ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಕಿರುತೆರೆ ನಟಿ ರಶ್ಮಿ
ಕನ್ನಡ ಕಿರುತೆರೆಯ ಖ್ಯಾತ ನಟಿ ನಟಿ ರಶ್ಮಿ ಜಯರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ನಟಿ ರಶ್ಮಿ ಜಯರಾಜ್, ರಿಚು ಎನ್ನುವವರ ಜೊತೆ ಮೈಸೂರಿನಲ್ಲಿ ನಿಶ್ಚಿತಾರ್ಥ ಮಾಡಿದ್ದಾರೆ.
ಕುಟುಂಬದವರು ಹುಡುಕಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಶ್ಮಿಕ ಮತ್ತು ರಿಚು ನಿಶ್ಚಿತಾರ್ಥ ಸಮಾರಂಭದಲ್ಲಿ ಕುಟುಂಬದವರು ಮತ್ತ ತೀರಾ ಆಪ್ತರು ಮಾತ್ರ ಭಾಗಿಯಾಗಿದ್ದರು.
ನಟಿ ರಶ್ಮಿ ಬಣ್ಣದ ಲೋಕಕ್ಕೆ ಕಾಲಿಟ್ಟು 7 ವರ್ಷಗಳಾಗಿದೆ. ಈ ಮೊದಲು ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆ ಧಾರಾವಾಹಿಯಲ್ಲಿ ರಶ್ಮಿ ಬಣ್ಣಹಚ್ಚಿದ್ದರು. ನಾಯಕಿಯಾಗಿ ಮಿಂಚಿದ್ದ ಆಶಿಕಾ ಚಂದ್ರಪ್ಪ ತಂಗಿಯ ಪಾತ್ರದಲ್ಲಿ ರಶ್ಮಿ ಕಾಣಿಸಿಕೊಂಡಿದ್ದರು. ಬಳಿಕ ಮಧುಮಗಳು, ಜಸ್ಟಮಾತ್ ಮಾತಲ್ಲಿ, ನೀ ಹಚ್ಚಿದ ಕುಂಕುಮ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದಾರೆ. ಕನ್ನಡ ಜೊತೆಗೆ ಬೇರೆ ಬೇರೆ ಭಾಷೆಯಲ್ಲೂ ರಶ್ಮಿ ನಟಿಸಿದ್ದಾರೆ.

ಅಂದ್ಹಾಗೆ ರಶ್ಮಿ ಮದುವೆ ಆಗುತ್ತಿರುವ ಹುಡುಗ ರಿಚು ಅಮೆರಿಕದ ಫ್ಲೋರಿಡಾದಲ್ಲಿ ಪೈಲೆಟ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ಸದ್ಯ ಎಂಗೇಜ್ ಮೆಂಟ್ ಮಾಡಿಕೊಂಡಿರುವ ರಶ್ಮಿ ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ. 2021 ಫೆಬ್ರವರಿಯಲ್ಲಿ ಇಬ್ಬರ ಮದುವೆ ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಕೊರೊನಾ ಇರುವ ಕಾರಣ ಸರಳವಾಗಿ ಸಂಪ್ರದಾಯಬದ್ದವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ಚೆನ್ನೈನಲ್ಲಿ ಮದುವೆ ನಡೆದರೆ ಬೆಂಗಳೂರಿನಲ್ಲಿ ಸ್ನೇಹಿತರಿಗಾಗಿ ಪಾರ್ಟಿ ಇಟ್ಟುಕೊಳ್ಳುವ ಪ್ಲಾನ್ ಮಾಡಿದ್ದಾರೆ. ಸದ್ಯ ಹೊಸ ಜೀವನಕ್ಕೆ ಕಾಲಿಡುತ್ತಿರುವ ರಶ್ಮಿ ಈಗಾಗಲೇ ಮದುವೆ ತಯಾರಿಯಲ್ಲಿ ನಿರತರಾಗಿದ್ದಾರೆ.


Click it and Unblock the Notifications











