For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ಮುಗಿಸಿ ವಾಪಸ್ ಬರುವಾಗ ಏನಾಯ್ತು? ನೈಜ ಘಟನೆ ಬಿಚ್ಚಿಟ್ಟ ರಂಜನಿ

  |

  ಕಿರುತೆರೆಯ ಖ್ಯಾತ ನಟಿ ರಂಜನಿ ರಾಘವನ್ ಸದ್ಯ ಕನ್ನಡತಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಡುವೆಯೂ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ ಕನ್ನಡತಿ ಟೀಂ. ಅಂದಹಾಗೆ ಕರ್ನಾಟಕದಲ್ಲಿ ಚಿತ್ರೀಕರಣ ನಡೆಯುತ್ತಿದೆ ಅಂತ ಅಂದ್ಕೋಬೇಡಿ. ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕನ್ನಡ ಧಾರಾವಾಹಿ ತಂಡ ಬೀಡು ಬಿಟ್ಟಿದೆ.

  ಹೈದರಾಬಾದ್ ನ ಲಗೇಜ್ ಆಟೋ ಹತ್ತಿ ಪರದಾಡಿದ ಕನ್ನಡತಿ ಖ್ಯಾತಿಯ ರಂಜನಿ | Filmibeat Kanada

  ತಡರಾತ್ರಿ ಶೂಟಿಂಗ್ ಮುಗಿಸಿ ಹೊರಟ ರಂಜನಿ ಮತ್ತು ಕಿರಣ್ ರಾಜ್ ಅವರಿಗೆ ಆದ ಭಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಳಗಡೆ ಭಯದಿಂದ ಒದ್ದಾಡುತ್ತಿದ್ದೆ, ಮೇಲ್ನೋಟಕ್ಕೆ ನಗುತ್ತಿದ್ದೆ ಎಂದು ಎಂದಿದ್ದಾರೆ. ವಿಡಿಯೋ ಜೊತೆಗೆ ರಂಜನಿ ಇನ್ಸ್ಟಾಗ್ರಾಮ್ ನಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ...

  ಇದು ನೈಜ ಘಟನೆ ಆಧರಿತ ಥ್ರಿಲ್ಲರ್ ಕತೆ

  ಇದು ನೈಜ ಘಟನೆ ಆಧರಿತ ಥ್ರಿಲ್ಲರ್ ಕತೆ

  'ಇದು ನೈಜ ಘಟನೆ ಆಧರಿತ ಥ್ರಿಲ್ಲರ್ ಕತೆ. ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ, ನಮ್ಮ ಅನುಭವ. With video proof' ಎಂದು ಸಿನಿಮೀಯ ರೀತಿಯಲ್ಲಿ ತಮಗಾದ ಭಯದ ಅನುಭವವನ್ನು ವಿವರಿಸಿದ್ದಾರೆ.

  'ಜೊತೇಲಿದ್ದೋನಿಗೆ ನನ್ನ ಭಯ ಗೊತ್ತಾಗ್ದೇ ಇರ್ಲಿ ಅಂತ ಇಂಗ್ಲಿಷ್ ನಲ್ಲಿ ಮಾತಾಡಿರೋದು, ಬೈಕೋಬೇಡಿ' ಎಂದಿದ್ದಾರೆ.

  ಲಗೇಜ್ ಗಾಡಿಯಲ್ಲಿ ಹೊರಟ ರಂಜನಿ, ಕಿರಣ್, ಸಾರಾ

  ಲಗೇಜ್ ಗಾಡಿಯಲ್ಲಿ ಹೊರಟ ರಂಜನಿ, ಕಿರಣ್, ಸಾರಾ

  'ಇವತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಬೇಗ ಮುಗಿದಿತ್ತಾ. ನಮ್ ಟೀಮ್ ಅವರದ್ದೂ ಶೂಟ್ ಮುಗ್ದಿರ್ಲಿಲ್ಲ (ಅಂದ್ರೆ ನಮ್ ಸೀನ್ಸ್ ಮುಗ್ದಿತ್ತು pack up ಆಗಿರ್ಲಿಲ್ಲ) ಎಲ್ಲಾರೂ ಬರೋದಕ್ಕೆ ಇನ್ನೂ ಸಮಯ ಇತ್ತು, ಒಟ್ಟಿಗೆ ವಾಪಸ್ ಹೋಟೆಲ್ಗೆ ಹೋಗೋಕೆ ಕಾಯ್ತಾ ಹಾಗೇ ಏನೋ ಮಾತಾಡ್ತಾ ಕೂತಿದ್ದೆ. ಹೇ ಗಾಡಿ ಇದೆ ಬರ್ತೀರಾ? ಎಂದು ಕಿರಣ್ ರಾಜ್ ಕೇಳಿದ್ರು. ನೋಡಿದ್ರೆ ಒಂದು ಲಗೇಜ್ ಗಾಡಿ ನಿಂತಿತ್ತು, ಇದ್ರಲ್ಲಿ ಹೋಗೋಣ ಮಜಾ ಇರುತ್ತೆ ಅಂತ ನಾನು ಏನೂ ಯೋಚ್ನೆ ಮಾಡದೇ ಗಾಡಿ ಹತ್ತಿದೆ. ಸಾರಾ ಕೂಡ ಆಗಲೇ ಗಾಡಿ ಹತ್ತಿದ್ರು.

