twitter
    For Quick Alerts
    ALLOW NOTIFICATIONS  
    For Daily Alerts

    Kannadati: 'ಕನ್ನಡತಿ' ಮುಗೀತು: ಶೀಘ್ರದಲ್ಲಿ ನಿಮ್ಮನ್ನು ರಂಜಿಸಲು ಬರುತ್ತೇನೆ ಎಂದ 'ಕನ್ನಡ ಟೀಚರ್'

    By ಅನಿತಾ ಬನಾರಿ
    |

    ಹೌದು! ರಂಜಿನಿ ರಾಘವನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ 'ಕನ್ನಡತಿ' ಧಾರಾವಾಹಿ ಮುಕ್ತಾಯಗೊಂಡಿದೆ. ಕನ್ನಡದ ಬಗ್ಗೆ ಒಲವು ತೋರಿಸಿಕೊಂಡು ಅತ್ಯುತ್ತಮವಾಗಿ ಪ್ರಸಾರವಾಗುತ್ತಿರುವ ಕನ್ನಡತಿ ಎಂಬ ಧಾರಾವಾಹಿಯಲ್ಲಿ ರಂಜಿನಿ ರಾಘವನ್ ನಾಯಕಿಯಾಗಿ ಹಾಗೂ ಹರ್ಷ ನಾಯಕನಾಗಿ ಪಾತ್ರ ನಿರ್ವಹಿಸುತ್ತಿದ್ದರು. ಇದ್ದಕ್ಕಿದ್ದಂತೆ ಸುಖಾಂತ್ಯ ಕಾಣುವ ಮೂಲಕ ಈ ಧಾರಾವಾಹಿ ಮುಕ್ತಾಯಗೊಂಡಿದ್ದರೂ ಧಾರವಾಹಿ ನಟರಷ್ಟೇ ಅಲ್ಲದೆ ಅಭಿಮಾನಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ನಟಿ ರಂಜಿನಿ ರಾಘವನ್ ಧಾರಾವಾಹಿಯಲ್ಲಿನ ತಮ್ಮ ಅನುಭವವನ್ನು ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮೆಗಾ ಸೀರಿಯಲ್ ಎಂದಾಕ್ಷಣ ಅಬ್ಬ ಎಷ್ಟು ದೊಡ್ಡದಿರುತ್ತೋ ಏನೋ!? ಎಂದು ಉದ್ಗಾರ ಮಾಡುವುದೇ ಹೆಚ್ಚು. ಆದರೆ 'ಕನ್ನಡತಿ' ಧಾರಾವಾಹಿಗೆ ಮೊದಲಿನಿಂದಲೂ ಅತ್ಯುತ್ತಮವಾಗಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ ಕನ್ನಡದ ಪ್ರೇಕ್ಷಕರು. ಇನ್ನು ಧಾರಾವಾಹಿ ಸದ್ಯದಲ್ಲೇ ಮುಗಿಯುತ್ತೆ ಎಂದು ಕೇಳಿದಾಗ ಹಲವಾರು ಜನರು ಅಯ್ಯೋ ಇಷ್ಟು ಬೇಗ ಮುಗಿಯುತ್ತಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಬಹಳ ಸಂತೋಷ ತಂದಿದೆ. ಈ ರೀತಿ ಗೌರವಯುತವಾಗಿ ಧಾರಾವಾಹಿಯನ್ನು ಮುಗಿಸುತ್ತಿರುವುದು ನಮಗೂ ನಮ್ಮ ತಂಡದವರಿಗೂ ಸಮಾಧಾನ ತಂದಿದೆ"ಎಂದು ಹೇಳಿದ್ದಾರೆ‌.

    Pavitra Naik: ಅರಸನ ಕೋಟೆಯ ಸೊಸೆಗೆ ಕಿರುತೆರೆಯೊಂದಿಗೆ ವಿಶೇಷ ನಂಟುPavitra Naik: ಅರಸನ ಕೋಟೆಯ ಸೊಸೆಗೆ ಕಿರುತೆರೆಯೊಂದಿಗೆ ವಿಶೇಷ ನಂಟು

