For Quick Alerts
  ALLOW NOTIFICATIONS  
  For Daily Alerts

  ಭಯಾನಕ ಅನುಭವ; ದುಡುಕಿ ಏನನ್ನೂ ಮಾಡ್ಬಾರ್ದು ಎಂದ ರಂಜನಿ ರಾಘವನ್

  |

  ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ ಹೋಗುವಾಗ ನಡೆದ ಭಯಾನಕ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದರು. ನಡೆದ ಘಟನೆಯನ್ನು ಅರ್ಧ ಮಾತ್ರ ವಿವರಿಸಿ ಅಭಿಮಾನಿಗಳಲ್ಲಿ ಮುಂದೇನಾಯ್ತು ಎನ್ನುವ ಕುತೂಹಲ ಕಾಯ್ದಿರಿಸಿದ್ರು. ಇದೀಗ ಪಾರ್ಟ್-2ನಲ್ಲಿ ಬಹಿರಂಗ ಪಡಿಸಿದ್ದಾರೆ.

  ದುಡುಕಿ ಏನನ್ನೂ ಮಾಡ್ಬಾರ್ದು ಅನ್ನೋದು ಗೊತ್ತಾಯ್ತು ಎಂದ ಕನ್ನಡತಿ ಖ್ಯಾತಿಯ ರಂಜನಿ | Filmibeat Kannada

  ಅಂದಹಾಗೆ ರಂಜನಿ ಸದ್ಯ ಕನ್ನಡತಿ ಧಾರಾವಾಹಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಕನ್ನಡದ ಬಹುತೇಕ ಧಾರಾವಾಹಿ ತಂಡ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಬೀಡುಬಿಟ್ಟಿದ್ದಾರೆ. ಕನ್ನಡತಿ ಧಾರಾವಾಹಿ ತಂಡ ಕೂಡ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದೆ. ರಾತ್ರಿ ಚಿತ್ರೀಕರಣ ಮುಗಿಸಿ ಹೋಟೆಲ್ ಗೆ ಹೊರಟ ರಂಜನಿ, ನಟ ಕಿರಣ್ ರಾಜ್ ಮತ್ತು ನಟಿ ಸಾರಾ ಅವರಿಗೆ ಆದ ಭಯಾನಕ ಅನುಭವವನ್ನು ರಂಜನಿ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. ಸುರಕ್ಷಿತವಾಗಿ ಮನೆಗೆ ತಲುಪಿದ್ರಾ? ಮುಂದೇನಾಯ್ತು?

  ಶೂಟಿಂಗ್ ಮುಗಿಸಿ ರಾತ್ರಿ ಹೊರಟಿದ್ದ ಕನ್ನಡತಿ ತಂಡ

  ಶೂಟಿಂಗ್ ಮುಗಿಸಿ ರಾತ್ರಿ ಹೊರಟಿದ್ದ ಕನ್ನಡತಿ ತಂಡ

  ರಂಜನಿ ಮತ್ತು ಧಾರಾವಾಹಿ ತಂಡ ಉಳಿದುಕೊಂಡಿದ್ದ ಹೋಟೆಲ್ ರೂಮ್ ತಲುಪಲು ಲಗೇಜ್ ಗಾಡಿಯಲ್ಲಿ ಹೊರಟಿದ್ದರು. ಪರಿಚಯವಿಲ್ಲದ ಊರಿನಲ್ಲಿ, ಪರಿಚಯವಿಲ್ಲದವರ ಗಾಡಿಯಲ್ಲಿ ಹೊರಟಿದ್ದರು. ಡ್ರೈವರ್ ಮಾಮೂಲಿ ದಾರಿ ಬಿಟ್ಟು ಬೇರೆ ದಾರಿಯಲ್ಲಿ ಹೊರಟಿದ್ದು ನೋಡಿ ರಂಜನಿ ರಾಘವನ್ ಭಯದಲ್ಲಿ ವಿಡಿಯೋ ಮಾಡಿದ್ದರು. ಕತ್ತಲು ಬೇರೆ ಡ್ರೈವರ್ ಎಲ್ಲಿಗೆ ಕರ್ಕೊಂಡು ಹೋಗ್ತಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದರು. ಇದೀಗ ಮುಂದೆ ಏನಾಯ್ತು ಅಂತ ಹೇಳಿದ್ದಾರೆ.