  ಮೂರು ಲಕ್ಷ ಚಿನ್ನ ಇದೆ ಎಂದ ಕಿರಣ್

  ಮೂರು ಲಕ್ಷ ಚಿನ್ನ ಇದೆ ಎಂದ ಕಿರಣ್

  'ಬೇಗ ರೂಮ್ ತಲುಪುತ್ತೇವೆ, ಸುತ್ತ ಮುತ್ತ ಜಾಗನ ಓಪನ್ ಗಾಡೀಲಿ ಎಕ್ಸ್ಪ್ಲೋರ್ ಮಾಡ್ಬೋದು ಅಂತ ಜೋಶ್ ಅಲ್ಲಿ ಹೊರಟ್ವಿ. ಗಾಡಿ ಗಡ ಗಡ ಅಂತ ಶಬ್ದ ಮಾಡ್ತಾ ಸೆಟ್ ಇಂದ ಒಂದ್ ಎರ್ಡ್ ಕಿ.ಮೀ ದೂರ ಬಂತು. ಏನ್ ಗೊತ್ತಾ? ಇವ್ರ್ ಎಲ್ಲಿಗ್ ಕರ್ಕೊಂಡ್ ಹೋಗ್ತಿದ್ದಾರೆ? ನನ್ ಮೈಮೇಲೇ ಮಿನಿಮಮ್ ಮೂರು ಲಕ್ಷ ಚಿನ್ನ ಇದೆ ಕಿರಣ್ ಗುಟ್ಟಾಗಿ ಹೇಳಿದ್ ತಕ್ಷಣ ನನ್ ಎದೆ ಧಸಕ್ ಅನ್ತು.

  ಬೇರೆ ದಾರಿಯಲ್ಲಿ ಹೊರಟ ಡ್ರೈವರ್

  ಬೇರೆ ದಾರಿಯಲ್ಲಿ ಹೊರಟ ಡ್ರೈವರ್

  'ನೋಡಿದ್ರೆ ಗಾಡಿ ಎಲ್ಲೋ ಆಫ್ ರೋಡ್ ಹೋಗ್ತಿದೆ. ಗಾಡಿಯಲ್ಲಿ ಒಬ್ಬ ಕನ್ನಡ ಮಾತಾಡೋನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ ನೋಡಿದ್ರೆ ಸ್ವಲ್ಪ ಹೊತ್ತಿನ್ ಮೇಲೆ ಗೊತ್ತಾಯ್ತು ಅವನು ಕುಡಿದಿದ್ದ ಅಂತ. ರಾಮೋಜಿ ಫಿಲ್ಮ್ ಸಿಟಿಯ ಮಾಮೂಲಿ ರೋಡ್ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕರ್ಕೊಂಡ್ ಹೋಗ್ತಿದ್ದಾರೆ? ಮುಂದೆ ಕೂತಿರೋ ಡ್ರೈವರ್ ಗೊತ್ತಿರೋದಿರ್ಲಿ ಅವ್ರ್ ಮುಖಾನೂ ನೋಡಿಲ್ಲ.

  ಕಥೆಗೆ ಟ್ವಿಸ್ಟ್ ಕೊಟ್ಟ ರಂಜನಿ

  ಕಥೆಗೆ ಟ್ವಿಸ್ಟ್ ಕೊಟ್ಟ ರಂಜನಿ

  'ನಮ್ಗೇನಾದ್ರು ಮಾಡ್ಬಿಡ್ತಾರಾ? ಹೊರ ರಾಜ್ಯದಲ್ಲಿ, ಗೊತ್ತಿಲ್ದೇರೋ ಗಾಡೀಲಿ ಗೊತ್ತೂ ಗುರಿ ಇಲ್ದೇ ಹೊರಟಿದ್ದೀವಿ, ಏನಪ್ಪಾ ಗತಿ ಅಂತ ಹೆದರಿಕೊಂಡು ಈ ವಿಡಿಯೋ ಮಾಡಿದ್ದು, ಕ್ರೈಮ್ ಇನ್ವೆಸ್ಟಿಗೇಶನ್ ನಡೀವಾಗ ಫ್ರೂಫ್ ಗೆ ಅಂತ ವೀಡೀಯೋ ಸಿಗುತ್ತಲ್ಲ? ಆತರ ಟೈಟಲ್ ಕಾರ್ಡ್ ಚೇಂಜ್ ಮಾಡಿ ಅಂತ ಎಲ್ರೂ ಕೇಳ್ತಿದ್ರು, ಟೈಟಲ್ ಕಾರ್ಡ್ ಅಲ್ಲಿರೋರನ್ನ ಚೇಂಜ್ ಮಾಡೋ ಪರಿಸ್ಥಿತಿ ತಂದುಕೊಂಡುಬಿಟ್ವಾ ಗುರು ಅಂತ ಹೆವೀ ಭಯ ಆಯ್ತು' ಎಂದಿದ್ದಾರೆ. ಜೊತೆಗೆ ಈ ಕಥೆಯಲ್ಲಿ ಒಂದು ಟ್ವಿಸ್ಟ್ ಕೂಡ ಇಟ್ಟಿದ್ದಾರೆ. ನಂತರ ಏನಾಯ್ತು ಎಂದು ಮುಂದಿನ ಭಾಗದಲ್ಲಿ ನಿರೀಕ್ಷಿಸಿ ಎಂದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

  English summary
  Actress Ranjani raghavan shares shooting experience of Ramoji Film city.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X