     ಭುವಿ ಪಾತ್ರ ಬಹಳ ಇಷ್ಟ ಆಗಿತ್ತು

    ಭುವಿ ಪಾತ್ರ ಬಹಳ ಇಷ್ಟ ಆಗಿತ್ತು

    "ಕನ್ನಡತಿ ಧಾರಾವಾಹಿ ಶೀರ್ಷಿಕೆಯಲ್ಲಷ್ಟೇ ಅಲ್ಲದೆ ಕಥಾಹಂದರ, ನಟನೆ ಹಾಗೂ ಮುಖ್ಯ ಉದ್ದೇಶದಿಂದ ಬೇರೆಲ್ಲಾ ಧಾರಾವಾಹಿಗಳಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತದೆ. ಈ ಕಾರಣದಿಂದಲೇ ಇದಕ್ಕೆ ಇಷ್ಟೊಂದು ಜನಪ್ರಿಯತೆ ದೊರಕಿದ್ದು. ನನಗೆ ಕನ್ನಡದ ಟೀಚರ್ ಆಗಿ ಕೆಲಸ ಮಾಡುವಂತಹ ಒಂದು ಪಾತ್ರ ಸಿಕ್ಕಿದಾಗ ಬಹಳ ಖುಷಿಯಾಗಿತ್ತು. ವಿಭಿನ್ನ ಪಾತ್ರಕ್ಕೆ ಸೈ ಎಂದು ತಕ್ಷಣ ಒಪ್ಪಿಕೊಂಡೆ. ಧಾರಾವಾಹಿ ಆರಂಭದಿಂದ ಕೊನೆಯವರೆಗೂ ಭುವಿ ಪಾತ್ರವನ್ನು ನಿರ್ದೇಶಕರು ತಂದ ರೀತಿ ನನಗೆ ಬಹಳ ಇಷ್ಟವಾಯಿತು. ಎಲ್ಲೂ ಆ ಪಾತ್ರ ಅದರ ಮುಖ್ಯ ಉದ್ದೇಶದಿಂದ ಹೊರ ಬರಲಿಲ್ಲ. ಹಾಗಾಗಿ ಆ ಪಾತ್ರವನ್ನು ಮಾಡಿದ ನನಗೆ ಬಹಳ ಖುಷಿ ಇದೆ ಎಂದು ಹೇಳುತ್ತಾರೆ ರಂಜನಿ ರಾಘವನ್.

     'ಕನ್ನಡತಿ' ಧಾರಾವಾಹಿ ಜನಪ್ರಿಯತೆ ಕೊಟ್ಟಿದೆ

    'ಕನ್ನಡತಿ' ಧಾರಾವಾಹಿ ಜನಪ್ರಿಯತೆ ಕೊಟ್ಟಿದೆ

    ಇನ್ನು ಪ್ರತಿ ಸಂಚಿಕೆಯ ಕೊನೆಗೆ ಬರುತ್ತಿದ್ದ "ಸಿರಿಗನ್ನಡಂ ಗೆಲ್ಗೆ"ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದು ಕನ್ನಡ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳ ಸಹಾಯವಾಗಿದೆ ಎಂದು ನಂಬಿದ್ದೇನೆ. ಆ ಮಟ್ಟಿಗೆ ನಾನು ಸಂತೋಷಿ ಹಾಗೆಯೇ ಚಿರಋಣಿ. ಈ ಧಾರಾವಾಹಿ ಕನ್ನಡ ಭಾಷಾ ಪ್ರೇಮವನ್ನು ಎತ್ತಿ ಹಿಡಿದಿದೆ. ಇದರಿಂದ ಕನ್ನಡದ ಪ್ರೇಕ್ಷಕರಿಗೆ ಏನು ದೊರಕಿತೊ ಇಲ್ಲವೋ ನನಗೆ ಗೊತ್ತಿಲ್ಲ. ನನಗಂತೂ ಜೀವನದಲ್ಲಿ ಬಹಳಷ್ಟು ವಿಚಾರಗಳನ್ನು ಕಲಿಯಲು ಈ ಧಾರಾವಾಹಿ ಸಹಾಯ ಮಾಡಿದೆ. ಮೊದಲಿಂದಲೂ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಇರುವ ನನಗೆ 'ಕನ್ನಡತಿ' ಧಾರಾವಾಹಿ ಒಂದಷ್ಟು ಜನಪ್ರಿಯತೆಯ ಜೊತೆಗೆ ಆತ್ಮವಿಶ್ವಾಸವನ್ನು ಕೊಟ್ಟಿದೆ ಎಂಬುದು ರಂಜನಿ ರಾಘವನ್ ಅಭಿಪ್ರಾಯ.

