ಮದುವೆಯಾದ ಕಿರುತೆರೆ ನಟಿ ರಶ್ಮಿ ಪ್ರಭಾಕರ್: ವರ ಯಾರು?
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಪಾತ್ರದ ಮೂಲಕ ಮನೆ ಮಾತಾಗಿದ್ದ ರಶ್ಮಿ ಪ್ರಭಾಕರ್ ವಿವಾಹವಾಗಿದ್ದಾರೆ. ರಶ್ಮಿ ಕಲ್ಯಾಣವು ನಿನ್ನೆ ನಡೆದಿದೆ.
ಬೆಂಗಳೂರಿನ ಕನ್ವೆಶನ್ ಸೆಂಟರ್ ಒಂದರಲ್ಲಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಕಲ್ಯಾಣ ನಡೆದಿದ್ದು, ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ವಿವಾಹ ಕಾರ್ಯ ಜರುಗಿದೆ.
ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ವಿವಾಹದಲ್ಲಿ ಹಲವು ಟಿವಿ ನಟ-ನಟಿಯರು ಭಾಗವಹಿಸಿದ್ದರು. ಚಂದನ್ ಹಾಗೂ ಕವಿತಾ ಗೌಡ ಸಹ ರಶ್ಮಿಕಾ ಪ್ರಭಾಕರ್ ಮದುವೆಯಲ್ಲಿ ಪಾಲ್ಗೊಂಡಿದ್ದರು. ನವ ಜೋಡಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಚಂದನ್, ಇಬ್ಬರಿಗೂ ಶುಭ ಕೋರಿದ್ದಾರೆ.

ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೂರು ವರ್ಷಗಳ ಹಿಂದೆ ರಶ್ಮಿ ಪ್ರಭಾಕರ್ ನೃತ್ಯ ಪ್ರದರ್ಶನಕ್ಕೆಂದು ಕಾರ್ಯಕ್ರಮಕ್ಕೆ ಹೋಗಿದ್ದಾಗ ಮೊದಲಿಗೆ ನಿಖಿಲ್‌ರನ್ನು ಭೇಟಿಯಾದರಂತೆ. ಕೆಲ ಕಾಲ ಇಬ್ಬರೂ ಗೆಳೆಯರಾಗಿದ್ದರು, ಲಾಕ್‌ಡೌನ್ ಸಮಯದಲ್ಲಿ ಈ ಇಬ್ಬರೂ ಒಟ್ಟಿಗೆ ಸೇರಿ ಸಾಕಷ್ಟು ಸಾಮಾಜಿಕ ಕಾರ್ಯದಲ್ಲಿ ಸಹ ತೊಡಗಿದ್ದರು. ನಂತರ ಒಂದು ಒಳ್ಳೆಯ ದಿನ ನಿಖಿಲ್ ಮೊದಲಿಗೆ ರಶ್ಮಿಗೆ ಪ್ರೊಪೋಸ್ ಮಾಡಿದರಂತೆ, ರಶ್ಮಿ ಸಹ ಹೆಚ್ಚು ಯೋಚಿಸದೆ ಒಪ್ಪಿಕೊಂಡಿದ್ದಾರೆ.
ರಶ್ಮಿ ಹಾಗೂ ನಿಖಿಲ್ ಗೆಳೆತನದ ಬಗ್ಗೆ ಕುಟುಂಬದವರಿಗೆ ಮೊದಲೇ ಗೊತ್ತಿದ್ದ ಕಾರಣ ಎರಡೂ ಕುಟುಂಬದವರು ಖುಷಿಯಿಂದಲೇ ಇವರ ಮದುವೆಗೆ ಒಪ್ಪಿಕೊಂಡಿದ್ದಾರೆ. ''ಕಲಾವಿದರ ಜೀವನ ಹೇಗಿರುತ್ತದೆ ಎಂಬುದನ್ನು ನಿಖಿಲ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ, ಹಾಗಾಗಿ ನಾನು ಮದುವೆಯ ಬಳಿಕವೂ ಕೆಲಸ ಮಾಡುವುದರ ಬಗ್ಗೆ ನಿಖಿಲ್‌ಗೆ ಆಕ್ಷೇಪಣೆ ಇಲ್ಲ'' ಎಂದಿದ್ದಾರೆ ರಶ್ಮಿ.
ನವೆಂಬರ್ ತಿಂಗಳಿನಲ್ಲಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ರಶ್ಮಿ ಅವರು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಮದುವೆಯನ್ನು ಸರಳವಾಗಿ ಆಗಿದ್ದಾರೆ.
ಇನ್ನು ರಶ್ಮಿ ಪ್ರಭಾಕರ್ ಕನ್ನಡ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡದಲ್ಲಿ ಲಕ್ಷ್ಮೀ ಬಾರಮ್ಮ ಸಿರಿಯಲ್ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ಇನ್ನು ತೆಲುಗು ಕಿರುತೆರೆಗೂ ಪಾದಾರ್ಪಣೆ ಮಾಡುವ ಮೂಲಕ ರಶ್ಮಿ ಫೇವರೆಟ್ ನಟಿಯಾಗಿದ್ದಾಳೆ. ತೆಲುಗಿನಲ್ಲಿ 'ಕಾವ್ಯಾಂಜಲಿ' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ರಶ್ಮಿ ಪ್ರಭಾಕರ್ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದು, ಕನ್ನಡ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಯ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದ ಶುಭ ವಿವಾಹ, ಮಹಾಭಾರತ, ದರ್ಪಣ, ಜೀವನ ಚೈತ್ರ, ಮನಸೆಲ್ಲಾ ನೀನೇ, ಲಕ್ಷ್ಮೀ ಬಾರಮ್ಮ ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂತರ ರಶ್ಮಿ ಅವರಿಗೆ ಬೇರೆ ಭಾಷೆಗಳ ಕಿರುತೆರೆಗಳಲ್ಲಿ ಆಫರ್ ಗಳು ಬರಲು ಶುರುವಾದವು. ಹೀಗಾಗಿ ರಶ್ಮಿ ಅವರು ತಮಿಳು ಭಾಷೆಯಲ್ಲಿ ಅರುಂಧತಿ ಎಂಬ ಧಾರಾವಾಹಿಗೆ ಬಣ್ಣ ಹಚ್ಚಿದರು. ನಂತರ ತೆಲುಗಿನ ಪೌರ್ಣಮಿ ಹಾಗೂ ಕಾವ್ಯಾಂಜಲಿ ಧಾರಾವಾಹಿಗಳ ಭಾಗವಾದರು. ಇವಿಷ್ಟೇ ಅಲ್ಲದೇ, ಮಹಾಕಾವ್ಯ ಮತ್ತು ಬಿಬಿ5 ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











