ರಂಜನಿ ರಾಘವನ್.!

  ಸಿನಿಮಾ ಶೂಟಿಂಗ್

  ಸಿನಿಮಾ ಶೂಟಿಂಗ್

  ಒಂದ್ಕಡೆ, ಈ 'ಕನ್ನಡತಿ' ಶೂಟಿಂಗ್ ನಡೆಯುತ್ತಿದ್ದರೆ, ಇನ್ನೊಂದು ಕಡೆ 'ಸತ್ಯಂ' ಎಂಬ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಚಿತ್ರ 'ಸತ್ಯಂ'.

  ಟಾಲಿವುಡ್ ಗೆ ಎಂಟ್ರಿ ಕೊಟ್ಟ 'ಪುಟ್ಟಗೌರಿ' ಖ್ಯಾತಿಯ ನಟಿ ರಂಜಿನಿಟಾಲಿವುಡ್ ಗೆ ಎಂಟ್ರಿ ಕೊಟ್ಟ 'ಪುಟ್ಟಗೌರಿ' ಖ್ಯಾತಿಯ ನಟಿ ರಂಜಿನಿ

  ಹೆಬ್ರಿಯಲ್ಲಿ ರಂಜನಿ

  ಹೆಬ್ರಿಯಲ್ಲಿ ರಂಜನಿ

  ರವಿ ಬಸ್ರೂರು ಸಂಗೀತ ನೀಡುತ್ತಿರುವ ಅಶೋಕ್.ಕೆ.ಕಡಬ ನಿರ್ದೇಶನ ಮಾಡುತ್ತಿರುವ 'ಸತ್ಯಂ' ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಹೆಬ್ರಿಯ ದೇವಾಲಯದಲ್ಲಿ ನಡೆಯಿತು. ನಾಯಕ ಸಂತೋಷ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಜೊತೆಗೆ ರಂಜನಿ ದೇವಸ್ಥಾನದಲ್ಲಿ ನಡೆದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಭೂತ ಕೋಲ ಕಂಡು ರಂಜನಿ ರಾಘವನ್ ಖುಷಿ ಪಟ್ಟಿದ್ದಾರೆ.

  ಖುಷಿ ಪಟ್ಟ ರಂಜನಿ

  ಖುಷಿ ಪಟ್ಟ ರಂಜನಿ

  ''ದೇವಸ್ಥಾನಗಳಿಗೆ ಭೇಟಿ ಕೊಡುವುದೆಂದರೆ ನನಗೆ ಇಷ್ಟ. ಈ ಬಾರಿ ಭೂತ ಕೋಲ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ತು. ಖುಷಿ ಆಯ್ತು'' ಅಂತಾರೆ ನಟಿ ರಂಜನಿ ರಾಘವನ್. ಒಟ್ನಲ್ಲಿ, ಸಿನಿಮಾ ಮತ್ತು ಸೀರಿಯಲ್ ಎರಡನ್ನೂ ಒಪ್ಪಿಕೊಂಡಿರುವುದರಿಂದ ರಂಜನಿ ರಾಘವನ್ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ.

  English summary
  Ranjani Raghavan is busy shooting for her TV and Movie commitments.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X