     ಗೌರವಯುತವಾಗಿ ಧಾರಾವಾಹಿ ಮುಗಿದಿದೆ

    ಗೌರವಯುತವಾಗಿ ಧಾರಾವಾಹಿ ಮುಗಿದಿದೆ

    "ಈ ಧಾರಾವಾಹಿಯನ್ನು ನೋಡುವ ಪ್ರೇಕ್ಷಕರು ಬಹಳ ಪ್ರೌಢ ಮನಸ್ಥಿತಿಯವರು ಎಂದು ನಾನು ನಂಬಿದ್ದೇನೆ. ನನಗೆ ಒಂದು ಪುಸ್ತಕವನ್ನು ಬರೆಯಲು ಈ ಧಾರಾವಾಹಿ ಕೊಟ್ಟ ಆತ್ಮವಿಶ್ವಾಸ ಹಾಗೆಯೇ ಹುರುಪೆ ಕಾರಣ ಎಂದು ಹೇಳಲು ಇಚ್ಚಿಸುತ್ತೇನೆ. ಎಷ್ಟೋ ಧಾರಾವಾಹಿಗಳು ಮೊದಲು ಚೆನ್ನಾಗಿಯೇ ಶುರುವಾಗಿ ಕೊನೆಗೆ ಹೇಗೆ ಹೇಗೋ ಮುಗಿಯುತ್ತದೆ. ಅಂಥದ್ದರಲ್ಲಿ ಮೆಗಾ ಸೀರಿಯಲ್ ಆಗಿ ನಮ್ಮ ಧಾರಾವಾಹಿ ಮುಗಿಯುವಾಗ, ಇಷ್ಟು ಬೇಗ ಮುಗಿಸುವುದು ಬೇಡ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಪ್ರೇಕ್ಷಕರು ಅಭಿಮಾನಿಗಳು ಹೇಳಿದಾಗ ಒಂದು ರೀತಿ ಖುಷಿಯಾಗುತ್ತದೆ. ಇದು ಧಾರಾವಾಹಿಯ ಜನಪ್ರಿಯತೆಯನ್ನು ತೋರಿಸುತ್ತದೆ. ಅದೇ ರೀತಿ ಇಷ್ಟು ಗೌರವಯುತವಾಗಿ ಧಾರಾವಾಹಿಯನ್ನು ಮುಗಿಸುತ್ತಿರುವುದು ನಮ್ಮೆಲ್ಲರಿಗೂ ಬಹಳ ಸಮಾಧಾನ ಸಂತೋಷ ತಂದಿದೆ" ಎನ್ನುತ್ತಾರೆ ರಂಜನಿ.

     ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನೋಡಲು ಇಚ್ಚಿಸುತ್ತೇನೆ

    ಒಳ್ಳೊಳ್ಳೆ ಪ್ರಾಜೆಕ್ಟ್‌ಗಳಲ್ಲಿ ನೋಡಲು ಇಚ್ಚಿಸುತ್ತೇನೆ

    "ನನಗಂತೂ ಧಾರಾವಾಹಿಯನ್ನು ಇಷ್ಟು ಬೇಗ ಮುಳುಗಿಸುವುದೇ ಬೇಡ ಎಂಬ ಅಭಿಪ್ರಾಯದಲ್ಲಿ ಸಾವಿರಾರು ಮೆಸೇಜುಗಳು ಫೋನ್ ಕಾಲ್ ಗಳು ಬಂದಿದ್ದವು. ಧಾರಾವಾಹಿ ನೋಡುವವರಲ್ಲದೆ ಈ ಧಾರಾವಾಹಿಯನ್ನು ನೋಡದವರು ಕೂಡ ಇದನ್ನು ಇಷ್ಟಪಡುತ್ತಿರುವುದು ಇದರ ವಿಶೇಷ! ಇನ್ನು ಮುಂದೆ ಇಂಥದ್ದೇ ಒಳ್ಳೆಯ ಪ್ರಾಜೆಕ್ ಗಳಲ್ಲಿ ಒಳ್ಳೊಳ್ಳೆಯ ಸಾಹಿತ್ಯವಿರುವ ಸ್ಕ್ರಿಪ್ಟ್ ಇರುವ ಧಾರಾವಾಹಿ ಸಿನಿಮಾ ಅಥವಾ ಇನ್ಯಾವುದೇ ಪ್ರಕಾರಗಳಲ್ಲಿ ನಾನು ನನ್ನನ್ನು ನೋಡಲು ಇಚ್ಚಿಸುತ್ತೇನೆ ಎಲ್ಲಾ ಪ್ರೇಕ್ಷಕರ ಅಭಿಮಾನಿಗಳ ಹಾರೈಕೆ ಪ್ರೋತ್ಸಾಹ ಸದಾ ನನ್ನ ಮೇಲಿರುತ್ತದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ನಟಿ ರಂಜಿನಿ ರಾಘವನ್.

    English summary
    Ranjani Raghavan said that she is happy to appear on screen as a Kannada teacher, Know More.
    Monday, February 6, 2023, 7:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X