ನಟಿಯಾಗಿ ಸಾಹಿತಿಯಾದವಳು ಈಗ ನಿರ್ದೇಶಕಿ ಆಗಿಯೇ ಬಿಟ್ಟಳು ಪುಟ್ಟಗೌರಿ!

By ಪ್ರಿಯಾ ದೊರೆ

'ಪುಟ್ಟ ಗೌರಿ' ಧಾರಾವಾಹಿಯನ್ನಾಗಲಿ ಅದರಲ್ಲಿ ನಟಿಸಿದವರನ್ನಾಗಲಿ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಪುಟ್ಟ ಗೌರಿಯನ್ನು ಖಂಡಿತವಾಗಿಯೂ ಮರೆಯಲಾಗುವುದಿಲ್ಲ. ಪುಟ್ಟಗೌರಿಯಾಗಿ ಮೊದಲು ನಟಿ ಸಾನ್ಯಾ ಅಯ್ಯರ್ ನಟಿಸಿದ್ದರು. ಪ್ರೌಢಾವಸ್ಥೆಗೆ ಬಂದ ಬಳಿಕ ಆ ಪಾತ್ರಕ್ಕೆ ಜೀವ ತುಂಬಿದವಳೇ ನಟಿ ರಂಜನಿ ರಾಘವನ್.

ತದ ನಂತರ 'ಕನ್ನಡತಿ'ಯಾಗಿ ಎಲ್ಲರ ಮನ ಗೆದ್ದ ನಟಿ ರಂಜನಿ ಅವರು ಇಷ್ಟೇ ಸಾಲದು ಇನ್ನೂ ಏನಾದರು ಮಾಡಬೇಕು ಎಂದು ಸಾಹಿತಿಯಾಗಿ ಎರಡು ಪುಸ್ತಕಗಳನ್ನು ಅಭಿಮಾನಿಗಳ ಕೈಗಿತ್ತರು.

Ranjani Raghavan is set to give an update on his directorial debut

ಕಥೆ ಹೇಳಲು ಬಂದ ನಟಿ

ಇದೂ ಕೂಡ ಸಾಲದು ಎಂದು ಭಾವಿಸಿದ ನಟಿ ರಂಜನಿ ರಾಘವನ್ ಈಗ ಆಕ್ಷನ್ ಹೇಳಿದ್ದಾರೆ. ಹೌದು, ನಟಿ ರಂಜನಿ ರಾಘವನ್ ಅವರು ಈಗ ನಿರ್ದೇಶಕಯಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾ ಶೂಟಿಂಗ್ ನಡೆದು ರಿಲೀಸ್ ಆಗುವುದೊಂದೇ ಬಾಕಿ ಇದೆ. ನಟಿ ಹಾಗೂ ಸಾಹಿತಿಗಾರ್ತಿ ಆಗಿರುವ ನಟಿ ರಂಜನಿ ಅವರು ಈ ವರ್ಷ ನಿರ್ದೇಶನ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಮೊದಲು ಪಾತ್ರದ ಮೂಲಕ ಕಥೆ ಹೇಳಿ, ನಂತರ ಪುಸ್ತಕದ ಮೂಲಕ ಎಲ್ಲರೂ ಕಥೆ ಓದುವಂತೆ ಮಾಡಿದರು. ಈಗ ನಿರ್ದೇಶನದ ಮೂಲಕ ಕಥೆಯೊಂದನ್ನು ತೋರಿಸಲು ಮುಂದಾಗಿದ್ದಾರೆ.