  ಶೂಟಿಂಗ್ ಮುಗಿಸಿ ವಾಪಸ್ ಬರುವಾಗ ಏನಾಯ್ತು? ನೈಜ ಘಟನೆ ಬಿಚ್ಚಿಟ್ಟ ರಂಜನಿಶೂಟಿಂಗ್ ಮುಗಿಸಿ ವಾಪಸ್ ಬರುವಾಗ ಏನಾಯ್ತು? ನೈಜ ಘಟನೆ ಬಿಚ್ಚಿಟ್ಟ ರಂಜನಿ

  ಮಧ್ಯ ಸಡನ್ ಆಗಿ ಗಾಡಿ ನಿಂತಿತ್ತು

  ಮಧ್ಯ ಸಡನ್ ಆಗಿ ಗಾಡಿ ನಿಂತಿತ್ತು

  ಕತ್ತಲೆಯಲ್ಲಿ ಸುಮಾರು ಹದಿನೈದು ನಿಮಿಷ ಎದೆಬಡಿತ ಕಿವಿಗೆ ಕೇಳೋವಷ್ಟು ಟೆನ್ಶನ್ ನಲ್ಲಿ ಹೋಗ್ತಿರುವಾಗ ಮಧ್ಯೆ ಒಂದು ಕಡೆ ಗಾಡಿ ಸಡನ್ ಆಗಿ ನಿಂತಿತು. ಬರ್ತೀನ್ ಸರ್ ಡ್ರೈವರ್ ಗೆ 200 ರುಪಾಯಿ ಕೊಟ್ಬಿಡಿ. ಆ ಗಾಡಿಗೆ ಸಂಬಂಧಪಟ್ಟ ಕನ್ನಡದೋನು, ಅದೇ..ಕುಡುಕ, ಹೇಳಿ ಹೊರಟುಹೋದ. ಏನು ಆಗಲ್ಲ ಅನ್ನಿಸಿದ್ದು ಎಷ್ಟು ಸತ್ಯಾನೋ, ಅಕಸ್ಮಾತ್ ಆದ್ರೆ ಏನ್ ಮಾಡೋಕೂ prepared ಇರ್ಲಿಲ್ಲ ಅನ್ನೋದೂ ಅಷ್ಟೇ ಸತ್ಯ.

  ಸೆಟ್ ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ

  ಸೆಟ್ ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ

  ಮತ್ತೆ ಇನ್ನೊಂದು ಹತ್ತು ನಿಮಿಷ ಅದೇ ದಾರೀಲಿ ಹೋಗ್ತಿರುವಾಗ ಸ್ಟ್ರೀಟ್ ಲೈಟ್ ಗಳು ಕಾಣಿಸಿ, ನನ್ನೊಳಗೂ ಲೈಟ್ ಆನ್ ಆಯ್ತು. Actually, ಆ ಲಗೇಜ್ ಆಟೋ ನಮ್ಮ ಸೆಟ್ ಗೆ ದಿನಾ ಪ್ರಾಪರ್ಟಿ ಸಾಗಿಸೋ ಗಾಡಿ ಆಗಿತ್ತಂತೆ, ಆ ಕನ್ನಡದೋನು ನಮ್ಮ ಸೆಟ್ ಹುಡುಗರಿಗೆ ಪರಿಚಯ, ನಾವಿಲ್ಲಿ ಶೂಟಿಂಗ್ ಮಾಡೋ ಅಷ್ಟು ದಿನ ಅವರಿಗೆ ನಮ್ಮವರ ಜೊತೆ ವ್ಯವಹಾರ ಇರುತ್ತೆ, ಹಾಗೆಲ್ಲ ನಮಗೆ ಏನೂ ತೊಂದ್ರೆ ಮಾಡೋಕಾಗಲ್ಲ ಅಂತ ಆಮೇಲೆ ಕಿರಣ್ ಹೇಳಿದ್ರು'

  ದುಡುಕಿ ಏನನ್ನೂ ಮಾಡ್ಬಾರ್ದು

  ದುಡುಕಿ ಏನನ್ನೂ ಮಾಡ್ಬಾರ್ದು

  'ಆದ್ರೂ ಆ ಒಂಟಿ ರೋಡ್ ನಲ್ಲಿ ಹಾಗೆ ಹೋಗಿದ್ದರ ಭಯ ಮಾತ್ರ ಕೇಳ್ಬೇಡಿ. ಒಟ್ನಲ್ಲಿ ನಾವು ನಮ್ಮ ಹೋಟೆಲ್ ಸುರಕ್ಷಿತವಾಗಿ ತಲುಪಿದ್ವಿ. Uff..! ದುಡುಕಿ ಏನನ್ನೂ ಮಾಡ್ಬಾರ್ದು, ರಿಸ್ಕ್ ತೊಗೊಂಡ್ರೂ calculated risk ತೊಗೋಬೇಕು ಅನ್ನೋದು ಈ ಕತೆಯ ನೀತಿ ಪಾಠ' ಎಂದು ರಂಜನಿ ರಾಘವನ್ ದೀರ್ಘವಾಗಿ ವಿವರಿಸಿದ್ದಾರೆ.

  English summary
  Actress Ranjani Raghavan shares horrible experience in Ramoji film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X