ಹೊಸ ವರುಷ ಹೊಸ ಕೆಲಸ

ಕಿರುತೆರೆಯಲ್ಲಿ ಇಲ್ಲದೇ ಹೋದರೂ ಕೂಡ ನಟಿ ರಂಜಿನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಯೊಂದು ವಿಚಾರಗಳ ಬಗ್ಗೆಯೂ ಅಪ್ ಡೇಟ್ ಕೊಡುತ್ತಲೇ ಇದ್ದಾರೆ. ಪುಟ್ಟ ಗೌರಿಯಾಗಿದ್ದವಳು ಬೆಳೆದು ಕನ್ನಡತಿಯಾಗಿ ಸಾಹಿತಿಗಾರ್ತಿಯಾಗಿ ಈಗ ನಿರ್ದೇಶಕಿಯಾಗಿದ್ದು, ತಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯನ್ನು ಅಭಿಮಾನಿಗಳ ಮುಂದೆ ತೆರೆದ ಪುಸ್ತಕದಂತೆ ಆಗಾಗ ಹಾಳೆಯನ್ನು ತಿರುವಾಕುತ್ತಲೇ ಇರುತ್ತಾರೆ. ನಟಿ ರಂಜನಿ ರಾಘವನ್ ಅವರು ಕೂಡ ಹೊಸ ವರ್ಷದ ದಿನ ಹೊಸ ವಿಚಾರವನ್ನು ಹಂಚಿಕೊಂಡಿದ್ದರು. ಎರಡು ವರ್ಷಗಳ ಹಿಂದೆಯೇ ಕಥೆ ಹುಟ್ಟಿತ್ತು. ಅದನ್ನು ಈಗ ನಿರ್ದೇಶನದ ಮೂಲಕ ಎಲ್ಲರಿಗೂ ಹೇಳಲು ಬಯಸಿದ್ದೇನೆ ಎಂದಿದ್ದರು.

ಕನಸಿನ ಕಥೆಗೆ ಒಂದೂವರೆ ವರ್ಷ

ಒಂದು ಕಥೆ, ಒಂದು ಕನಸು, ಒಂದೂವರೆ ವರ್ಷ, ನೂರಾರು ಅನುಭವಗಳು.. ನಿರ್ದೇಶಕಿಯಾಗಿ ನಮ್ಮ ಮೊದಲ ಸಿನಿಮಾ ಅಪ್ ಡೇಟ್ಸ್ ನಿಮ್ಮೊಂದಿಗೆ ಹಂಚಿಕೊಳ್ಳೋದಕ್ಕೆ ಸಖತ್ ಎಕ್ಸೈಟೆಡ್ ಆಗಿದ್ದೇನೆ. ನಾಳೆ ಲೈವ್ ಬರ್ತೇನೆ, ನೇರವಾಗಿ ಮಾತನಾಡೋಣ ಎಂದು ಕೆಂಪು ಹೃದಯದ ಎಮೋಜಿಯನ್ನು ಹಾಕಿ ಕೆಳಗೆ ಡು ಯೂ ವಾನ ನೊ ಮೋರ್ ? ಎಂದು ಕೇಳಿದ್ದಾರೆ. ಈ ಪೋಸ್ಟ್‌ನಲ್ಲಿ ಎರಡು ಫೋಟೋ ಹಾಗೂ ಒಂದು ವೀಡಿಯೋ ಹಂಚಿಕೊಂಡಿದ್ದು, ರಂಜನಿ ಅವರು ಆಕ್ಷನ್ ಹೇಳಿರುವ ವೀಡಿಯೋ ಇದಾಗಿದೆ.

ಸಿನಿಮಾ ಅಪ್ ಡೇಟ್ಸ್

ಇನ್ನು ಈ ಸಿನಿಮಾ ಬಗ್ಗೆ ನಟಿ ಹೆಚ್ಚಿನ ಮಾಹಿತಿಯನ್ನು ನೀಡದಿದ್ದರೂ ಕೂಡ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರು ರಂಜನಿ ಅವರ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಖ್ಯಾತ ಸಂಗೀತ ಸಂಯೋಜಕರಾದ ಇಳಯರಾಜ ಅವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ ಎಂಬ ವಿಚಾರವನ್ನು ಮಾತ್ರ ನಟಿ ರಂಜನಿ ಅವರು ತಿಳಿಸಿದ್ದಾರೆ. ಇನ್ನು ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ ಈ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದೇನೆ ಎಂದು ಈ ಹಿಂದೆ ತಿಳಿಸಿದ್ದರು. ಹೊಸ ಕೆಲಸಕ್ಕೆ ಕೈ ಹಾಕಿರುವ ನಟಿ ರಂಜನಿ ಅವರು ಈಗ ತಮ್ಮ ಸಿನಿಮಾ ಬಗ್ಗೆ ಅಪ್ ಡೇಟ್ಸ್ ಕೊಡಲು ಲೈವ್ ಬರಲಿದ್ದಾರೆ.

More from Filmibeat

English summary
Ranjani Raghavan planned to directing her first film;
Read more about: serial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X